ಕಾಯಪಂಡ ಶಶಿ ಸೋಮಯ್ಯ

(ಸಹಕಾರ: ಶ್ರೀರಕ್ಷಾ)

ಮಡಿಕೇರಿ, ಏ. ೨೮: ಕೊಡವ ಜನಾಂಗ, ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ ಸೇರಿದಂತೆ ಇಡೀ ಭಾರತ ದೇಶಕ್ಕೆ ಇದು ಅತ್ಯಂತ ಹೆಮ್ಮೆಯ ವಿಚಾರ. ಏ. ೨೮ರ ಭಾನುವಾರ ಅಪರಾಹ್ನ ೩.೩೦ರ ವೇಳೆಗೆ ಕೊಡವ ಕೌಟುಂಬಿಕ ಹಾಕಿ ಉತ್ಸವ ವಿಶ್ವ ದಾಖಲೆಯಾದ ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಅಧಿಕೃತವಾಗಿ ದಾಖಲೆಯಾಗು ತ್ತಿರುವ ವಿಷಯವನ್ನು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ನ ತಂಡದ ಮುಖ್ಯಸ್ಥರು ನಾಪೋಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪ್ರಕಟಿಸಿದಾಗ ಸುಮಾರು ೩೫ ಸಾವಿರಕ್ಕೂ ಅಧಿಕ ಮಂದಿ ಕ್ರೀಡಾಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಕಿಕ್ಕಿರಿದು ನೆರೆದಿದ್ದ ಹಾಕಿ ಅಭಿಮಾನಿಗಳು ಒಕ್ಕೊರಲಿನಿಂದ ಜಯಘೋಷದ ಮೂಲಕ ಈ ಕ್ಷಣವನ್ನು ಸಾಕ್ಷೀಕರಿಸಿದರು. ಇತಿ ಹಾಸದಲ್ಲಿ ಹೊಸ ಸಾಧನೆಯಾಗಿ ಕುಂಡ್ಯೋಳAಡ ಕಪ್ ಹಾಕಿ ಕಾರ್ನಿವಲ್ ದಾಖಲೆ ಬರೆಯಿತು.

ಭಾರೀ ರೋಮಾಂಚಕಾರಿಯಾಗಿ ಜರುಗಿದ ಕುಂಡ್ಯೋಳAಡ ಕಪ್ ಕೊಡವ ಕೌಟುಂಬಿಕ ಹಾಕಿ ಉತ್ಸವದ ಫೈನಲ್ ಪಂದ್ಯ ಸುಮಾರು ಎರಡೂವರೆ ಗಂಟೆಗಳ ಕಾಲ ಹಾಕಿ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಬಲಿಷ್ಠ ತಂಡಗಳಾಗಿದ್ದ ಮಾಜಿ ಚಾಂಪಿಯನ್ ತಂಡಗಳಾದ ಚೇಂದAಡ ಹಾಗೂ ನೆಲ್ಲಮಕ್ಕಡ ಕುಟುಂಬ ತಂಡಗಳ ನಡುವಿನ ಹೋರಾಟ. ಒಮ್ಮೆ ಅತ್ತ... ಒಮ್ಮೆ ಇತ್ತ ತೊಯ್ದಾಡುತ್ತಿದ್ದ ವಿಜಯಲಕ್ಷಿö್ಮ ಸಮಬಲದ ಹೋರಾಟ, ಸುದೀರ್ಘ ಅವಧಿ ತನಕ ಮುಂದುವರಿದ ಪಂದ್ಯ, ಕುಂಡ್ಯೋಳAಡ ಕಪ್‌ನ ವೈಭವಕ್ಕೆ ಸಾಕ್ಷಿಯಾಯಿತು. ತೀರಾ ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಕೊನೆಗೂ ವಿಜಯಲಕ್ಷಿö್ಮ ಚೇಂದAಡ ಕುಟುಂಬಕ್ಕೆ ಒಲಿಯುವುದರೊಂದಿಗೆ ವಿಜೃಂಭಣೆಯ ಸನ್ನಿವೇಶ ಸೃಷ್ಟಿಸಿತು. ಚೇಂದAಡ ಕುಟುಂಬದ ತಂಡ ೮-೭ ಗೋಲುಗಳಿಂದ ನೆಲ್ಲಮಕ್ಕಡ ಎದುರು ಜಯ ಸಾಧಿಸಿದ ಸಂದರ್ಭ ಇಡೀ ಮೈದಾನದಲ್ಲಿ ಕಿಕ್ಕಿರಿದು ನೆರೆದಿದ್ದವರಿಂದ ಭಾರೀ ಸಂಭ್ರಮಾಚರಣೆ ಕಂಡು ಬಂದಿತು.

