ಕೂಡಿಗೆ, ಏ. ೨೮: ಕುಶಾಲನಗರ ಕಡೆಯಿಂದ ಹಾರಂಗಿ ಕಡೆಗೆ ಬರುತ್ತಿದ್ದ ಕಾರು ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರಿಗೆ ತೀವ್ರವಾಗಿ ಗಾಯವಾದ ಘಟನೆ ಸಂಜೆ ಸಂಭವಿಸಿದೆ.

ಕುಶಾಲನಗರ ಕಡೆಯಿಂದ ಹಾರಂಗಿ ಕಡೆಗೆ ಹೋಗುತ್ತಿದ್ದ ಕಾರು

(ಕೆ. ಎ. ೦೪.ಎಂ ಹೆಚ್.೬೧೫೧) ಹಾರಂಗಿ ಮುಖ್ಯ ರಸ್ತೆಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ನಾಲ್ವರಿಗೆ ಕಾಲು ಭಾಗಕ್ಕೆ ತೀವ್ರ ತರವಾದ ಗಾಯವಾಗಿದ್ದು, ಓರ್ವನ ಕಾಲು ತುಂಡಾಗಿದೆ. ಗಾಯಾಳುಗಳನ್ನು ಕುಶಾಲನಗರದ ಸಮುದಾಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕಾಶಿನಾಥ್ ಬಗಲಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.