ಕೂಡಿಗೆ, ಮೇ ೩: ಬೆಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ೨೦೨೪-೨೫ನೇ ಸಾಲಿನ ಕ್ರೀಡಾ ಶಾಲೆ/ ವಸತಿ ನಿಲಯಗಳ ರಾಜ್ಯಮಟ್ಟದ ಅಂತಿಮ ಪರಿಶೀಲನಾ ಪ್ರವೇಶ ಆಯ್ಕೆ ಶಿಬಿರವು ಕೂಡಿಗೆ ಸರಕಾರಿ ಕ್ರೀಡಾ ಶಾಲೆಯಲ್ಲಿ ಆರಂಭಗೊAಡಿದೆ.
ರಾಜ್ಯಮಟ್ಟದ ಹಾಕಿ ಮತ್ತು ಫುಟ್ಬಾಲ್ ವಿಭಾಗದಲ್ಲಿ ರಾಜ್ಯದ ಕ್ರೀಡಾ ಶಾಲೆಯ ನಿಲಯಗಳಿಗೆ ಪದವಿಪೂರ್ವ ತರಗತಿಗಳಿಗೆ ಆಯ್ಕೆ ಪ್ರಕ್ರಿಯೆ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ನಡೆಯಿತು.
ಕ್ರೀಡಾ ಶಿಬಿರದಲ್ಲಿ ಹಿರಿಯರ ಹಾಕಿ ವಿಭಾಗದಲ್ಲಿ ಬಾಲಕರು ೪೩, ಬಾಲಕಿಯರು ೧೬, ಫುಟ್ಬಾಲ್ ವಿಭಾಗದಲ್ಲಿ ೩೭ ವಿದ್ಯಾರ್ಥಿಗಳು ನೋಂದಣಿಯಾಗಿ ಶಿಬಿರದಲ್ಲಿ ಭಾಗವಹಿಸಿದ್ದಾರೆ.
ಈ ಸಂದರ್ಭ ಶಿಬಿರದ ಸಂಚಾಲಕ ಹಾಗೂ ಹಾಕಿ ತರಬೇತುದಾರ ಬಿ.ಎಸ್. ವೆಂಕಟೇಶ್, ಹಾಕಿ ತರಬೇತುದಾರ ಜಾಕೀರ್, ಸುಂದರೇಶ್, ರವೀಶ್, ಕೋಟ್ರೇಶ್, ಸುಬ್ಬಯ್ಯ, ಸಂಜಯ್ ಪಾಣೇತ್, ವಿಜಯ ಕೃಷ್ಣ, ಗೋಪಾಲ್, ಕೃಷ್ಣ, ಮುಸದ್, ಶಾಂತಿ ಸೇರಿದಂತೆ ವಿವಿಧ ವಿಭಾಗದ ತರಬೇತುದಾರರು ಹಾಜರಿದ್ದರು.