ಕೂಡಿಗೆ, ಏ. ೩೦ : ಕುಶಾಲನಗರ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳ ಕೊಳವೆ ಬಾವಿಯ ಅಂತರ್ಜಲದ ಕುಸಿತದಿಂದಾಗಿ ಕುಡಿಯುವ ನೀರಿನ ಸಮಸ್ಯೆ ತಲದೋರಿ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿರುವ ಏತ ನೀರಾವರಿ ಘಟಕದ ಮೂಲಕ ನೀರನ್ನು ಹರಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ.
ಕುಶಾಲನಗರ ತಾಲೂಕು ವ್ಯಾಪ್ತಿಯ ಕಾವೇರಿ ಮತ್ತು ಹಾರಂಗಿ ನದಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿರುವ ಏತ ನೀರಾವರಿ ಘಟಕದ ಕೇಂದ್ರದಿAದ ಆಯಾ ವ್ಯಾಪ್ತಿಯ ಕೆರೆಕಟ್ಟೆಗಳಿಗೆ ಮತ್ತು ವಿವಿಧ ಗ್ರಾಮಗಳಲ್ಲಿ ನಿರ್ಮಾಣ ಮಾಡಿರುವ ನೀರು ಸಂಗ್ರಹ ತೊಟ್ಟಿಗೆ, ನೀರನ್ನು ಬಿಡುವುದರಿಂದ ಬೇಸಿಗೆಯಲ್ಲಿ ದನಕರುಗಳು ನೀರು ಕುಡಿಯುಲು ಉಪಯುಕ್ತವಾಗುತ್ತದೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ಸಮಸ್ಯೆ ಬಗೆಹರಿಸಲು ಅನುಕೂಲವಾಗುವುದು. ಅಲ್ಲದೆ ಈ ವ್ಯಾಪ್ತಿಯ ಚಿಕ್ಕ ಕೆರೆಗಳಿಗೆ ಏತ ನೀರಾವರಿ ಘಟಕದ ನೀರನ್ನು ಹರಿಸುವುದರಿಂದಾಗಿ ಈ ವ್ಯಾಪ್ತಿಯ ಅಂತರ್ಜಲಮಟ್ಟ ಸ್ವಲ್ಪ ಮಟ್ಟಿಗೆ ಏರಿಕೆ ಅಗುಬಹುದು ಎಂದು ಈ ವ್ಯಾಪ್ತಿಯ ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಮತ್ತು ಗ್ರಾಮಸ್ಥರ ಅಭಿಪ್ರಾಯಪಟ್ಟಿದ್ದಾರೆ.