ಮಡಿಕೇರಿ, ಮೇ ೩: ಬಿಸಿಲ ಧಗೆಗೆ ಕಂಗಲಾಗಿರುವ ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಕೆಲ ಕಾಲ ಸುರಿದ ಮಳೆ ಇಳೆಯನ್ನು ತಂಪಾಗಿಸಿತು. ಮಡಿಕೇರಿ, ಕುಶಾಲನಗರ, ಭಾಗಮಂಡಲ, ನಾಪೋಕ್ಲು, ಗೋಣಿಕೊಪ್ಪ, ಟಿ.ಶೆಟ್ಟಿಗೇರಿ, ಬಿರುನಾಣಿ, ತಾವಳಗೇರಿ, ನೆಮ್ಮಲೆ, ಬೆಳ್ಳೂರು, ಬೇಗೂರು, ಬಿ.ಶೆಟ್ಟಿಗೇರಿ, ಕುಮಟೂರು, ಕರಡ, ಪೊರಾಡ್, ಬೀರುಗ, ಬಾಡಗರಕೇರಿ, ಬಲ್ಯಮುಂಡೂರು ಮಾಯಾಮುಡಿ, ನಿಡುಗುಂಬ, ತಾಕೇರಿ, ಕಿರಗಂದೂರು, ಕಾರೆಕೊಪ್ಪ, ಬೇಳೂರು ಸೇರಿದಂತೆ ಇನ್ನಿತರ ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗಿದೆ.