ಮಡಿಕೇರಿ, ಏ. ೨೯: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ತುಂಬಿ ಹೋಗಿದ್ದ ಕಸ - ತ್ಯಾಜ್ಯಗಳನ್ನು ಕ್ರೀಡಾರ್ಥಿಗಳು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ನಿನ್ನೆ ದಿನ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಹಾಗೂ ಕಾರ್ಯಕ್ರಮ ಇದ್ದುದರಿಂದ ಆಗಮಿಸಿದ್ದ ಸಾರ್ವಜನಿಕರು ಕಸಗಳನ್ನು ಅಲ್ಲಲ್ಲೇ ಎಸೆದು ಹೋಗಿದ್ದರು. ಇಂದು ಬೆಳಿಗ್ಗೆ ಎಂದಿನAತೆ ಮೈದಾನಕ್ಕೆ ಅಭ್ಯಾಸಕ್ಕಾಗಿ ಆಗಮಿಸಿದ್ದ ಕೂಡಿಗೆ ಕ್ರೀಡಾ ಶಾಲೆಯ ವಿದ್ಯಾರ್ಥಿನಿಯರಾದ ಭವಿಷ್ಯ, ನೇಕ್ಷ ಹಾಗೂ ಸಂಜನ ಮೈದಾನದೊಳಗಡೆ, ಪೆವಿಲಿಯನ್‌ಗಳಲ್ಲಿ ಎಸೆಯಲ್ಪಟ್ಟಿದ್ದ ಕಸ, ಬಾಟಲಿಗಳನ್ನು ಹೆಕ್ಕಿ ಒಂದು ಕಡೆಯಲ್ಲಿ ರಾಶಿ ಹಾಕಿದರು. ಇವರೊಂದಿಗೆ ಬೇಸಿಗೆ ಶಿಬಿರದಲ್ಲಿ ಭಾಗವಹಿಸುತ್ತಿರುವ ಮಕ್ಕಳು ಹಾಗೂ ತರಬೇತುದಾರರು ಕೂಡ ಕೈಜೋಡಿಸಿದರು.