ಪ್ರತಿಯೊಬ್ಬರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಪಂದ್ಯ ಒಂದೆಡೆಯಾದರೆ, ಸಮಬಲದ ಹೋರಾಟ ದಲ್ಲಿ ವಿಜಯಲಕ್ಷಿö್ಮ ಅತ್ತಿಂದಿತ್ತ ವಾಲುತ್ತಿದ್ದುದು ಹಾಕಿ ರೋಚಕತೆಯನ್ನು ಇಮ್ಮಡಿಗೊಳಿಸಿತ್ತು. ವಿಶೇಷ ಆಕರ್ಷಣೆಯ ಫೈನಲ್ ಪಂದ್ಯ ಗಿನ್ನೀಸ್ ದಾಖಲೆಯಲ್ಲಿ ಸೇರ್ಪಡೆಯಾದ ವೈಭವೋಪೇತ ಸನ್ನಿವೇಶದ ನಡುವೆ ೨೪ ವರ್ಷಗಳ ಕೊಡವ ಕೌಟುಂಬಿಕ ಹಾಕಿ ಇತಿಹಾಸದಲ್ಲಿ ಹೊಸದೊಂದು ದಾಖಲೆಯನ್ನು ಸೃಷ್ಟಿಸಿದಂತಾಗಿದೆ. ಈ ಪಂದ್ಯ ನಿರ್ಣಾಯಕವಾಗಿ ಚೇಂದAಡ ಗೆಲುವು ಖಚಿತವಾದ ಬಳಿಕ ಈ ಪಂದ್ಯಾಟಕ್ಕೆ ಆಗಮಿಸಿದ್ದ ಗಿನ್ನೀಸ್ ದಾಖಲೆ ತಂಡದ ಮುಖ್ಯಸ್ಥರಾದ ಸ್ವಪ್ನಿಲ್ ಅವರು ಕೊಡವ ಹಾಕಿ ಉತ್ಸವ, ವಿಶ್ವದಲ್ಲಿ ಅತೀ ಹೆಚ್ಚು ತಂಡಗಳ ಭಾಗವಹಿಸುವಿಕೆ ಹಾಗೂ ಲಾಂಗೆಸ್ಟ್ ಹಾಕಿ ಟೂರ್ನಮೆಂಟ್ ಇನ್‌ದ ವರ್ಲ್ಡ್ ಎಂಬ ದಾಖಲೆಗೆ ಪಾತ್ರವಾಗುತ್ತಿರುವುದನ್ನು ಅಧಿಕೃತವಾಗಿ ಪ್ರಕಟಿಸಿದರು.

ತೊಯ್ದಾಡಿದ ವಿಜಯಲಕ್ಷಿö್ಮ:

ಚೇಂದAಡ ಚಾಂಪಿಯನ್

೨೪ನೆಯ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಚಾಂಪಿಯನ್ ಆಗಿ ೨೦೧೭ರ ಬಿದ್ದಾಟಂಡ ಕಪ್ ಹಾಗೂ ೨೦೧೮ರ ಕುಲ್ಲೇಟಿರ ಕಪ್ ವಿಜೇತ ಚೇಂದAಡ ಕುಟುಂಬ ನಾಪೋಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲೇ ಮೂರನೆಯ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು.

