ಪಿ.ವಿ.ಪ್ರಭಾಕರ್
ನಾಪೋಕ್ಲು, ಏ. ೨೮: ವೈವಿಧ್ಯಮಯ ಕಾರ್ಯಕ್ರಮಗಳೊಂ ದಿಗೆ ಅಚ್ಚುಕಟ್ಟಾಗಿ ವಿಜೃಂಭಣೆಯಿAದ ನಡೆದ ೨೪ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಕುಂಡ್ಯೋಳAಡ ಕಪ್ ಹಾಕಿ ನಮ್ಮೆ ಮುಂದೆ ನಡೆಸುವ ಕುಟುಂಬಗಳಿಗೆ ಸವಾಲಾಗಿ ಪರಿಣಮಿ ಸಲಿದೆ ಎಂದು ರಾಜ್ಯ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.
ಕುಂಡ್ಯೋಳAಡ ಹಾಕಿ ನಮ್ಮೆಯ ಫೈನಲ್ ಪಂದ್ಯದ ಸಭಾ ಕಾರ್ಯ ಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಅವರು ಮಾತ ನಾಡಿದರು. ಕೊಡವ ಕೌಟುಂಬಿಕ ಹಾಕಿ ಆಟ ಮಾತ್ರವಲ್ಲ. ರಾಷ್ಟç ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿಯೂ ಇದು ನಮ್ಮೆಯಾಗಿ ರೂಪುಗೊಂಡಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಪ್ರಚಾರ ಪಡೆಯುತ್ತಿದೆ. ಎಲ್ಲರೂ ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.
ಕೊಡವ ಹಾಕಿ ಅಕಾಡೆಮಿ ಮುಂದಿನ ದಿನಗಳಲ್ಲಿ ಬಲಿಷ್ಠವಾಗಿ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ವಿರಾಜಪೇಟೆ ಸಮೀಪದ ತೋರ ಗ್ರಾಮದಲ್ಲಿ ೫ ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ. ಹಾಕಿ ಅಕಾಡೆಮಿ ಶೀಘ್ರವಾಗಿ ಅಲ್ಲಿ ಮೈದಾನ ನಿರ್ಮಿಸಿ ನಮ್ಮ ಮಕ್ಕಳ ಕ್ರೀಡಾ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಕೊಡವರು ಇಲ್ಲದಿದ್ದರೆ ಹಾಕಿ ಇಲ್ಲ; ಕೊಡಗು ಇಲ್ಲ ಎಂದ ಅವರು, ಆರ್ಥಿಕವಾಗಿ ಬಲಿಷ್ಠಿರಾಗಿರುವವರು ಕೊಡವ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದ ಅವರು ಕುಂಡ್ಯೋಳAಡ ಹಾಕಿ ನಮ್ಮೆ ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಂಡಿ ರುವುದು ಸಂತಸ ತಂದಿದೆ. ಇನ್ನು ಇದರ ಬಗ್ಗೆ ಯಾರೂ ಪ್ರಚಾರ ಪಡಿಸುವ ಅಗತ್ಯ ಇಲ್ಲ. ಎಲ್ಲವೂ ತನ್ನಿಂದ ತಾನೇ ನಡೆಯುತ್ತದೆ. ಜಿಲ್ಲೆಯಲ್ಲಿ ಹಾಕಿ ಸೇರಿದಂತೆ ಎಲ್ಲಾ ಕ್ರೀಡೆಗೂ ಬೇಕಾದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಮಾತನಾಡಿ ಸಾಧ್ಯ ವಿಲ್ಲ ಎನ್ನುವುದಕ್ಕೆ ಕುಂಡ್ಯೋ ಳಂಡ ಕುಟುಂಬದ ಹಾಕಿ ನಮ್ಮೆ ಸಾಕ್ಷಿ. ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿದರೆ ಎಲ್ಲವೂ ಸಾಧ್ಯ. ೩೬೦ ತಂಡಗಳನ್ನು ಒಗ್ಗೂಡಿಸಿ ಗಿನ್ನೀಸ್ ದಾಖಲೆ ಮಾಡಿ ರುವುದು ಕುಂಡ್ಯೋಳAಡ ಹಾಕಿ ನಮ್ಮೆಯ ಸಾಧನೆ ಎಂದರು. ಮುಂದಿನ ವರ್ಷ ೨೦೨೫ನೆಯ ಇಸವಿಯಲ್ಲಿ ಮುದ್ದಂಡ, ೨೦೨೬ರಲ್ಲಿ ಚೇನಂಡ, ೨೦೨೭ರಲ್ಲಿ ಅಜ್ಜುಕುಟ್ಟಿರ ಕುಟುಂಬಗಳ ಸಾರಥ್ಯದಲ್ಲಿ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಹಾಕಿ ನಮ್ಮೆ ನಡೆಯಲಿದೆ ಎಂದರು. ಡಾ. ಕೊಟ್ಟಂಗಡ ಪೆಮ್ಮಯ್ಯ (ಐಆರ್ಎಸ್) ಮಾತನಾಡಿ, ಜಿಲ್ಲೆಯ ಎಲ್ಲಾ ಕೊಡವರನ್ನು ಒಂದೇ ಸ್ಥಳದಲ್ಲಿ ಒಗ್ಗೂಡಿಸುವುದು ತುಂಬಾ ಕಷ್ಟ. ಅದಕ್ಕೆ ೧೯೯೭ರಲ್ಲಿ ಪಾಂಡAಡ ಕುಟ್ಟಪ್ಪ ಅಡಿಗಲ್ಲು ಹಾಕಿದರು. ೨೪ನೆಯ ವರ್ಷದಲ್ಲಿ ೩೬೦ ತಂಡಗಳನ್ನು ನಾಪೋಕ್ಲುವಿನಲ್ಲಿ ಕುಂಡ್ಯೋಳAಡ ಕಪ್ ಹಾಕಿ ನಮ್ಮೆಯಲ್ಲಿ ಒಗ್ಗೂಡಿಸಿ ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಳಿಸಿರುವುದು ಸಂತಸ ತಂದಿದೆ. ಇದೇ ರೀತಿ, ಹಾಕಿ ನಮ್ಮೆ ಅಲ್ಲದೆ ಎಲ್ಲಾ ಸಂದರ್ಭದಲ್ಲಿಯೂ ಕೊಡವರು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಕೊಡಗಿನಲ್ಲಿ ಹೆಚ್ಚಿನ ಜನರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ನಿವಾರಣೆಗೆ ಪ್ರತಿ ಗ್ರಾಮದಲ್ಲಿ ಇರುವ ಮೈದಾನದಲ್ಲಿ ಸಂಜೆ ೩೦ರಿಂದ ೪೦ ನಿಮಿಷ ಎಲ್ಲರೂ ಸೇರಿ ಆಟವಾಡುವುದರ ಮೂಲಕ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಹೈದರಾಬಾದಿನ ವಿದೇಶಿ ಆಸ್ತಿ ತನಿಖಾ ಘಟಕದ ಉಪನಿರ್ದೇಶಕ ಮುಕ್ಕಾಟಿರ ಪುನೀತ್ ಕುಟ್ಟಯ್ಯ ಮಾತನಾಡಿ, ೨೪ ವರ್ಷಗಳ ಹಿಂದೆ ಪಾಂಡAಡ ಕುಟ್ಟಪ್ಪ ನೆಟ್ಟ ಗಿಡ ಇಂದು ಹೆಮ್ಮೆರವಾಗಿ ಬೆಳೆದು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆಗೊಂಡಿದೆ. ಅದರೊಂದಿಗೆ ಕೊಡಗಿನಿಂದ ಹೊರಗಿರುವ ಪ್ರತಿಯೊಬ್ಬ ಕೊಡವರು ವರ್ಷಕ್ಕೆ ಒಮ್ಮೆಯಾದರೂ ತಮ್ಮ ಗ್ರಾಮಕ್ಕೆ ಆಗಮಿಸಿ ಐನ್ಮನೆ, ಮಾತೆ ಕಾವೇರಿ ಹಾಗೂ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳಕ್ಕೆ ಭೇಟಿ ನೀಡುವುದರ ಮೂಲಕ ತಮ್ಮ ನೆಲ, ಹಿರಿಯರು, ದೇವರನ್ನು ನೆನೆಸಿಕೊಳ್ಳುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪುಚ್ಚಿಮಾಡ ಮುತ್ತಪ್ಪ, ಇಬ್ಬನಿ ರೆಸಾರ್ಟ್ನ ಸೆಬಾಸ್ಟಿನ್, ಮಾರುತಿ ಸುಜುಕಿಯ ಪೀಟರ್ ಮಾತನಾಡಿದರು. ವೇದಿಕೆಯಲ್ಲಿ ಕೋದಂಗಡ ರವಿ ಕರುಂಬಯ್ಯ, ಪಾಂಡAಡ ಲೀಲಾ ಕುಟ್ಟಪ್ಪ, ಡಾ. ಅಂಜಪರವAಡ ಸುಬ್ಬಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಫೆಡರೇಶನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಮತ್ತಿತರರು ಇದ್ದರು.ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ೨೦೨೫ರಲ್ಲಿ ಮಡಿಕೇರಿಯಲ್ಲಿ ಮುದ್ದಂಡ ಕುಟುಂಬಸ್ಥರು ಆಯೋಜಿಸಲಿದ್ದಾರೆ. ಸಾಂಪ್ರದಾಯಿಕ ಧಿರಿಸಿನಲ್ಲಿ ದುಡಿಕೊಟ್ಟ್ ಪಾಟ್ ಸಹಿತವಾಗಿ ಮುದ್ದಂಡ ಕುಟುಂಬಸ್ಥರು ಆಗಮಿಸಿದರು. ಇವರನ್ನು ವಿಐಪಿ ಗ್ಯಾಲರಿಯಲ್ಲಿ ನಿಗದಿ ಮಾಡಿದ್ದ ಸ್ಥಳದಲ್ಲಿ ಕೂರಿಸಲಾಯಿತು. ಇದಾದ ಬಳಿಕ ಕುಂಡ್ಯೋಳAಡ ಕುಟುಂಬದ ಮಹಿಳೆಯರು ತಳಿಯತಕ್ಕಿಬೊಳಕ್ ಸಹಿತವಾಗಿ ಹಾಗೂ ಕೊಡವ ಹಾಕಿ ಅಕಾಡೆಮಿ ಪದಾಧಿಕಾರಿಗಳು, ಕುಂಡ್ಯೋಳAಡ ಕುಟುಂಬಸ್ಥರು ಸೇರಿ ಮೈದಾನದ ಸುತ್ತ ಮೆರವಣಿಗೆಯೊಂದಿಗೆ ಕರೆತಂದು ಸ್ವಾಗತಿಸಿದರು.