ಸೋಮವಾರಪೇಟೆ, ಏ. ೨೯: ಪಟ್ಟಣದ ಅಕ್ಕಮಹಾದೇವಿ ರಸ್ತೆಯಲ್ಲಿ ರುವ ಅಕ್ಕಮಹಾದೇವಿ ಮಂಟಪದಲ್ಲಿ ವೀರಶೈವ ಸಮಾಜದ ಅಕ್ಕನ ಬಳಗದ ವತಿಯಿಂದ ೧೨ನೇ ಶತಮಾನದ ಶರಣೆ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭ ಅಕ್ಕನ ಬಳಗದ ಉಪಾಧ್ಯಕ್ಷರಾದ ಗೀತಾರಾಜು, ಕಾರ್ಯದರ್ಶಿ ಮಾಯಾ ಗಿರೀಶ್ ಹಾಗೂ ವೀರಶೈವ ಸಮಾಜದ ಯಜಮಾನರಾದ ಬಿ.ಪಿ. ಶಿವಕುಮಾರ್ ಶೆಟ್ರು ಬಿ.ಆರ್. ಮೃತ್ಯುಂಜಯ ಹಾಗೂ ಅಕ್ಕನ ಬಳಗದ ಸದಸ್ಯರು ಮತ್ತು ವೀರಶೈವ ಸಮಾಜದ ಪ್ರಮುಖರು ಹಾಜರಿದ್ದರು.