ಎದುರಾಳಿಯಾಗಿದ್ದ ನೆಲ್ಲಮಕ್ಕಡ ವಿರುದ್ಧ ಚೇಂದAಡ ಆರಂಭದ ಎರಡು ಕ್ವಾರ್ಟರ್‌ನಲ್ಲಿ ಪೂರ್ಣ ಹಿಡಿತ ಸಾಧಿಸಿತ್ತು. ಆದರೆ, ಪಂದ್ಯದ ಮಧ್ಯಂತರ ಅವಧಿ ಬಳಿಕ ನಡೆದದ್ದೇ ಬೇರೆ. ಚೇಂದAಡ ಕುಟುಂಬದ ಮಾಜಿ ಒಲಂಪಿಯನ್ ನಿಖಿನ್ ತಿಮ್ಮಯ್ಯ ದಾಖಲಿಸಿದ ೨ ಗೋಲಿನ ಹಿನ್ನೆಡೆಯ ಆಘಾತದಿಂದ ನೆಲ್ಲಮಕ್ಕಡ ಪುಟಿದೆ ದ್ದಿತು. ಮೂರನೆಯ ಅವಧಿಯಲ್ಲಿ ನೆಲ್ಲಮಕ್ಕಡ ಮೊದಲ ಗೋಲು ದಾಖಲಿಸಿ ಅಂತರವನ್ನು ೨-೧ಕ್ಕೆ ಇಳಿಸಿತು. ಕೊನೆಯ ಕ್ವಾರ್ಟರ್‌ನಲ್ಲಿಯೂ ಮತ್ತೊಂದು ಗೋಲು ದಾಖಲಿಸಿದಾಗ ಅಂತರ ೨-೨ರಿಂದ ಸಮವಾಯಿತು. ನಂತರ ತಲಾ ಐದೈದು ಅವಕಾಶದ ಪೆನಾಲ್ಟಿ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕಾರ್ನರ್‌ನಲ್ಲಿಯೂ ಸಮಬಲ. ಸಡನ್ ಡೆತ್‌ನ ಎರಡು ಮೂರು ಅವಕಾಶದಲ್ಲಿಯೂ ಸಮಬಲ ಎದುರಾಗಿ ಫೈನಲ್ ಪಂದ್ಯದ ರೋಚಕತೆಯಿಂದ ಜನರು ಉಸಿರು ಬಿಗಿಹಿಡಿದು ನಿಲ್ಲುವಂತಾಗಿತ್ತು. ಕೊನೆಗೂ ವಿಜಯಲಕ್ಷಿö್ಮ ಚೇಂದAಡ ಕುಟುಂಬಕ್ಕೆ ಒಲಿದು ಅಂತಿಮವಾಗಿ ಚೇಂದAಡ ನೆಲ್ಲಮಕ್ಕಡ ಎದುರು ೮-೭ ಗೋಲಿನ ಜಯದೊಂದಿಗೆ ಚಾಂಪಿಯನ್ ಪಟ್ಟ ಧರಿಸಿತು. ಚೇಂದAಡ ನಿಖಿನ್ ತಿಮ್ಮಯ್ಯ, ಗೋಲ್‌ಕೀಪರ್ ಸೋನು ಸೇರಿದಂತೆ ಪ್ರಮುಖ ಆಟಗಾರರಿಂದ ಉತ್ತಮ ಪ್ರದರ್ಶನ ಕಂಡುಬAದರೆ ನೆಲ್ಲಮಕ್ಕಡ ಗೋಲ್‌ಕೀಪರ್‌ಗಳಾದ ಲಿವಿನ್ ಉತ್ತಪ್ಪ ಹಾಗೂ ಅಪ್ಪಣ್ಣ ವಿಶೇಷ ಗಮನಸೆಳೆದರು. ಪಂದ್ಯದ ತೀರ್ಪುಗಾರರಾಗಿ ಬೊಳ್ಳಚಂಡ ನಾಣಯ್ಯ ಹಾಗೂ ಚಂದಪAಡ ಆಕಾಶ್ ಕಾರ್ಯನಿರ್ವಹಿಸಿದರು. ರೂ. ೪ ಲಕ್ಷ ನಗದು, ಟ್ರೋಫಿ

