ಮಡಿಕೇರಿ, ಮೇ ೨ : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲ ದಿನ ನಡೆದ ಟೀಮ್ ಕೊಡವ ಟ್ರೆöÊಬ್ ಮತ್ತು ಕೂರ್ಗ್ ಬ್ಲಾಸ್ರ‍್ಸ್ ತಂಡಗಳ ನಡುವಿನ ರೋಚಕ ಪಂದ್ಯದಲ್ಲಿ ಕೂರ್ಗ್ ಬ್ಲಾಸ್ರ‍್ಸ್ ತಂಡ ೪ ವಿಕೆಟ್‌ಗಳ ಗೆಲುವನ್ನು ದಾಖಲಿಸಿತು.

ಮೊದಲು ಬ್ಯಾಟ್ ಮಾಡಿದ ಕೊಡವ ಟ್ರೆöÊಬ್ ತಂಡ ನಿಗದಿತ ೨೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೫೭ ರನ್ ಮಾಡುವ ಮೂಲಕ ಎದುರಾಳಿ ತಂಡಕ್ಕೆ ೧೫೮ ರನ್‌ಗಳ ಗೆಲುವಿನ ಗುರಿಯನ್ನು ನೀಡಿತು. ಇದಕ್ಕೆ ಪ್ರತಿಯಾಗಿ ಕೂರ್ಗ್ ಬ್ಲಾಸ್ರ‍್ಸ್ ತಂಡ ೧೭.೪ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೬೦ ರನ್‌ಗಳನ್ನು ಕಲೆ ಹಾಕುವ ಮೂಲಕ ಗೆಲುವು ಸಾಧಿಸಿತು.

ವಿಜೇತ ತಂಡದ ಪರವಾಗಿ ಆಲ್ ರೌಂಡ್ ಆಟದ ಪ್ರದರ್ಶನ ನೀಡಿದ ಕಾರ್ತಿಕ್ ಅವರು ೧೪ ಎಸೆತಗಳಲ್ಲಿ ೪೪ ರನ್‌ಗಳನ್ನು ಗಳಿಸಿದರು. ಅಲ್ಲದೆ ತಮ್ಮ ಬೌಲಿಂಗ್ ಮೂಲಕ ಮೊದಲ ಸರದಿಯಲ್ಲಿ ಬ್ಯಾಟ್ ಮಾಡಿದ ಕೊಡವ ಟ್ರೆöÊಬ್ ತಂಡದ ಮೂರು ವಿಕೆಟ್ ಹಾಗೂ ೧೮ ರನ್ ನೀಡುವ ಮೂಲಕ ಕಬಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ ಲೆದರ್ ಬಾಲ್ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ತಾ. ೨ರ ದಿನದ ಮೊದಲ ಪಂದ್ಯದಲ್ಲಿ ರಾಯಲ್ ಟೈರ‍್ಸ್ ತಂಡ ಭರ್ಜರಿ ಗೆಲುವು ದಾಖಲಿಸಿ ಪೂರ್ಣ ಅಂಕಗಳನ್ನು ಪಡೆದುಕೊಂಡಿತು. ರಾಯಲ್ ಟೈರ‍್ಸ್ ತಂಡ ೭ ವಿಕೆಟ್‌ಗಳ ಅಂತರದಿAದ ಎದುರಾಳಿ ಟೀಂ ವೈಲ್ಡ್ಫ್ಲಾರ್ ತಂಡವನ್ನು ಪರಾಭವಗೊಳಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ವೈಲ್ಡ್ ಫ್ಲಾರ್ ತಂಡ ನಿಗದಿತ ಇಪ್ಪತ್ತು ಓವರ್‌ಗಳಲ್ಲಿ ೧೮ ಓವರ್‌ಗಳಲ್ಲೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ೧೩೧ ರನ್‌ಗಳನ್ನು ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ರಾಯಲ್ ಟೈರ‍್ಸ್ ತಂಡ ೧೧.೨ ಓವರ್‌ಗಳಲ್ಲೇ ೧೩೨ ರನ್‌ಗಳನ್ನು ಗಳಿಸುವ ಮೂಲಕ ಸುಲಭ ಗೆಲುವನ್ನು ಸಾಧಿಸಿತು.

ವಿಜೇತ ರಾಯಲ್ ಟೈರ‍್ಸ್ ತಂಡದ ಅಪ್ಪಯ್ಯ ಅವರು ೨೩ ರನ್ ನೀಡಿ ಎರುರಾಳಿ ವೈಲ್ಡ್ ಫ್ಲಾರ್ ತಂಡದ ರನ್ ಓಟಕ್ಕೆ ಕಡಿವಾಣ ಹಾಕಿದ್ದಲ್ಲದೆ, ಬ್ಯಾಟಿಂಗ್‌ನಲ್ಲಿ ೧೨ ಎಸೆತಕ್ಕೆ ಮಿಂಚಿನ ೧೭ ರನ್ ಕಲೆ ಹಾಕಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ದ್ವಿತೀಯ ಪಂದ್ಯದಲ್ಲಿ ಕೊಡವ ವಾರಿರ‍್ಸ್ ತಂಡ ೧೧ ರನ್‌ಗಳ ಅಲ್ಪ ಅಂತರದ ಗೆಲುವನ್ನು ಟೀಂ ಲೀವರೇಜ್ ತಂಡದ ವಿರುದ್ಧ ಸಾಧಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಕೊಡವ ವಾರಿರ‍್ಸ್ ತಂಡ ೨೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೧೧೨ ರನ್‌ಗಳನ್ನು ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಟೀಂ ಲೀವರೇಜ್ ತಂಡ ನಿಗದಿತ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೦೧ ರನ್‌ಗಳನ್ನಷ್ಟೆ ಕಲೆಹಾಕಲು ಶಕ್ತವಾಗಿ, ಗೆಲುವಿನ ಸಮೀಪಕ್ಕೆ ಬಂದು ಪರಾಭವಗೊಂಡು ನಿರಾಸೆ ಅನುಭವಿಸಿತು.

ಕೊಡವ ವಾರಿರ‍್ಸ್ ತಂಡದ ಸಜನ್ ನಂದೀರ ಅವರು ಬಿಗುವಿನ ಬೌಲಿಂಗ್ ಪ್ರದರ್ಶನ ನೀಡಿ, ಕೇವಲ ೧೨ ರನ್‌ಗಳನ್ನಿತ್ತು ೩ ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಕಾರಣರಾಗುವ ಮೂಲಕ ಪಂದ್ಯ ಪುರುಷೋತ್ತಮರಾಗಿ ಹೊರ ಹೊಮ್ಮಿದರು.