ಕಣಿವೆ, ಏ. ೩೦ : ಇಲ್ಲಿ ಯಾರೂ ಕೂಡ ಕೊಳವೆ ಬಾವಿಯಿಂದ ನೀರು ಹರಿಸುತ್ತಿಲ್ಲ. ಮಳೆಯಂತೂ ಮೊದಲೇ ಇಲ್ಲ. ಆದರೂ ಇಲ್ಲಿ ಅಂತರಗAಗೆ ಅವತಾರವೆತ್ತಿ ಸದ್ದೇ ಇಲ್ಲದೇ ಅತ್ಯಂತ ಸೌಮ್ಯವಾಗಿ ಹರಿದು ಬರುತ್ತಿದ್ದಾಳೆ.
ಇದು ಅಚ್ಚರಿಯಾದರೂ ಕೂಡ ಸತ್ಯ.
ಕಳೆದ ಎರಡು ತಿಂಗಳಿAದಲೂ ಹರಿವು ಸ್ಥಗಿತಗೊಳಿಸಿದ್ದ ಕಾವೇರಿ ನದಿಯಲ್ಲಿ ಇದೀಗ ಸಣ್ಣ ಪ್ರಮಾಣದಲ್ಲಿ ನೀರಿನ ಹರಿವು ಗೋಚರವಾಗಿದ್ದು ಸ್ಥಳೀಯ ನಿವಾಸಿಗಳ ಮನದಲ್ಲಿ ಹರ್ಷ ತಂದಿದೆ.
ನAಜರಾಯಪಟ್ಟಣದ ಕಾವೇರಿ ನದಿಯೊಳಗಿನ ನಡುಹೊಳೆ ಬಸವಣ್ಣನ ಸನ್ನಿಧಿಯಲ್ಲಿ ತನ್ನಷ್ಟಕ್ಕೆ ತಾನು ಜಾಗ ಮಾಡಿಕೊಂಡು ಕೊಂಚ ಕೊಂಚವೇ ಸಣ್ಣದಾಗಿ ತಿಳಿ ನೀರಾಗಿ ಹರಿದು ಮುಂದೆ ಸಾಗುತ್ತಿರುವ ಕಾವೇರಮ್ಮನನ್ನು ಕಂಡ ಗ್ರಾಮದ ನಿವಾಸಿಗಳು ನೀರನ್ನು ಪೂಜಿಸಿ ಭೂಮಿ ತಾಯಿಯ ಪರಮ ತೀರ್ಥ ರೂಪದಲ್ಲಿ ಸವಿದು ಹರ್ಷಚಿತ್ತರಾಗಿದ್ದಾರೆ.
ಈ ಬಗ್ಗೆ "ಶಕ್ತಿ" ಯೊಂದಿಗೆ ಮಾತನಾಡಿದ ನಂಜರಾಯಪಟ್ಟಣದ ಕಾಫಿ ಬೆಳೆಗಾರ ಷಡಕ್ಷರಿ, ವಸಂತ್, ಪಂಚಾಕ್ಷರಿ ಮೊದಲಾದವರು ಎಂದಿನAತೆ ಮಂಗಳವಾರ ಕಾವೇರಿ ನದಿ ದಂಡೆಯ ತಮ್ಮ ತೋಟಕ್ಕೆ ತೆರಳಿದ ಸಂದರ್ಭ ನದಿಯತ್ತ ಗಮನ ಹರಿಸಿದಾಗ ಒಣಗಿ ನಿಂತಿದ್ದ ನದಿಯಲ್ಲಿ ದಿಢೀರನೆ ನೀರಿನ ಹರಿವು ಕಂಡು ಸಂತಸಗೊAಡು ನದಿಯೊಳಗೆ ತೆರಳಿ ನೋಡಿದಾಗ ನದಿಯ ಅಲ್ಲಲ್ಲಿ ಇರುವ ಗುಂಡಿಗಳನ್ನು ತುಂಬಿಸಿಕೊAಡು ಮುಂದೆ ಸಾಗುತ್ತಿರುವ ಕಾವೇರಿಯ ದರ್ಶನ ಸಾಕ್ಷಾತ್ ಗಂಗೆಯ ಅವತಾರದಂತೆ ಭಾಸವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ದುಬಾರೆಯ ನದಿ ತೀರದಿಂದ ಸುಮಾರು ಒಂದೂವರೆ ಕಿಮೀ ಅಂತರದಲ್ಲಿರುವ ನಡುಹೊಳೆ ಬಸವಣ್ಣ ಸನ್ನಿಧಿಯಲ್ಲಿನ ನೀರಿನ ಹರಿವು ಬುಧವಾರ ಸಂಜೆ ದುಬಾರೆ ನದಿ ತೀರ ಸೇರುವ ಸಂಭವದ ಬಗ್ಗೆ ಷಡಕ್ಷರಿ ವಿಚಾರ ಹಂಚಿಕೊAಡಿದ್ದಾರೆ.
