ಗೋಣಿಕೊಪ್ಪ ವರದಿ, ಏ. ೩೦ : ಅರಮಣಮಾಡ ಕುಟುಂಬ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ರೋಚಕ ಪಂದ್ಯಗಳು ನಡೆದವು.

ಮಹಿಳಾ ವಿಭಾಗ : ತೀತಿರಕ್ಕೆ ಅಚ್ಚಪಂಡ ವಿರುದ್ಧ ೧೦ ವಿಕೆಟ್ ಜಯ ಲಭಿಸಿತು. ತೀತಿರ ೫೨ ರನ್, ಅಚ್ಚಪಂಡ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು. ಬಾಚಿನಾಡಂಡಕ್ಕೆ ಕಾಡ್ಯಮಾಡ ವಿರುದ್ದ ೧೦ ವಿಕೆಟ್ ಜಯ ಲಭಿಸಿತು. ಕಾಡ್ಯಮಾಡ ೧ ವಿಕೆಟ್‌ಗೆ ೨೧ ರನ್, ಬಾಚಿನಾಡಂಡ ವಿಕೆಟ್ ಕಳೆದುಕೊಳ್ಳದೆ ಗುರಿ ಮುಟ್ಟಿತು. ಕಳಕಂಡ ನಂದೇಟಿರ ವಿರುದ್ದ ೯ ವಿಕೆಟ್ ಜಯ ಸಾಧಿಸಿತು. ನಂದೇಟಿರ ೨ ವಿಕೆಟ್‌ಗೆ ೩೪ ರನ್, ಕಳಕಂಡ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ಪುರುಷರ ವಿಭಾಗ: ಕೊಣಿಯಂಡ ಸೂಪರ್ ಒವರ್‌ನಲ್ಲಿ ಮಚ್ಚಾರಂಡ ವಿರುದ್ದ ೧೧ ರನ್‌ಗಳಿಂದ ಗೆದ್ದು ಬೀಗಿತು. ಸೂಪರ್ ಓವರ್‌ನಲ್ಲಿ ಕೊಣಿಯಂಡ ೧ ವಿಕೆಟ್‌ಗೆ ೧೭ ರನ್, ಮಚ್ಚಾರಂಡ ೧ ವಿಕೆಟ್‌ಗೆ ೬ ರನ್ ಗಳಿಸಿತು. ನಿಗದಿತ ಇನ್ನಿಂಗ್ಸ್ನಲ್ಲಿ ಮಚ್ಚಾರಂಡ ೩ ವಿಕೆಟ್‌ಗೆ ೮೨ ರನ್, ಕೊಣಿಯಂಡ ೫ ವಿಕೆಟ್ ಕಳೆದುಕೊಂಡು ಟೈ ಫಲಿತಾಂಶ ನೀಡಿತು. ಮಚ್ಚಾರಂಡ ಅಪ್ಪಣ್ಣ ೨೫ ರನ್, ಕವಿನ್ ೩ ವಿಕೆಟ್ ಪಡೆದರು.

