ಚೆಯ್ಯಂಡಾಣೆ, ಮೇ ೩: ಸಮೀಪದ ಚೇಲಾವರದಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ಶ್ರೀ ಸ್ವಾಮಿ ಕೊರಗಜ್ಜನ ಸನ್ನಿಧಿಯಲ್ಲಿ ತಾ. ೪ ಹಾಗೂ ೫ ರಂದು ದೈವಕೋಲಗಳು ನಡೆಯಲಿವೆ.

ತಾ. ೪ರಂದು ಬೆಳಿಗ್ಗೆ ೬.೩೦ ಗಂಟೆಗೆ ಗಣಪತಿ ಪೂಜೆ, ಅಪರಾಹ್ನ ೩ ಗಂಟೆಗೆ ಭಂಡಾರ ತೆಗೆಯುವುದು, ಸಂಜೆ ೪ ಗಂಟೆಗೆ ಗುಳಿಗ ದೈವದ ಕೋಲ, ರಾತ್ರಿ ೮.೩೦ ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ೯.೩೦ ಗಂಟೆಗೆ ಪಾಷಾಣಮೂರ್ತಿ ದೈವದ ಕೋಲ, ರಾತ್ರಿ ೧೧.೩೦ ಗಂಟೆಗೆ ಮಯೊಂತಿ ದೈವದ ಕೋಲ, ತಾ. ೫ರಂದು ಬೆಳಿಗ್ಗೆ ೬ ಗಂಟೆಗೆ ಪ್ರಸಾದ ವಿತರಣೆ, ಬೆಳಿಗ್ಗೆ ೭ ಗಂಟೆಗೆ ಸ್ವಾಮಿ ಕೊರಗಜ್ಜ ದೈವದ ಕೋಲ, ಮಧ್ಯಾಹ್ನ ೧೨.೩೦ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.