ಮಡಿಕೇರಿ, ಏ. ೨೮: ಕಳೆದ ಐದು ವರ್ಷಗಳ ಹಿಂದೆ ಸಿದ್ದಾಪುರದ ಪತ್ರಕರ್ತ ಎಂ.ಎ. ಅಜೀಜ್ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದ ನೆಲ್ಯಹುದಿಕೇರಿ ನಿವಾಸಿ ದೀಪಕ್‌ನನ್ನು ಅಪರಾಧಿ ಎಂದು ಮಡಿಕೇರಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ. ಈತನಿಗೆ ೯ ಸಾವಿರ ದಂಡ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದರೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಲಾಗಿದೆ. ಅಜೀಜ್ ಪರವಾಗಿ ಸಿದ್ದಾಪುರದ ವಕೀಲ ಅಜರುದ್ದೀನ್ ವಾದ ಮಂಡಿಸಿದ್ದರು.