ಸಿದ್ದಾಪುರ, ಮೇ ೨: ಆರೋಗ್ಯವಾಗಿದ್ದರೂ ಕೆಲವರು ಮತದಾನದಿಂದ ದೂರ ಉಳಿಯುತ್ತಾರೆ. ಆದರೆ ಸಿದ್ದಾಪುರದಲ್ಲಿ ಮೂವರು ಆರೋಗ್ಯ ಸಮಸ್ಯೆಯಿಂದ ಎದ್ದು ನಡೆದಾಡಲು ಸಾಧ್ಯವಾಗದಿದ್ದರೂ ಮತದಾನ ಮಾಡಬೇಕೆನ್ನುವ ಆಸೆಯಿಂದ ಆಂಬ್ಯುಲೆನ್ಸ್ವೊAದರ ಸಹಕಾರ ಪಡೆದು ಸ್ಟೆçಚ್ಚರ್ನಲ್ಲಿ ಬಂದು ಮತ ಚಲಾಯಿಸಿ ಮಾದರಿಯಾಗಿದ್ದಾರೆ.
ಸಿದ್ದಾಪುರ ನಿವಾಸಿಯಾಗಿದ್ದ ವ್ಯಕ್ತಿಯೊಬ್ಬರು ಆರೋಗ್ಯ ಸಮಸ್ಯೆಯಿಂದ ಅಮ್ಮತ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಮತ್ತೆ ಇಬ್ಬರು ಮೈಸೂರು ರಸ್ತೆಯ ಮನೆಯಲ್ಲಿಯೇ ಆರೋಗ್ಯ ಸಮಸ್ಯೆಯಿಂದ ಎದ್ದು ನಡೆದಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಮತದಾನದಲ್ಲಿ ಭಾಗವಹಿಸಬೇಕೆಂದು ಜೊತೆಯಲ್ಲಿದ್ದವರಿಗೆ ತಿಳಿಸಿದರು. ತಕ್ಷಣ ಸಿದ್ದಾಪುರ ಎಸ್ಕೆಎಸ್ಎಸ್ಎಫ್ ಸಂಘಟನೆಯ ಆಂಬ್ಯುಲೆನ್ಸ್ ಅಸ್ಕರ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹುಸೈನ್ ಎಂಬವರಿಗೆ ಮಾಹಿತಿ ನೀಡಿದ್ದರು.
ತಕ್ಷಣ ಆಂಬ್ಯುಲೆನ್ಸ್ನೊAದಿಗೆ ಆಸ್ಪತ್ರೆ ಹಾಗೂ ಮನೆಗೆ ತೆರಳಿ ಆರೋಗ್ಯ ಸಮಸ್ಯೆಯಲ್ಲಿದ್ದವರನ್ನು ಸ್ಟೆçಚ್ಚರ್ ಮೂಲಕ ಕರೆತಂದು ಸಿದ್ದಾಪುರ ಜಿಎಂಪಿ ಶಾಲೆ ಹಾಗೂ ಸಂತ ಅನ್ನಮ್ಮ ಶಾಲೆಯ ಮತ ಕೇಂದ್ರದಲ್ಲಿ ಮತದಾನ ಮಾಡಿಸಿ ಮಾದರಿಯಾಗಿದ್ದಾರೆ. - ಎಸ್.ಎಂ. ಮುಬಾರಕ್