ಮಡಿಕೇರಿ, ಮೇ ೩ : ವೀರಾಜಪೇಟೆ ಶಿವಕೇರಿಯಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಶ್ರೀ ಆದಿ ದಂಡಿನ ಮಾರಿಯಮ್ಮ ಮತ್ತು ಶ್ರೀ ಚಾಮುಂಡಿ (ಚೌಂಡಿ) ದೇವರ ಉತ್ಸವವು ತಾ. ೭ ರಿಂದ ೧೦ರ ವರೆಗೆ ನಡೆಯಲಿದೆ.

ದೇವಾಲಯದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿವೆ. ತಾ ೭ ರಂದು ಪ್ರಾತಃಕಾಲ ೬ ಗಂಟೆಗೆ ಗಣಪತಿ ಹೋಮ, ಬೆಳಿಗ್ಗೆ ೮.೩೦ ಗಂಟೆಗೆ ಕಳಸ ಪೂಜೆ, ಮಧ್ಯಾಹ್ನ ೧೨ ಗಂಟೆಗೆ ದೇವಿಗೆ ಹೂವಿನ ಅಲಂಕಾರದೊAದಿಗೆ ಮಹಾಪೂಜೆ ಮತ್ತು ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ ೧ ಗಂಟೆಗೆ ಅನ್ನದಾನ ನೆರವೇರಲಿದೆ.

ಅಪರಾಹ್ನ ೨ ಗಂಟೆಗೆ ದೇವರ ಪಲ್ಲಕ್ಕಿಯನ್ನು ಅಲಂಕೃತ ಮಂಟಪದೊAದಿಗೆ ವೀರಾ ಜಪೇಟೆಯ ಮುಖ್ಯಬೀದಿ ಯಲ್ಲಿ ಮೆರವಣಿಗೆ ನಡೆಯಲಿದ್ದು, ರಾತ್ರಿ ೯ ಗಂಟೆಗೆ ತಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ಜರುಗಲಿದೆ.

ರಾತ್ರಿ ೧೦ ಗಂಟೆಗೆ ಆರತಿ ಪೂಜೆ, ಮಹಾಪೂಜೆ ಹಾಗೂ ಮಂಗಳಾರತಿ ನೆರವೇರಲಿದೆ. ತಾ. ೮ ರಂದು ಬೆಳಿಗ್ಗೆ ೧೦ ಗಂಟೆಗೆ ಪೂಜೆ, ಮಧ್ಯಾಹ್ನ ೧೨ ಗಂಟೆಗೆ ನೈವೇದ್ಯ ಪೂಜೆ, ಮಧ್ಯಾಹ್ನ ೧ ಗಂಟೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. ತಾ. ೧೦ ರಂದು ಬೆಳಿಗ್ಗೆ ೧೧ ಗಂಟೆಗೆ ಪೂಜೆ ಆರಂಭಗೊಳ್ಳಲಿದ್ದು, ಅಪರಾಹ್ನ ೨ ಗಂಟೆಗೆ ಮಹಾಪೂಜೆ, ಮಂಗಳಾರತಿ ಜರುಗಲಿದೆ. ತಾ. ೧೨ ರಂದು ಮಧ್ಯಾಹ್ನ ೩ ಗಂಟೆಗೆ ಗುಳಿಗನ ಪೂಜೆ ನಡೆಯಲಿದೆ.