ಕಣಿವೆ, ಮೇ ೩: ಕಾಗೆ ಹಾಗೂ ಕೋಳಿಗಳು ಆಹಾರ ಕಂಡರೆ ತನ್ನ ಬಳಗವನ್ನು ಕೂಗಿ ಕರೆದು ಅವು ಗಳಿಗೂ ನೀಡಿ ತಾವು ತಿಂದುAಡು ಸಂತೋಷವಾಗಿರುತ್ತವೆ.
ಹಾಗೆಯೇ ಬೆಳ್ಳಕ್ಕಿಗಳು ಕೂಡ ಅದೆಲ್ಲಿ ಕಾದು ಕುಳಿತಿರುತ್ತವೋ ಏನೋ ರೈತರು ಹೊಲ ಗದ್ದೆಗಳ ಉಳುಮೆ ಮಾಡಿದರೆ ಸಾಕು ಕ್ಷಣಾರ್ಧದಲ್ಲಿ ಅಲ್ಲಿಗೆ ಧಾವಿಸಿ ಬರುತ್ತವೆ. ಒಂದೊAದಾಗಿ ಹಾರಿ ಬರುವ ಈ ಬೆಳ್ಳಕ್ಕಿಯ ಹಿಂಡನ್ನು ನೋಡುವುದೇ ಒಂದು ಆನಂದ. ಅನ್ನದಾತನು ತಾನು ಉಳುವ ಎತ್ತಿನ ನೀಗಿಲ ಸಾಲಿನಲ್ಲಿ ಸಾಲು ಸಾಲಾಗಿ ಸಾಗುವ ಬೆಳ್ಳಕ್ಕಿಗಳು ಮಣ್ಣಿನೊಳಗಿನ ಹುಳ ಹುಪ್ಪಟೆಗಳನ್ನು ತಿನ್ನುತ್ತವೆ. ಈ ಬೆಳ್ಳಕ್ಕಿಗಳು ಉಳುವ ರೈತನಿಗೆ ಎಷ್ಟರ ಮಟ್ಟಿಗೆ ಹೊಂದಿಕೊAಡಿರುತ್ತವೆ ಎಂದರೆ ನಿರ್ಭಯವಾಗಿ ಆತನ ಕಾಲು ಬುಡದಲ್ಲೇ ಸಾಗುತ್ತವೆ. ಜೊತೆಗೆ ಎತ್ತುಗಳ ಹೆಜ್ಜೆಗಳೊಂದಿಗೂ ಇವು ಕೂಡ ಹೆಜ್ಜೆ ಹಾಕುತ್ತಾ ಸ್ನೇಹಮಯವಾಗಿರುತ್ತವೆ.
ಇತ್ತೀಚಿನ ವರ್ಷಗಳಲ್ಲಿ ಕೃಷಿಕರು ಬೆಳೆಯುವ ಜೋಳ, ರಾಗಿ, ಭತ್ತ, ಶುಂಠಿ ಮೊದಲಾದ ಫಸಲುಗಳಿಗೆ ಬೆಳವಣಿಗೆಯ ಹಂತದಲ್ಲಿ ಆ ಬೆಳೆಗಳನ್ನು ಕಾಡುವ ಕೀಟಗಳನ್ನು ನಿಯಂತ್ರಿಸಲು ರಸಾಯನಿಕ ಔಷಧಿಗಳನ್ನು ಸಿಂಪಡಿಸುವ ಕಾರಣ ಕೀಟಗಳ ‘ಚೈನ್ ಲಿಂಕ್’ ನಾಶವಾಗುತ್ತಿದೆ. ಆದ್ದರಿಂದಲೇ ಬೆಳ್ಳಕ್ಕಿಗಳು ಕೂಡ ತಮ್ಮ ಆಹಾರದ ಮುಖ್ಯ ಭಾಗವಾದ ಹುಳುಗಳನ್ನು ತಿನ್ನಲು ಹೊಲ ಗದ್ದೆಗಳಿಗೆ ಧಾವಿಸುವುದು ವಿಶೇಷ.
ಈ ಬೆಳ್ಳಕ್ಕಿಗಳು ಅದೆಲ್ಲಿ ಇರುತ್ತವೋ ಏನೋ ರೈತರು ಎತ್ತುಗಳು ಅಥವಾ ಟ್ರಾಕ್ಟರ್ಗಳಿಂದ ಭೂಮಿ ಉಳುಮೆ ಮಾಡಿದರೆ ಸಾಕು ಆಹ್ವಾನ ಕೊಟ್ಟು ಕರೆದವರಂತೆ ಗುಂಪು ಗುಂಪಾಗಿ ರೈತನಲ್ಲಿಗೆ ಧಾವಿಸಿ ಬಂದು ಹೊಟ್ಟೆ ತುಂಬಿಸಿಕೊಳ್ಳುವ ಪರಿ ಮಾತ್ರ ಅಚ್ಚರಿ.
- ಕೆ.ಎಸ್. ಮೂರ್ತಿ, ಕಣಿವೆ