ಕರವಟ್ಟೀರಕ್ಕೆ ತೀತಿರ ವಿರುದ್ದ ೭ ವಿಕೆಟ್ ಜಯ ಲಭಿಸಿತು. ತೀತಿರ ೫ ವಿಕೆಟ್‌ಗೆ ೬೩ ರನ್, ಕರವಟ್ಟಿರ ೩ ವಿಕೆಟ್‌ಗೆ ೬೬ ರನ್ ಗಳಿಸಿತು. ತೀತಿರ ನಾಣಯ್ಯ ೧೫ ರನ್, ಕರವಟ್ಟಿರ ಚಿಂತೇಶ್ ೨ ವಿಕೆಟ್, ಸಚಿನ್ ೨೩ ರನ್, ಗುರು ೨೧ ರನ್ ಗಳಿಸಿದರು. ಕಾಡ್ಯಮಾಡವು ಬಲ್ಯಮಂಡವನ್ನು ೧೦ ವಿಕೆಟ್‌ಗಳಿಂದ ಮಣಿಸಿತು. ಬಲ್ಯಮಂಡ ೩ ವಿಕೆಟ್‌ಗೆ ೫೦ ರನ್, ಕಾಡ್ಯಮಾಡ ೩.೨ ಒವರ್‌ಗಳಲ್ಲಿ ಪಂದ್ಯ ಮುಗಿಸಿತು. ಬಲ್ಯಮಂಡ ತೃತಿನ್ ೧೯ ರನ್, ಕಾಡ್ಯಮಾಡ ಅಭಿಷೇಕ್ ೫೦ ರನ್ ದಾಖಲಿಸಿದರು. ಕಳಕಂಡ ಚಂಗುಲAಡವನ್ನು ೬ ವಿಕೆಟ್‌ಗಳಿಂದ ಸೋಲಿಸಿತು. ಚಂಗುಲAಡ ೫ ವಿಕೆಟ್‌ಗೆ ೫೬ ರನ್, ಕಳಕಂಡ ೪ ವಿಕೆಟ್‌ಗೆ ಗುರಿ ಮುಟ್ಟಿತು. ಚಂಗುಲAಡ ಪವನ್ ೩೧ ರನ್ ಹಾಗೂ ೨ ವಿಕೆಟ್, ಕಳಕಂಡ ಪ್ರಸನ್ನ ೨ ವಿಕೆಟ್, ಬಬ್ಲಿ ೨೫ ರನ್ ದಾಖಲಿಸಿದರು. ಮಲ್ಲಂಡ ತಂಡಕ್ಕೆ ಕಳ್ಳಿಚಂಡ ವಿರುದ್ದ ೫ ರನ್‌ಗಳ ಗೆಲುವು ದೊರೆಯಿತು. ಮಲ್ಲಂಡ ೨ ವಿಕೆಟ್‌ಗೆ ೧೪೧ ರನ್, ಕಳ್ಳಿಚಂಡ ೩ ವಿಕೆಟ್‌ಗೆ ೧೩೬ ರನ್ ದಾಖಲಿಸಿತು. ಪೊನ್ನಚಂಡವು ಪುದಿಯತಂಡವನ್ನು ೧೦ ರನ್‌ಗಳಿಂದ ಪರಾಭವಗೊಳಿಸಿತು. ಪೊನ್ನಚಂಡ ೮ ವಿಕೆಟ್‌ಗೆ ೭೯ ರನ್, ಪುದಿಯತಂಡ ೩ ವಿಕೆಟ್ ನಷ್ಟಕ್ಕೆ ೬೯ ರನ್ ಗಳಿಸಿತು. ಮುಕ್ಕಾಟಿರ (ಕುಂಜಿಲಗೇರಿ) ತಂಡಕ್ಕೆ ತೀತರಮಾಡ ವಿರುದ್ದ ೭ ವಿಕೆಟ್ ಜಯ ಲಭಿಸಿತು. ತೀತರಮಾಡ ೩ ವಿಕೆಟ್‌ಗೆ ೭೭ ರನ್, ಮುಕ್ಕಾಟಿರ ೪ ವಿಕೆಟ್‌ಗೆ ಗುರಿ ಸಾಧಿಸಿತು. ತೀತರಮಾಡ ರಾಕಿ ಪೊನ್ನಣ್ಣ ೩೦ ರನ್, ಚರನ್ ಚಿಣ್ಣಪ್ಪ ೨೮ ರನ್, ನಿಕಿಲ್ ೨ ವಿಕೆಟ್, ಮುಕ್ಕಾಟಿರ ನಮನ್ ೩೧ ರನ್ ದಾಖಲಿಸಿದರು.

ಕನ್ನಿಕಂಡಕ್ಕೆ ಎರಡು ಜಯ ಲಭಿಸಿತು, ಮೋಟನಾಳಿರ ಮತ್ತು ಬೊಪ್ಪಂಡವನ್ನು ಮಣಿಸಿ ಸಾಧನೆ ಮಾಡಿತು. ಮೋಟನಾಳಿರ ವಿರುದ್ದ ೮ ವಿಕೆಟ್ ಜಯ ದೊರೆಯಿತು. ಮೋಟನಾಳಿರ ೭ ವಿಕೆಟ್‌ಗೆ ೬೦ ರನ್, ಕನ್ನಿಕಂಡ ೨ ವಿಕೆಟ್‌ಗೆ ಗುರಿ ಮುಟ್ಟಿತು. ಕನ್ನಿಕಂಡ ಪಳಂಗಪ್ಪ ೩ ವಿಕೆಟ್, ಮೋಟನಾಳಿರ ಹೃತಿಕ್ ೧೭ ರನ್ ದಾಖಲಿಸಿದರು. ಬೊಪ್ಪಂಡವನ್ನು ೫೮ ರನ್‌ಗಳಿಂದ ಮಣಿಸಿತು. ಕನ್ನಿಕÀಂಡ ೫ ವಿಕೆಟ್‌ಗೆ ೧೧೪ ರನ್, ಬೊಪ್ಪಂಡ ೬ ವಿಕೆಟ್ ನಷ್ಟಕ್ಕೆ ೫೬ ರನ್ ಗಳಿಸಿತು. ಮೋಟನಾಳಿರವು ಮಲ್ಲಂಗಡ ತಂಡವನ್ನು ೮ ವಿಕೆಟ್‌ಗಳಿಂದ ಸೋಲಿಸಿತು. ಮಲ್ಲಂಗಡ ೩ ವಿಕೆಟ್‌ಗೆ ೫೬ ರನ್, ಮೋಟನಾಳಿರ ೨ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಮಲ್ಲಂಗಡ ಪ್ರಜ್ವಲ್ ೧೫ ರನ್, ಮೋಟನಾಳಿರ ರಕ್ಷಿತ್ ೩೬ ರನ್ ಗಳಿಸಿದರು. ಕ್‌ರ್‌ಂದAಡ ಗೈರಿನಿಂದ ತೆಕ್ಕಡ ಮುಂದಿನ ಸುತ್ತಿಗೆ, ಸಾದೆರ ಗೈರಿನಿಂದ ಕುಪ್ಪಣಮಾಡ ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡಿತು. ಕೈಪಟ್ಟಿರ ತಂಡಕ್ಕೆ ಕಲ್ಲುಮಾಡಂಡ ವಿರುದ್ದ ೯ ವಿಕೆಟ್ ಜಯ ಲಭಿಸಿತು. ಕಲ್ಲುಮಾಡಂಡ ೫ ವಿಕೆಟ್‌ಗೆ ೬೨ ರನ್, ಕೈಪಟ್ಟಿರ ೧ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಕಲ್ಲುಮಾಡಂಡ ಗೌತಂ ಅಚ್ಚಯ್ಯ ೨೮ ರನ್, ಕೈಪಟ್ಟಿರ ಅರ್ಜುನ್ ಮೇದಪ್ಪ ೨೫ ರನ್, ರೋಶನ್ ಪೊನ್ನಣ್ಣ ೪ ವಿಕೆಟ್ ಕಬಳಿಸಿದರು.

