ವೀರಾಜಪೇಟೆ, ಏ. ೨೮: ವಿ.ವೈ.ಸಿ. ಫುಟ್ಬಾಲ್ ಕ್ಲಬ್ ಕೋಟೆಕೊಪ್ಪ ವೀರಾಜಪೇಟೆ ಇವರ ವತಿಯಿಂದ ನಾಲ್ಕನೆ ವರ್ಷದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟವನ್ನು ಮೇ ೩ ರಿಂದ ೫ ರವರೆಗೆ ದೇವಣಗೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಸಲಾಗುವುದು ಎಂದು ಕ್ಲಬ್ನ ಅಧ್ಯಕ್ಷ ನರೇಂದ್ರ ತಿಳಿಸಿದ್ದಾರೆ.
ಪತ್ರಿಕೆಗೆ ಮಾಹಿತಿ ನೀಡಿ ಕಳೆದ ನಾಲ್ಕು ವರ್ಷದಿಂದ ಕ್ಲಬ್ನ ಸದಸ್ಯರು, ದಾನಿಗಳು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ೫+೨ ಮಾದರಿಯಲ್ಲಿ ನಡೆಯುವ ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಲಾಗುವುದು. ಈಗಾಗಲೇ ೪೦ಕ್ಕೂ ಅಧಿಕ ತಂಡಗಳು ಹೆಸರು ನೋಂದಾಯಿಸಿಕೊAಡಿದ್ದು ತಾ. ೩೦ ಕೊನೆಯ ದಿನವಾಗಿದೆ ಎಂದು ಹೇಳಿದರು.
ಕ್ಲಬ್ನ ಗೌರವ ಅಧ್ಯಕ್ಷ ಗೋಪಿ, ಉಪಾಧ್ಯಕ್ಷ ರಂಜಿತ್, ಕ್ರೀಡಾ ಸಂಚಾಲಕ ವಿಕಾಸ್ ಮತ್ತಿತರರು ಉಪಸ್ಥಿತರಿದ್ದರು.