೨೦೨೩ರಲ್ಲಿ ಹಾಕಿ ಉತ್ಸವ ಕುಟುಂಬದವರು ಕೊಡವ ಹಾಕಿ ಅಕಾಡೆಮಿಗೆ ರೂ. ೫ ಲಕ್ಷ ಮೊತ್ತವನ್ನು ಠೇವಣಿಯಾಗಿ ನೀಡಿದರು. ಇದರ ಬಡ್ಡಿಯಲ್ಲಿ ಮುಂದಿನ ವರ್ಷದಿಂದ ಉದಯೋನ್ಮುಖ ಯುವ ಆಟಗಾರ-ಆಟಗಾರ್ತಿಗೆ ಬಹುಮಾನ ನೀಡಲು ತೀರ್ಮಾನಿಸಲಾಗಿದೆ. ಮನು ಮುತ್ತಪ್ಪ ನೇತೃತ್ವದಲ್ಲಿ ಹಣದ ಚೆಕ್ ಅನ್ನು ಅಕಾಡೆಮಿ ಪ್ರಮುಖರಿಗೆ ಹಸ್ತಾಂತರಿಸಲಾಯಿತು. ಅಪ್ಪಚೆಟ್ಟೋಳಂಡ ಕುಟುಂಬ ಕೊಡವ ಅಂಪರ್ಸ್ ಕ್ಷೇಮನಿಧಿಗೂ ರೂ. ೨ ಲಕ್ಷ ಒದಗಿಸಿದ್ದು, ಇದರ ಚೆಕ್ ಅನ್ನು ಅಂಪರ್ಸ್ಗಳಿಗೆ ನೀಡಲಾಯಿತು.ಮೈಸೂರು ಮಹಾರಾಜ ಲೋಕಸಭಾ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಟದತ್ತ ಒಡೆಯರ್ ಕುಂಡ್ಯೋಳAಡ ಹಾಕಿ ನಮ್ಮೆಗೆ ಆಗಮಿಸಿ ಫೈನಲ್ ಪಂದ್ಯವನ್ನು ವೀಕ್ಷಿಸಿದರು.ಫೈನಲ್ ಪಂದ್ಯದ ಆಕರ್ಷಣೆ ಹೆಚ್ಚಿಸಲು ಕುಂಡ್ಯೋಳAಡ ಕುಟುಂಬದವರು ಬೊಂಬೆ ವೇಷಧಾರಿಗಳನ್ನು ಕರೆತಂದಿದ್ದರು. ಇವರು ಮೈದಾನದ ಸುತ್ತ ತಿರುಗಾಡುತ್ತಾ ಪಂದ್ಯಕ್ಕೆ ವಿಶೇಷ ಕಳೆ ನೀಡಿದರು.ಕುಂಡ್ಯೋಳAಡ ಕಪ್ ಹಾಕಿ ಪಂದ್ಯಾವಳಿಯ ಸರಣಿ ಶ್ರೇಷ್ಠ ಆಟಗಾರರಾಗಿ ಮಾಜಿ ಒಲಂಪಿಯನ್ ಚೇಂದAಡ ನಿಖಿನ್ ತಿಮ್ಮಯ್ಯ ಆಯ್ಕೆಯಾದರು. ಪಂದ್ಯಾವಳಿಯ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿರುವ ನಿಖಿನ್ ತಿಮ್ಮಯ್ಯ ರೂ. ೧.೭೦ ಲಕ್ಷ ರೂ. ಮೌಲ್ಯದ ಎಲೆಕ್ಟಿçಕ್ ಬೈಕನ್ನು ಕೊಡಗೆಯಾಗಿ ಪಡೆದರು.ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಕ್ರೀಡಾಂಗಣಕ್ಕೆ ಆಗಮಿಸಿ ಫೈನಲ್ ಪಂದ್ಯ ವೀಕ್ಷಿಸಿ, ಬಹುಮಾನ ವಿತರಣೆಯಲ್ಲಿ ಪಾಲ್ಗೊಂಡರು. ಟ್ರೋಫಿ ದಾನಿಗಳು
ಪ್ರಥಮ ಬಹುಮಾನವನ್ನು ದಿ. ಬಡುವಂಡ ಅಪ್ಪಯ್ಯ ಹಾಗೂ ಮುತ್ತವ್ವ ಅವರ ಜ್ಞಾಪಕಾರ್ಥ ಬಡುವಂಡ ವಿಜಯಾ, ಪ್ರಭಾ ವಿಜಯ ಕುಟುಂಬಸ್ಥರು ನೀಡಿದರು. ದ್ವಿತೀಯ ಬಹುಮಾನವನ್ನು ದಿ. ಗುಮ್ಮಟ್ಟಿರ ರಾಮು ಸೋಮಯ್ಯ ಅವರ ಜ್ಞಾಪಕಾರ್ಥ ಶ್ರೀಮತಿ ಶಾಂತಿ ಸೋಮಯ್ಯ, ಕಿಲನ್ ಗಣಪತಿ, ಕವಿನ್ ಗಣಪತಿ ಮತ್ತು ಕುಟುಂಬಸ್ಥರು ನೀಡಿದರು.
