ಮಡಿಕೇರಿ, ಏ. ೨೯: ನಾಪೋಕ್ಲುವಿನಲ್ಲಿ ಕುಂಡ್ಯೋಳAಡ ಕಪ್ ಹಾಕಿ ಉತ್ಸವ ಮುಕ್ತಾಯಗೊಳ್ಳುತ್ತಿದ್ದಂತೆ ಇದೀಗ ಜಿಲ್ಲಾ ಕೇಂದ್ರ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟವೊAದು ಪ್ರಾರಂಭವಾಗುತ್ತಿದೆ. ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ೧೦ ಫ್ರಾಂಚೈಸಿಗಳನ್ನು ಒಳಗೊಂಡAತೆ ಇದೇ ಪ್ರಥಮ ಬಾರಿಗೆ ಲೆದರ್ಬಾಲ್ ಕ್ರಿಕೆಟ್ ಪಂದ್ಯ ಏರ್ಪಡಿಸಲಾಗಿದೆ. ಟೆನ್ನಿಸ್ಬಾಲ್ ಕ್ರಿಕೆಟ್ಗೂ ಲೆದರ್ ಬಾಲ್ ಕ್ರಿಕೆಟ್ಗೂ ಅಪಾರ ವ್ಯತ್ಯಾಸವಿದೆ. ಜನಾಂಗದಲ್ಲಿ ಹಲವಾರು ಕ್ರಿಕೆಟ್ ಪ್ರತಿಭೆಗಳಿದ್ದು, ಇವರನ್ನು ಬೆಳಕಿಗೆ ತಂದು ಪ್ರೋತ್ಸಾಹ- ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ವರ್ಷದಿಂದ ಲೆದರ್ ಬಾಲ್ ಕ್ರಿಕೆಟ್ ಆಯೋಜನೆಗೆ ಕೂರ್ಗ್ ಕ್ರಿಕೆಟ್ ಫೌಂಡೇಷನ್ ಮುಂದಾಗಿದೆ. ೧೦ ಫ್ರಾಂಚೈಸಿಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದು, ಈಗಾಗಲೇ ಆಟಗಾರರ ಬಿಡ್ಡಿಂಗ್ನAತಹ ಪ್ರಕ್ರಿಯೆಯೊಂದಿಗೆ ಇತರ ಎಲ್ಲಾ ಸಿದ್ಧತೆ ನಡೆದಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮೇ ೧ರಂದು (ನಾಳೆ) ಬೆಳಿಗ್ಗೆ ೧೦.೩೦ಕ್ಕೆ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪಂದ್ಯಾಟ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ಶಾಸಕ ಡಾ. ಮಂತರ್ಗೌಡ, ಜಿಲ್ಲಾಧಿಕಾರಿ ವೆಂಕಟ್ರಾಜಾ, ಎಸ್ಪಿ ರಾಮರಾಜನ್, ಹಿರಿಯ ವಕೀಲ ಮುಕ್ಕಾಟಿರ ಟಿ. ನಾಣಯ್ಯ, ಕೊಡವ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಪಾಲ್ಗೊಳ್ಳಲಿದ್ದಾರೆ. ನೂತನವಾಗಿ ನೋಂದಾಯಿತವಾದ ಸಂಸ್ಥೆಯಲ್ಲಿ ಪೊರ್ಕೊಂಡ ಸುನಿಲ್, ಪಾಲಚಂಡ ಜಗನ್ ಉತ್ತಪ್ಪ, ಚಂಡೀರ ರಚನ್ ಚಿಣ್ಣಪ್ಪ, ಮಡ್ಲಂಡ ದರ್ಶನ್, ಚೆರುಮಂದAಡ ಸೋಮಣ್ಣ, ಕುಲ್ಲೇಟಿರ ಶಾಂತ ಕಾಳಪ್ಪ, ಬೊಳ್ಳಂಡ ರೇಣ ದೇವಪ್ಪ, ಪೊರ್ಕೊಂಡ ಅನಿಲ್, ಮಣವಟ್ಟಿರ ಲಿಖಿತ ಅವರುಗಳಿದ್ದಾರೆ.