ಗೋಣಿಕೊಪ್ಪ ವರದಿ, ಮೇ ೩ : ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ೨೦ ತಂಡಗಳು ಗೆಲುವಿನ ಮುನ್ನಡೆ ಕಾಯ್ದುಕೊಂಡಿವೆ.
ಮಹಿಳಾ ವಿಭಾಗ : ಕೇಲೇಟಿರ ತಂಡಕ್ಕೆ ತಾಚಮಂಡ ವಿರುದ್ಧ ೮ ವಿಕೆಟ್ ಜಯ ದೊರೆಯಿತು. ತಾಚಮಂಡ ೩ ಕ್ಕೆ ೨೯ ರನ್, ಕೇಲೇಟಿರ ೨ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಮುಕ್ಕಾಟೀರ (ಹರಿಹರ-ಬೆಳ್ಳೂರು) ತಂಡವು ಪೆಬ್ಬಟ್ಟೀರವನ್ನು ೩೭ ರನ್‌ಗಳಿಂದ ಸೋಲಿಸಿತು. ಮುಕ್ಕಾಟಿರ ವಿಕೆಟ್ ನಷ್ಟವಿಲ್ಲದೆ ೭೦ ರನ್ ಗುರಿ ನೀಡಿತು. ಪೆಬ್ಬಟ್ಟೀರ ೭ ವಿಕೆಟ್ ಕಳೆದುಕೊಂಡು ೩೩ ಕ್ಕೆ ಕುಸಿಯಿತು.
ತೀತಮಾಡ ಸೂಪರ್ ಓವರ್‌ನಲ್ಲಿ ೨ ರನ್‌ಗಳ ಮೂಲಕ ಬಾದುಮಂಡವನ್ನು ಮಣಿಸಿತು. ಸೂಪರ್ ಓವರ್‌ನಲ್ಲಿ ತೀತಮಾಡ ೧೨ ರನ್ ದಾಖಲಿಸಿತು. ಬಾದುಮಂಡ ೧೦ ರನ್ ಹೊಡೆದು ಸೋಲಿಗೆ ಶರಣಾಯಿತು. ಪಂದ್ಯದ ನಿಗದಿತ ಸಮಯದಲ್ಲಿ ಬಾದುಮಂಡ ೨ ವಿಕೆಟ್ ನಷ್ಟಕ್ಕೆ ೫೦ ರನ್ ಗುರಿ ನೀಡಿತು. ತೀತಮಾಡ ವಿಕೆಟ್ ನಷ್ಟವಿಲ್ಲದೆ ಡ್ರಾ ಮಾಡಿಕೊಂಡಿತು.
ಮಾಳೇಟಿರ (ಕೆದಮುಳ್ಳೂರು) ಮಾಪಣಮಾಡ ವಿರುದ್ಧ ೨೩ ರನ್‌ಗಳ ಜಯ ಸಾಧಿಸಿತು. ಮಾಳೇಟಿರ ೨ ವಿಕೆಟ್ ನಷ್ಟಕ್ಕೆ ೪೮ ರನ್, ಮಾಪಣಮಾಡ ೩ ವಿಕೆಟ್ ಕಳೆದುಕೊಂಡು ೨೫ ಕ್ಕೆ ಕುಸಿಯಿತು. ಮಾಳೇಟೀರ ಸಾಹಿತ್ಯ ೨೦, ಮಾಪಣಮಾಡ ದಿಪಿನಾ ೧೦ ರನ್, ಕವಿತಾ ೨ ವಿಕೆಟ್ ಕಬಳಿಸಿದರು.
ಅತಿಥೇಯ ಅರಮಣಮಾಡ ತಂಡಕ್ಕೆ ಕಳಕಂಡ ವಿರುದ್ಧ ೮ ವಿಕೆಟ್ ಗೆಲುವು ದೊರೆಯಿತು. ಕಳಕಂಡ ವಿಕೆಟ್ ನಷ್ಟವಿಲ್ಲದೆ ೫೫ ರನ್, ಅರಮಣಮಾಡ ೨ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಕಳಕಂಡ ಕಾವ್ಯ ೨೬ ರನ್, ೧ ವಿಕೆಟ್ ಪಡೆದರು. ಅರಮಣಮಾಡ ಟೀನಾ ೩೦ ರನ್ ಸಿಡಿಸಿದರು. ಅಜ್ಜಿಕುಟ್ಟೀರಕ್ಕೆ ಕಂಬೀರAಡ ವಿರುದ್ದ ೧೩ ರನ್‌ಗಳ ಜಯ ದೊರೆಯಿತು. ಅಜ್ಜಿಕುಟ್ಟೀರ ೧ ವಿಕೆಟ್‌ಗೆ ೪೦ ರನ್, ಕಂಬೀರAಡ ೨ ವಿಕೆಟ್‌ಗೆ ೨೭ ರನ್ ದಾಖಲಿಸಿತು.