ನಾಗಚೆಟ್ಟಿರ ತಂಡವು ಅಜ್ಜಿಕುಟ್ಟಿರ ತಂಡವನ್ನು ೯ ವಿಕೆಟ್‌ಗಳಿಂದ ಸೋಲಿಸಿತು. ಅಜ್ಜಿಕುಟ್ಟಿರ ೪ ವಿಕೆಟ್ ನಷ್ಟಕ್ಕೆ ೭೪ ರನ್, ನಾಗಚೆಟ್ಟಿರವು ೬.೪ ಒವರ್‌ಗಳಲ್ಲಿ ಗುರಿ ಸಾಧಿಸಿತು. ಅಜ್ಜಿಕುಟ್ಟಿರ ವಿಷ್ಣು ಉತ್ತಪ್ಪ ೩೦ ರನ್, ನಾಗಚೆಟ್ಟಿರ ಅನುಷ್ ಉತ್ತಯ್ಯ ೨೩ ರನ್ ಗಳಿಸಿದರು. ಮುಕ್ಕಾಟಿರ (ಮಾದಾಪುರ) ತಂಡಕ್ಕೆ ಬೈರೇಟಿರ ವಿರುದ್ದ ೩೭ ರನ್‌ಗಳ ಬರ್ಜರಿ ಗೆಲುವು ದೊರೆಯಿತು. ಮುಕ್ಕಾಟಿರ ೫ ವಿಕೆಟ್ ನಷ್ಟಕ್ಕೆ ರತನ್ ಬಾರಿಸಿದ ೬೧ ರನ್‌ಗಳ ನೆರವಿನಿಂದ ೧೩೦ ರನ್ ಗುರಿ ನೀಡಿತು. ಬೈರೇಟಿರ ಆಟಗಾರ ಶಾನ್ ಪೂವಣ್ಣ ೫೧ ರನ್ ಸಿಡಿಸಿದರೂ ಸೋಲಿನಿಂದ ತಪ್ಪಿಸಿಕೊಳ್ಳಲಾಗದೆ, ೬ ವಿಕೆಟ್ ಕಳೆದುಕೊಂಡು ೯೨ ಕ್ಕೆ ಕುಸಿಯಿತು.

ಪಂದ್ಯ ಶ್ರೇಷ್ಠರು

ಮಚ್ಚಾರಂಡ ಅಪ್ಪಣ್ಣ, ತೀತಿರ ನಾಣಯ್ಯ, ಬಲ್ಯಮಂಡ ತೃತಿನ್, ಚಂಗುಲAಡ ಪವನ್, ಕಳ್ಳಿಚಂಡ ಧ್ಯಾನ್, ಪುದಿಯತಂಡ ಸಂಜು, ತೀತರಮಾಡ ರಾಕಿ ಪೊನ್ನಣ್ಣ, ಮೋಟನಾಳೀರ ಹೃತಿಕ್ ಉತ್ತಯ್ಯ, ಬೊಪ್ಪಂಡ ರಾಬಿನ್, ಮಲ್ಲಂಗಡ ಆಕಾಶ್, ತೀತಿರ ಲವೀನಾ, ಕಾಡ್ಯಮಾಡ ಶೈಲಾ, ನಂದೇಟಿರ ಚೈತ್ರ, ಕಲ್ಲುಮಾಡಂಡ ಗೌತಂ ಅಚ್ಚಯ್ಯ, ಅಜ್ಜಿಕುಟ್ಟಿರ ವಿಷ್ಣು ಉತ್ತಪ್ಪ, ಬೈರೇಟಿರ ಆಟಗಾರ ಶಾನ್ ಪೂವಣ್ಣ.