ಕಣಿವೆ, ಮೇ ೩: ಕಣಿವೆ ಹಾಗೂ ಹಳೆ ಕೂಡಿಗೆ ಗ್ರಾಮಗಳ ಪಾರಂ ಪರಿಕ ಕೃಷಿಗೆ ನೀರು ಹರಿಸುತ್ತಿದ್ದ ದಂಡಿನಮ್ಮನ ಕೆರೆ ಇದೀಗ ನೀರಿಲ್ಲದೇ ಒಣಗಿ ನಿಂತಿದೆ.
ಸುಮಾರು ೩೮ ಎಕರೆ ವಿಶಾಲ ವಿಸ್ತೀರ್ಣದಲ್ಲಿರುವ ಈ ಕೆರೆ ಸುತ್ತಲೂ ಅತಿಕ್ರಮಣಕ್ಕೆ ಒಳಗಾಗಿದ್ದು ಈಗ ಕೇವಲ ಎಂಟರಿAದ ಹತ್ತು ಎಕರೆಗೆ ಬಂದಿಳಿದಿದೆ. ಆದ್ದರಿಂದ ಕೂಡಲೇ ಈ ಕೆರೆಯನ್ನು ಒತ್ತುವಾರಿ ದಾರರಿಂದ ತೆರವು ಮಾಡಿಸಬೇಕು ಹಾಗೂ ಕೆರೆಯೊಳಗೆ ತುಂಬಿರುವ ಹೂಳು ತೆಗೆಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಾರಂಗಿ ಜಲಾಶಯ ನಿರ್ಮಾ ಣದ ಪೂರ್ವದಲ್ಲಿ ಈ ಭಾಗದ ರೈತರ ಜೀವನಾಡಿಯಾಗಿದ್ದ ದಂಡಿನಮ್ಮನ ಕೆರೆ ಕಣಿವೆ ಹಾಗೂ ಹಳೆಕೂಡಿಗೆಯ ಕೃಷಿಕರ ಸುಮಾರು ೫೦ ಎಕರೆ ಭೂಮಿಗೆ ನೀರುಣಿಸುತ್ತಿತ್ತು.
ಅಲ್ಲದೇ ಕಾಡಾನೆಗಳ ನೆಚ್ಚಿನ ಕುಡಿಯುವ ನೀರಿನ ತಾಣ ಹಾಗೂ ನೀರೊಳಗೆ ಹೊರಳಾಡಿ ಮೋಜು ಮಾಡಿ ಕಾಡಿಗೆ ಮರಳುವ ತಾಣವಾಗಿತ್ತು.
ಆದರೆ, ಜಲಾಶಯ ನಿರ್ಮಾಣ ವಾದೊಡನೆ ಕೃಷಿಗೆ ಹಾರಂಗಿ ಕಾಲು ವೆಯ ನೀರು ಬಂದೊಡನೆ ಇಲ್ಲಿನ ಕೆರೆ ಕೃಷಿಕರ ಬಳಕೆಯಿಂದ ಹಿಂದೆ ಸರಿದು ಅಧೋಗತಿಗೆ ಇಳಿಯಿತು.
ಇದೀಗ ಬರ ಕಾಡುತ್ತಿರುವ ಈ ಹೊತ್ತಿನಲ್ಲಿ ಕೆರೆಯನ್ನು ಹೂಳು ತೆಗೆದು ಅಭಿವೃದ್ಧಿ ಮಾಡಿದಲ್ಲಿ ಮುಂದೆ ಸುರಿಯುವ ಮಳೆಗಾಲದ ಮಳೆಯ ನೀರಿಗೆ ಮೈದುಂಬುತ್ತದೆ. ಇದು ಭವಿಷ್ಯದಲ್ಲಿ ಜನ ಹಾಗೂ ಜಾನು ವಾರುಗಳಿಗೆ ಉಪಯುಕ್ತವಾಗುತ್ತದೆ ಎಂದು ಕೂಡಿಗೆಯ ದೇವಾಲಯ ಸಮಿತಿ ಅಧ್ಯಕ್ಷ ಮಂಜುನಾಥ್, ಸೋಮಣ್ಣ ಹಾಗೂ ಕಣಿವೆಯ ರಂಗಸ್ವಾಮಿ ಒತ್ತಾಯಿಸಿದರು.
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ಪ್ರವಾಸೋ ದ್ಯಮವನ್ನು ಉತ್ತೇಜಿಸಬಹುದು. ಪಂಚಾಯಿತಿಗೂ ಲಾಭ ಬರುತ್ತದೆ. ರೈತರ ಕೃಷಿ ಚಟುವಟಿಕೆ ಹಾಗೂ ಜಾನುವಾರುಗಳ ಕುಡಿಯುವ ನೀರಿಗೂ ಉಪಯೋಗವಾಗುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಕೂಡಲೇ ಕಾವೇರಿ ನೀರಾವರಿ ನಿಗ ಮದ ಅಧಿಕಾರಿಗಳು ಈ ಕೆರೆಯ ಹೂಳು ತೆಗೆದು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕೆಂಬುದು ರೈತರ ಆಗ್ರಹವಾಗಿದೆ.
- ಕೆ.ಎಸ್. ಮೂರ್ತಿ, ಕಣಿವೆ