ಪುರುಷರ ವಿಭಾಗ
ಕೂತಂಡಕ್ಕೆ ಚೀರಂಡ ವಿರುದ್ದ ೭೯ ರನ್‌ಗಳ ಜಯ ದೊರೆಯಿತು. ಕೂತಂಡ ೧ ವಿಕೆಟ್ ನಷ್ಟಕ್ಕೆ ದೀಪಲ್ ಪೂಣಚ್ಚ ಬಾರಿಸಿದ ೪೧ ರನ್, ಬೋಪಣ್ಣ ೩೫ ರನ್‌ಗಳ ನೆರವಿನಿಂದ ೧೨೩ ರನ್ ಗುರಿ ನೀಡಿತು. ಚೀರಂಡ ೬ ವಿಕೆಟ್ ಕಳೆದುಕೊಂಡು ೪೩ ರನ್ ಗಳಿಸಿತು.
ಚೋನೀರ ತಂಡವು ೯ ವಿಕೆಟ್‌ಗಳಿಂದ ಮಂದೇಯAಡವನ್ನು ಮಣಿಸಿತು. ಮಂದೇಯAಡ ೫ ವಿಕೆಟ್‌ಗೆ ೫೯ ರನ್, ಚೋನೀರ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಚೋನೀರ ಉಡುವೇರವನ್ನು ೧೦ ವಿಕೆಟ್‌ಗಳಿಂದ ಸೋಲಿಸಿತು. ಉಡುವೇರ ೪ ವಿಕೆಟ್ ಕಳೆದುಕೊಂಡು ೪೨ ರನ್‌ಗಳ ಗುರಿ ನೀಡಿತು. ಚೋನೀರ ೨.೩ ಒವರ್‌ಗಳಲ್ಲಿ ಪಂದ್ಯ ಮುಗಿಸಿತು. ಮನೆಯಪಂಡಕ್ಕೆ ನೆಲ್ಲೀರ ವಿರುದ್ಧ ೧೦ ರನ್‌ಗಳ ಜಯ ದೊರೆಯಿತು. ಮನೆಯಪಂಡ ೩ ವಿಕೆಟ್‌ಗೆ ೧೦೪ ರನ್, ನೆಲ್ಲೀರ ೬ ವಿಕೆಟ್ ಕಳೆದುಕೊಂಡು ೯೪ ರನ್ ದಾಖಲಿಸಿತು.
ಚೇನಂಡಕ್ಕೆ ಅಪ್ಪಂಡೇರAಡ ವಿರುದ್ದ ೭ ವಿಕೆಟ್ ಗೆಲುವು ದೊರೆಯಿತು. ಅಪ್ಪಂಡೇರAಡ ೫ ವಿಕೆಟ್‌ಗೆ ೭೮ ರನ್, ಚೇನಂಡ ೩ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಬಾದುಮಂಡಕ್ಕೆ ಚೆಪ್ಪುಡಿರ ವಿರುದ್ಧ ೧೭ ರನ್‌ಗಳ ಜಯ ದೊರೆಯಿತು. ಬಾದುಮಂಡ ೨ ವಿಕೆಟ್‌ಗೆ ೭೭ ರನ್, ಚೆಪ್ಪುಡೀರ ೭ ವಿಕೆಟ್‌ಗೆ ೬೧ ರನ್ ಗಳಿಸಿಸಿತು.
ಕೊಚ್ಚೇರ ಅಜ್ಜಮಾಡವನ್ನು ೯ ವಿಕೆಟ್‌ಗಳಿಂದ ಸೋಲಿಸಿತು. ಅಜ್ಜಮಾಡ ೨ ವಿಕೆಟ್ ಕಳೆದುಕೊಂಡು ೬೩ ರನ್ ಗುರಿ ನೀಡಿತು. ಕೊಚ್ಚೇರ ೧ ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ಮುಟ್ಟಿತು. ಶಾಂತೇಯAಡ ಗೈರಿನಿಂದ ನಂಬುಡುಮಡ ಮುಂದಿನ ಸುತ್ತಿಗೆ ಪರವೇಶ ಪಡೆಯಿತು. ಕರಿನೆರವಂಡ ತಂಡಕ್ಕೆ ಚೆಟ್ಟೀರ ವಿರುದ್ಧ ೫೨ ರನ್‌ಗಳ ಜಯ ದೊರೆಯಿತು. ಕರಿನೆವಂಡ ೬ ವಿಕೆಟ್‌ಗೆ ೧೦೪ ರನ್, ಚೆಟ್ಟೀರ ೫೨ ರನ್‌ಗಳಿಗೆ ಸರ್ವಪಥನವಾಯಿತು.