ತೃತೀಯ ಬಹುಮಾನವನ್ನು ಮೂಕೊಂಡ ಮಾದಪ್ಪ, ದೇವಣಗೇರಿ ಇವರ ಜ್ಞಾಪಕಾರ್ಥ ಅವಿನ್ ಸ್ಪೋರ್ಟ್ಸ್ ಅವರು ನೀಡಿದರೆ, ನಾಲ್ಕನೆಯ ಬಹುಮಾನವನ್ನು ದಿ. ಮಾಳೆಯಂಡ ಎಸ್.ಚಂಗಪ್ಪ ಮತ್ತು ಎಸ್. ನಾಣಯ್ಯ ಅವರ ಜ್ಞಾಪಕಾರ್ಥ ಮಾಳೆಯಂಡ ಅಕ್ಕವ್ವ ಮತ್ತು ಕುಟುಂಬಸ್ಥರು ಹಾಗೂ ಮಾಳೆಯಂಡ ಚೋಂದಮ್ಮ ಮತ್ತು ಕುಟುಂಬಸ್ಥರು ನೀಡಿದರು.ಹಾಕಿ ನಮ್ಮೆಯ ಸಾಧಕರು
ಕುಂಡ್ಯೋಳAಡ ಹಾಕಿ ನಮ್ಮೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ ತಂಡಗಳು ಹಾಗೂ ಆಟಗಾರರು.
ಫೇರ್ ಪ್ಲೇ ತಂಡ: ನಾಪಂಡ, ಶಿಸ್ತಿನ ತಂಡ: ಕಂಬೀರAಡ, ಗೋಲ್ ಆಫ್ ದಿ ಟೂರ್ನಮೆಂಟ್: ಐನಂಡ ನಾಚಪ್ಪ, ಬೆಸ್ಟ್ ಅಪ್ಕಮಿಂಗ್ ಆಟಗಾರ್ತಿ: ಮುಕ್ಕಾಟಿರ ಕಾವ್ಯ (ಕಡಗದಾಳು), ಬೆಸ್ಟ್ ಅಪ್ಕಮಿಂಗ್ ಆಟಗಾರ: ಬೊವ್ವೇರಿಯಂಡ ಗ್ಯಾನ್ ಉತ್ತಪ್ಪ, ಯಂಗೆಸ್ಟ್ ಪ್ಲೇಯರ್: ಅಲ್ಲಾರಂಡ ತನುಷ್, ಬೆಸ್ಟ್ ಮಹಿಳಾ ಆಟಗಾರ್ತಿ: ನಾಪಂಡ ಸೌಮ್ಯ, ಬೆಸ್ಟ್ ಗೋಲ್ಕೀಪರ್: ಕುಲ್ಲೇಟಿರ ವಚನ್ ಕಾಳಪ್ಪ, ಬೆಸ್ಟ್ ಫಾರ್ವರ್ಡ್: ನೆಲ್ಲಮಕ್ಕಡ ಸೋಮಯ್ಯ, ಬೆಸ್ಟ್ ಹಾಫ್: ಚೆಪ್ಪುಡಿರ ಚೇತನ್ ಚಿಣ್ಣಪ್ಪ, ಬೆಸ್ಟ್ ಡಿಫೆಂಡರ್: ಪುದಿಯೊಕ್ಕಡ ಸೂರಜ್, ಅತೀ ಹೆಚ್ಚು ಗೋಲು ದಾಖಲಿಸಿರುವವರು: ಚೇಂದAಡ ನಿಖಿನ್ ತಿಮ್ಮಯ್ಯ.ಕುಂಡ್ಯೋಳAಡ ಕಪ್ ಹಾಕಿ ಉತ್ಸವವನ್ನು ಸುಮಾರು ೩೫ ಸಾವಿರದಷ್ಟು ಮಂದಿ ಕ್ರೀಡಾಭಿಮಾನಿಗಳು ಸಾಕ್ಷೀಕರಿಸಿದರು.