ಕಾರ್ಮಿಕರ ದಿನವು ಕಾರ್ಮಿಕರ ಸ್ಥಿತಿಸ್ಥಾಪಕತ್ವ, ಸಮರ್ಪಣೆ, ಸಾಧನೆಗಳನ್ನು ಗೌರವಿಸುತ್ತದೆ. ಮೊದಲ ಕಾರ್ಮಿಕ ದಿನವನ್ನು ಮೇ ೧ ೧೯೨೩ ರಂದು ಚೆನ್ನೆöÊನಲ್ಲಿ ಆಚರಿಸಲಾಯಿತು. ಇದನ್ನು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ ವತಿಯಿಂದ ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಕೆಂಪು ಧ್ವಜವನ್ನು ಬಳಸಲಾಯಿತು. ಈ ದಿನ ಕಮ್ಯುನಿಸ್ಟ್ ಮತ್ತು ಸಮಾಜವಾದಿ ರಾಜಕೀಯ ಪಕ್ಷಗಳಿಗೆ ಕಾರ್ಮಿಕ ಚಳುವಳಿಗೆ ಸಂಬAಧಿಸಿದೆ. ಕಾರ್ಮಿಕರು ತಮ್ಮ ಆರ್ಥಿಕತೆಯನ್ನು ಸುಧಾರಿಸಲು ಸುರಿಸುವ ರಕ್ತ, ಬೆವರು ಮತ್ತು ಕಣ್ಣೀರಿಗೆ ಇದು ಮನ್ನಣೆಯ ದಿನವೆನ್ನಬಹುದು. ಎಲ್ಲಾ ಸಂಪತ್ತು ಕಾರ್ಮಿಕರ ಉತ್ಪನ್ನವಾಗಿದೆ. ದುಡಿಯುವ ಕೈಗಳಿಲ್ಲ ಎಂದಾದರೆ ಯಾವ ಉದ್ಯಮಿಯೂ ಏಳಿಗೆಯನ್ನು ಕಾಣಲಾರನು. ದುಡಿಮೆಯೇ ಜೀವನದಲ್ಲಿ ಯಶಸ್ಸಿನ ಕೀಲಿ ಕೈ. ದುಡಿಮೆಯು ಶ್ರಮದ ಮಹತ್ವವನ್ನು ತೋರಿಸುತ್ತದೆ. ಮನುಷ್ಯನ ಕಠಿಣ ಪರಿಶ್ರಮವೇ ಚಂದ್ರನ ಮೇಲೆ ಇಳಿಯಲು ಸಹಾಯಮಾಡಿತು. ನಮ್ಮ ಕೆಲಸಗಳಲ್ಲಿ ನಾವು ದೃಢವಾಗಿರಬೇಕು. ಬದ್ಧರಾಗಿರಬೇಕು. ಸ್ಥಿರವಾಗಿರಬೇಕು. ಎಲ್ಲರಿಗೂ ನ್ಯಾಯಯುತ ಮತ್ತು ನ್ಯಾಯಯುತ ಕೆಲಸದ ಪರಿಸ್ಥಿತಿಗಳಿಗಾಗಿ ಹೋರಾಟದಲ್ಲಿ ಸಾಧಿಸಿದ ಪ್ರಗತಿ ಮತ್ತು ಉಳಿದಿರುವ ಸವಾಲುಗಳನ್ನು ಪ್ರತಿಬಿಂಬಿಸುವ ದಿನವಾಗಿದೆ.

ಮೇ ೧, ೧೮೯೦ ರಂದು ಯುರೋಪಿನ ಮೊದಲ ಅಂತರ ರಾಷ್ಟಿçÃಯ ಸಮಾಜವಾದಿ ಕಾಂಗ್ರೆಸ್ ನಿರ್ಧಾರ ಕೈಗೊಂಡು ಜುಲೈ ೧೪, ೧೮೮೯ ರಂದು ಫ್ರಾನ್ಸ್ನ ಪ್ಯಾರಿಸ್‌ನಲ್ಲಿ ಮೇ ೧ ನ್ನು ಅಂರ‍್ರಾಷ್ಟಿçÃಯ ಏಕತೆ ಮತ್ತು ಒಗ್ಗಟ್ಟಿನ ಕಾರ್ಮಿಕರ ದಿನ ಎಂದು ಆಚರಿಸಬೇಕೆಂದು ಘೋಷಿಸಿದ ನಂತರ ಕಾರ್ಮಿಕರಿಗೆ ಮೀಸಲಾದ ದಿನಾಚರಣೆಯಾಗಿದೆ.

- ಮುಕ್ಕಾಟಿ ಹರಿಣಿ ಗಿರೀಶ್, ಮರಗೋಡು.