ಉದ್ದಪಂಡ ಕಚ್ಚಪನ್ನೇರವನ್ನು ೧೦ ವಿಕೆಟ್‌ಗಳಿಂದ ಮಣಿಸಿತು. ಕಚ್ಚಪನ್ನೇರ ವಿಕೆಟ್ ನಷ್ಟವಿಲ್ಲದೆ ೮೭ ರನ್, ಉದ್ದಪಂಡ ೩.೩ ಓವರ್‌ಗಳಲ್ಲಿ ಪಂದ್ಯ ಮುಗಿಸಿತು. ನಡಿಕೇರಿಯಂಡಕ್ಕೆ ಕೊಕ್ಕಲೆಮಾಡ ವಿರುದ್ಧ ೬ ವಿಕೆಟ್ ಜಯ ಲಭಿಸಿತು. ಕೊಕ್ಕಲೆಮಾಡ ೯ ವಿಕೆಟ್‌ಗೆ ೬೩ ರನ್, ನಡಿಕೇರಿಯಂಡ ೪ ವಿಕೆಟ್‌ಗೆ ಗುರಿ ಸಾಧನೆ ಮಾಡಿತು.
ಮೂಕೊಂಡಕ್ಕೆ ಮೂಕಳಮಾಡ ವಿರುದ್ದ ೮೦ ರನ್‌ಗಳ ಗೆಲುವು ದೊರೆಯಿತು. ಮೂಕೊಂಡ ೪ ವಿಕೆಟ್ ನಷ್ಟಕ್ಕೆ ೧೨೦ ರನ್ ಕಲೆ ಹಾಕಿತು. ಮೂಕಳಮಾಡ ೫ ವಿಕೆಟ್ ಕಳೆದುಕೊಂಡು ೪೦ ಕ್ಕೆ ಕುಸಿಯಿತು. ಚೊಟ್ಟಯಂಡಮಡಕ್ಕೆ ಅಪ್ಪಾರಂಡ ವಿರುದ್ಧ ೬ ವಿಕೆಟ್ ಗೆಲುವು ಲಭಿಸಿತು. ಅಪ್ಪಾರಂಡ ೮ ವಿಕೆಟ್‌ಗೆ ೩೯ ರನ್, ಚೊಟ್ಟಯಂಡಮಡ ೪ ವಿಕೆಟ್ ಕಳೆದುಕೊಂಡು ೩.೩ ಓವರ್‌ಗಳಲ್ಲಿ ಪಂದ್ಯ ಮುಗಿಸಿತು.
ಮಾಳೇಟಿರ (ಕೆದಮುಳ್ಳೂರು) ತಂಡವು ಆಪಟ್ಟೀರವನ್ನು ೩೭ ರನ್‌ಗಳಿಂದ ಸೋಲಿಸಿತು. ಮಾಳೇಟಿರ ೪ ವಿಕೆಟ್‌ಗೆ ೭೬ ರನ್, ಆಪಟ್ಟೀರ ೭ ವಿಕೆಟ್ ನಷ್ಟಕ್ಕೆ ೩೯ ರನ್ ದಾಖಲಿಸಿತು. ನಂಬಿಯಪAಡ ೮ ವಿಕೆಟ್‌ಗಳಿಂದ ಅಲ್ಲುಮಾಡವನ್ನು ಪರಾಭವಗೊಳಿಸಿತು. ಅಲ್ಲುಮಾಡ ೬ ವಿಕೆಟ್ ನಷ್ಟಕ್ಕೆ ೧೦೧ ರನ್, ನಂಬಿಯಪAಡ ೨ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಚೀರಂಡ ಅಯ್ಯಪ್ಪ, ಮಂದೆಯAಡ ಸುಜಿತ್, ಉಡುವೇರ ಮಂದಣ್ಣ, ನೆಲ್ಲೀರ ಶರತ್, ಅಪ್ಪಂಡೇರAಡ ಪಿ, ದಿನೇಶ್, ತಾಚಮಂಡ ರೇಖಾ, ಪೆಬ್ಬಟ್ಟೀರ ಸೋನಿಕಾ, ಬಾದುಮಂಡ ಶ್ರೇಯಾ, ಚೆಪ್ಪುಡೀರ ಸುಮನ್, ಅಜ್ಜಮಾಡ ದರ್ಶನ್, ಚೆಟ್ಟೀರ ಪ್ರವೀಣ್, ಕಚ್ಚಪನ್ನೇರ ಶಶಾಂಕ್, ಕೊಕ್ಕಲೆಮಾಡ ತಾಜ್, ಮಾಪಣಮಾಡ ಮೋನಿಕಾ, ಕಳಕಂಡ ಕಾವ್ಯ, ಮೂಕಳಮಾಡ ಬೋಪಣ್ಣ, ಕಂಬೀರAಡ ಹನಾ, ಅಪ್ಪಾರಂಡ ಸಾಗರ್, ಆಪಟ್ಟೀರ ಡೆರಿನ್ ಬೋಪಯ್ಯ, ಅಲ್ಲುಮಾಡ ಪ್ರಚನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.