ಗೋಣಿಕೊಪ್ಪ ವರದಿ, ಮೇ ೪ : ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ೯ ತಂಡಗಳು ಗೆಲುವು ಪಡೆದುಕೊಂಡವು.

ಮಹಿಳಾ ವಿಭಾಗ : ನಾಗಂಡಕ್ಕೆ ತೀತಮಾಡ ವಿರುದ್ಧ ೧ ರನ್‌ಗಳ ರೋಚಕ ಗೆಲುವು ದಕ್ಕಿತು. ನಾಗಂಡ ೧ ವಿಕೆಟ್ ಕಳೆದುಕೊಂಡು ೪೫ ರನ್, ತೀತಮಾಡ ೩ ವಿಕೆಟ್ ಕಳೆದುಕೊಂಡು ೪೪ ರನ್ ಗಳಿಸಿತು. ನಾಗಂಡ ರಿಶಾ ೧೭ ರನ್, ತೀತಮಾಡ ಸುಜಿತಾ ೧೪ ರನ್ ಗಳಿಸಿದರು.

ಅಳಮೇಂಗಡ ತಂಡಕ್ಕೆ ಅಚ್ಚಪಂಡ ವಿರುದ್ಧ ೪ ರನ್‌ಗಳ ಗೆಲುವು ದೊರೆಯಿತು. ಅಳಮೇಂಗಡ ೧ ವಿಕೆಟ್ ನಷ್ಟಕ್ಕೆ ೩೭ ರನ್, ಅಚ್ಚಪಂಡ ೨ ವಿಕೆಟ್ ನಷ್ಟಕ್ಕೆ ೩೩ ರನ್ ದಾಖಲಿಸಿತು. ಅಳಮೇಂಗಡ ಭವ್ಯ ದರ್ಶನ್ ೧೬ ರನ್, ಅಚ್ಚಪಂಡ ಪಲ್ಲವಿ ೧ ವಿಕೆಟ್, ಲಾಂಚನ ೧೭ ರನ್ ಅಳಮೇಂಗಡ ಶಶಿ ೨ ವಿಕೆಟ್ ಕಬಳಿಸಿದರು.

ಮಣವಟ್ಟಿರ ತಂಡವು ಕೇಲೇಟಿರ ವಿರುದ್ಧ ೧೮ ರನ್‌ಗಳ ಗೆಲುವು ಪಡೆಯಿತು. ಮಣವಟ್ಟಿರ ೨ ವಿಕೆಟ್ ನಷ್ಟಕ್ಕೆ ೪೧ ರನ್, ಕೇಲೇಟಿರ ೩ ವಿಕೆಟ್‌ಗೆ ೨೩ ರನ್ ಗಳಿಸಿತು. ಕೇಲೇಟಿರ ಮನಿಷಾ ೧೨ ರನ್, ಮಣವಟ್ಟಿರ ಸಮೃತಿ ೧ ವಿಕೆಟ್ ಪಡೆದರು.

ಪುರುಷರ ವಿಭಾಗ : ಕೊಟ್ಟಂಗಡ ತಂಡಕ್ಕೆ ಅಣ್ಣೀರ ವಿರುದ್ಧ ೧೦ ವಿಕೆಟ್ ಜಯ ಲಭಿಸಿತು. ಅಣ್ಣೀರ ೫ ವಿಕೆಟ್ ನಷ್ಟಕ್ಕೆ ೪೮ ರನ್ ಗಳಿಸಿತು. ಕೊಟ್ಟಂಗಡ ೩.೩ ಒವರ್‌ಗಳಲ್ಲಿ ಗುರಿ ಮುಟ್ಟಿತು. ಕೊಟ್ಟಂಗಡ ರಂಜು ೩೦ ರನ್, ಪ್ರಥಮ್ ೧೬ ರನ್, ಅಣ್ಣೀರ ಪುನೀತ್ ೯ ರನ್ ದಾಖಲಿಸಿದರು.

ಆಟ್ರಂಗಡ ೨೫ ರನ್‌ಗಳಿಂದ ಕೈಪಟ್ಟೀರವನ್ನು ಸೋಲಿಸಿತು. ಆಟ್ರಂಗಡ ೩ ವಿಕೆಟ್ ನಷ್ಟಕ್ಕೆ ೧೪೦ ರನ್, ಕೈಪಟ್ಟೀರ ೩ ವಿಕೆಟ್‌ಗೆ ೧೧೫ ರನ್ ದಾಖಲಿಸಿತು. ಆಟ್ರಂಗಡ ನಿತಿನ್ ೫೭ ರನ್, ಶರತ್ ೪೭ ರನ್, ಕೈಪಟ್ಟಿರ ಗಗನ್ ೬೩ ರನ್ ಹೊಡೆದರು. ಮೂಕಳೆರಕ್ಕೆ ಕಲಿಯಂಡ ವಿರುದ್ಧ ೮೮ ರನ್‌ಗಳ ಗೆಲುವು ದೊರೆಯಿತು. ಮೂಕಳೇರ ೨ ವಿಕೆಟ್ ನಷ್ಟಕ್ಕೆ ೧೩೮ ರನ್, ಕಲಿಯಂಡ ೭ ವಿಕೆಟ್‌ಗೆ ೪೦ ರನ್ ಗಳಿಸಿತು. ಮೂಕಳೆರ ಅಜಿತ್ ದೇವಯ್ಯ ೬೫, ಕಲಿಯಂಡ ಸಂಕೇತ್ ೧೩ ರನ್, ಪೆಮ್ಮಯ್ಯ ೩ ವಿಕೆಟ್ ಪಡೆದರು.

ನಾಟೋಳಂಡಕ್ಕೆ ಚೋಡುಮಾಡ ವಿರುದ್ಧ ೫ ವಿಕೆಟ್ ಜಯ ಲಭಿಸಿತು. ಚೋಡುಮಾಡ ೮ ವಿಕೆಟ್‌ಗೆ ೫೮ ರನ್, ನಾಟೋಳಂಡ ೫ ವಿಕೆಟ್ ಕಳೆದುಕೊಂಡು ಗುರಿ ಸಾಧನೆ ಮಾಡಿತು.

ಪಾರುವಂಗಡ (ಮಾಡಿಮನೆ) ತಂಡವು ಬೊಪ್ಪಡ್ತಂಡವನ್ನು ೯ ವಿಕೆಟ್‌ಗಳಿಂದ ಮಣಿಸಿತು. ಬೊಪ್ಪಡ್ತಂಡ ೫ ವಿಕೆಟ್ ನಷ್ಟಕ್ಕೆ ೮೧ ರನ್, ಪಾರುವಂಗಡ ೧ ವಿಕೆಟ್ ಕಳೆದುಕೊಂಡು ಗುರಿ ಸಾಧನೆ ಮಾಡಿತು.

ಬಲ್ಲಂಡ ತಂಡವು ಕಾಟಿಮಾಡವನ್ನು ೭೮ ರನ್‌ಗಳಿಂದ ಸೋಲಿಸಿತು. ಬಲ್ಲಂಡ ೩ ವಿಕೆಟ್ ನಷ್ಟಕ್ಕೆ ೧೬೬ ರನ್, ಕಾಟಿಮಾಡ ೨ ವಿಕೆಟ್ ನಷ್ಟಕ್ಕೆ ೮೮ ರನ್ ಗಳಿಸಿತು. ಬಲ್ಲಂಡ ಪ್ರದೀಪ್ ೫೦, ಉದಯ್ ೬೪ ರನ್ ದಾಖಲಿಸಿದರು.

ಪಂದ್ಯ ಶ್ರೇಷ್ಠರು: ಅಣ್ಣೀರ ಪುನಿತ್, ಕೈಪಟೀರ ಗಗನ್ ಕುಟ್ಟಪ್ಪ, ಕಲಿಯಂಡ ಸಂಕೇತ್, ಚೋಡುಮಾಡ ಗಗನ್, ಬೊಪ್ಪಡ್ತಂಡ ರಂಜು, ಕಾಟಿಮಾಡ ರಾಜೇಶ್, ತೀತಮಾಡ ಸುಜಿತಾ, ಅಚ್ಚಪಂಡ ಲಾಂಚನ, ಕೇಲೇಟಿರ ಸ್ಮೃತಿ.