ಕುಂಡ್ಯೋಳAಡ ಕಪ್ ಹಾಕಿ ವಿಜೇತ ಚೇಂದAಡ ತಂಡ ರೂ. ೪ ಲಕ್ಷ ನಗದು ಹಾಗೂ ಟ್ರೋಫಿ ಗಳಿಸಿತು. ರನ್ರ‍್ಸ್ ಪ್ರಶಸ್ತಿಗೆ ಭಾಜನವಾದ ನೆಲ್ಲಮಕ್ಕಡ ತಂಡ ರೂ. ೩ ಲಕ್ಷ ನಗದು ಹಾಗೂ ಟ್ರೋಫಿ ಪಡೆಯಿತು.

ಕುಲ್ಲೇಟಿರ ತಂಡಕ್ಕೆ ೩ನೇ ಸ್ಥಾನ

ಬೆಳಿಗ್ಗೆ ಮೂರು ಹಾಗೂ ನಾಲ್ಕನೆಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಕುಲ್ಲೇಟಿರ ತಂಡ ಕುಪ್ಪಂಡ(ಕೈಕೇರಿ) ಎದುರು ಪೆನಾಲ್ಟಿ ಶೂಟೌಟ್‌ನಲ್ಲಿ ಜಯ ಸಾಧಿಸಿ ಮೂರನೇ ಸ್ಥಾನ ಪಡೆಯಿತು. ಕುಲ್ಲೇಟಿರ ರೂ. ೨ ಲಕ್ಷ ನಗದು ಹಾಗೂ ಟ್ರೋಫಿ ಪಡೆಯಿತು.

ಕುಪ್ಪಂಡಕ್ಕೆ ರೂ. ೧ ಲಕ್ಷ

ಕುಪ್ಪಂಡ(ಕೈಕೇರಿ) ತಂಡ ರೂ. ೧ ಲಕ್ಷ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು.

ಹಾಕಿ ಉತ್ಸವ ಸಾಕ್ಷೀಕರಿಸಿದ ಗಿನ್ನಿಸ್ ತಂಡ

ಈ ಹಿಂದೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದ ಕೊಡವ ಕೌಟುಂಬಿಕ ಹಾಕಿ ಉತ್ಸವ ಈ ಬಾರಿ ಕುಂಡ್ಯೋಳAಡ ಕಪ್ ಹಾಕಿ ಮೂಲಕ ಗಿನ್ನಿಸ್ ದಾಖಲೆ ಸೃಷ್ಟಿಸಲಿದೆ ಎಂಬ ಆಶಾಭಾವನೆ ನಿಜವಾಗಿದೆ. ಬೆಳಿಗ್ಗೆ ಈ ತಂಡ ಮೈದಾನಕ್ಕೆ ಆಗಮಿಸಿ ಫೈನಲ್ ಪಂದ್ಯ ವೀಕ್ಷಣೆ ಮಾಡಿತ್ತು. ಪಂದ್ಯದ ಬಳಿಕ ತಂಡದ ಮುಖ್ಯಸ್ಥ ಸ್ವಪ್ನಿಲ್ ಗಿನ್ನಿಸ್ ದಾಖಲೆ ಸೇರ್ಪಡೆಯನ್ನು ಅಧಿಕೃತವಾಗಿ ಪ್ರಕಟಿಸಿದರು.

೪೮೩೪ ಆಟಗಾರರು ಭಾಗವಹಿಸಿದ ವಿಶ್ವದ ಅತಿದೊಡ್ಡ ಹಾಕಿ ಪಂದ್ಯಾವಳಿಯಾಗಿ ನಾಪೋಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕುಂಡ್ಯೋಳAಡ ಕಪ್ ದಾಖಲೆಗೆ ಸೇರುವುದಾಗಿ ಅವರು ಘೋಷಿಸಿದರು.