ಕಾವೇರಿ ನದಿ ತೀರದ ನಾಪೋಕ್ಲು, ಕಕ್ಕಬ್ಬೆ, ಕರಡ, ನೆಲಜಿ ಮೊದಲಾದ ಪ್ರದೇಶಗಳ ಮೇಲ್ಭಾಗದಲ್ಲಿ ಕಳೆದ ಕೆಲದಿನಗಳಲ್ಲಿ ಸುರಿದ ಒಂದಷ್ಟು ಮಳೆಯ ಪರಿಣಾಮವೋ ಏನೋ..... ಅಥವಾ ಕಾವೇರಮ್ಮನ ಪವಾಡವೋ ಏನೋ..... ಒಟ್ಟಾರೆ ನದಿಯಲ್ಲಿ ಮೂರ್ನಾಲ್ಕು ಪಂಪ್ ಸೆಟ್ಗಳಷ್ಟು ಪ್ರಮಾಣದ ನೀರು ಹರಿದು ಬರುತ್ತಿದೆ.
ನಂಜರಾಯಪಟ್ಟಣದ ಕಾವೇರಿ ನದಿಯೊಳಗೆ ಇರುವ ನಡುಹೊಳೆ ಬಸವಣ್ಣ ದೇವತಾ ಮೂರ್ತಿಯನ್ನು ಇಲ್ಲಿನ ಭಕ್ತರು ಪ್ರತೀ ವರ್ಷದ ಶಿವರಾತ್ರಿ ಹಾಗೂ ಯುಗಾದಿಯಂದು ಪೂಜಿಸಿಕೊಂಡು ಬರುತ್ತಿದ್ದಾರೆ.
ಕಲ್ಲಿನಲ್ಲಿ ಒಡಮೂಡಿದ ಬಸವಣ್ಣನನ್ನು ತೊಳೆದು ಪೂಜಿಸಲು ನೀರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಆ ಬಸವಣ್ಣನೇ ಒಣಗಿ ನಿಂತ ಕಾವೇರಿ ಒಡಲಿನಲ್ಲಿ ನೀರನ್ನು ಹರಿಸುವ ಮೂಲಕ ಜೀವ ಎರೆಯುತ್ತಿದ್ದಾನೆ ಎಂಬುದು ಇಲ್ಲಿನ ಭಕ್ತರ ನಂಬಿಕೆ.
ಬೇಸಿಗೆಯ ಕಾವು ದಿನೇ ದಿನೇ ಏರುಗತಿಯಲ್ಲಿದ್ದು ಅಲ್ಲಲ್ಲಿ ಗುಂಡಿಗಳಲ್ಲಿ ಕಲ್ಲುಗಳ ಪದರಗಳಲ್ಲಿ ಇದ್ದಂತಹ ನೀರು ಇಂಗಿ ಹೋಗಿದ್ದು ಜಲಚರಗಳ ಮಾರಣ ಹೋಮವಾಗಿದ್ದ ಈ ಸಂದರ್ಭದಲ್ಲಿ ಕಾವೇರಿಯಲ್ಲಿ ನೀರು ಬರುತ್ತಿರುವುದು ಮಾತ್ರ ನಂಬಲಸಾಧ್ಯ. - ಕೆ.ಎಸ್.ಮೂರ್ತಿ