ಕರಿಕೆ, ಏ. ೨೯: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ಸರಕಾರಿ ಆಸ್ಪತ್ರೆಯ ಒತ್ತಿನ ಜಮೀನಿನಲ್ಲಿ ವಿದ್ಯುತ್ ಲೈನಿಗೆ ಕಾಡು ಬಳ್ಳಿ ಮುರಿದು ಬಿದ್ದ ಪರಿಣಾಮ ಬೆಂಕಿ ಹತ್ತಿಕೊಂಡು ಅಜಯ್ ಕುಮಾರ್ ಎಂಬವರ ಅರ್ಧ ಎಕರೆ ಗೇರು ತೋಟ ಬೆಂಕಿಗಾಹುತಿಯಾಗಿದೆ. ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿದ ಪರಿಣಾಮವಾಗಿ ಹೆಚ್ಚಿನ ಅನಾಹುತ ತಪ್ಪಿದೆ.