ಮುಳ್ಳೂರು, ಏ. ೨೮: ಸಮೀಪದ ಮೂದರವಳ್ಳಿ ಗ್ರಾಮದಲ್ಲಿ ಸುಮಾರು ಆರುನೂರು ವರ್ಷಗಳ ಇತಿಹಾಸ ಇರುವ ಶ್ರೀ ಈಶ್ವರ ಹಾಗೂ ಕಟ್ಟೆ ಬಸವಣ್ಣ ಸ್ವಾಮಿ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ದೇವಸ್ಥಾನಗಳ ಪ್ರತಿಷ್ಠಾಪನಾ ಕಾರ್ಯಕ್ರಮ ತಾ.೨೯ ರಂದು (ಇಂದು) ನಡೆಯಲಿದೆ.

ಭಾನುವಾರ ಬೆಳಗ್ಗೆ ೮ ಗಂಟೆಯಿAದ ದೇವಸ್ಥಾನದಲ್ಲಿ ಗಂಗಾಪೂಜೆ, ಧ್ವಜಾರೋಹಣ ಯಾಗ, ಮಂಟಪ ಪ್ರವೇಶ, ಪರಿವಾರ ದೇವತೆಗಳ ಪೂಜೆ, ಮಹಾ ಮಂಗಳಾರತಿ, ಗಣಪತಿ ಪೂಜೆ ಪುಣ್ಯದ ನಂದಿ ಸ್ಥಳಶುದ್ಧಿಋತ್ವಗವರಣ, ನವಗ್ರಹ ಪೂಜೆ, ಪಂಚ ಕಳಸ ಪೂಜೆ, ದಿಕ್ಪಾಲಕ ಪೂಜೆ, ಸಪ್ತಸಭಾ ದೇವತೆ ಹಾಗೂ ಮೃತ್ಯುಂಜಯ ಪೂಜೆ ಸಮೇತ ಏಕಾದಶಿ ರುದ್ರ ಸಮೇತ ಪ್ರಧಾನ ಉಮಾಮಹೇಶ್ವರ ಕಳಸ ಸ್ಥಾಪನೆಯ ನಂತರ ಗಣಪತಿ ಹೋಮ ನೆರವೇರಿಸಲಾಯಿತು. ತದನಂತರ ಶಿವಗ್ರಹ ಸಮೇತ ಪರಿವಾರ ದೇವತಾ ಹೋಮ ಸಮೇತ ಪ್ರಧಾನ ರುದ್ರಹೋಮ, ಮಹಾ ಮಂಗಳಾರತಿ ನಂತರ ವಿಗ್ರಹ ಹುನಾದಿಗಳನ್ನು ನೆರವೇರಿಸಲಾಯಿತು.

ತಾ.೨೯ ರಂದು (ಇಂದು) ಬೆಳಗ್ಗಿನ ಜಾವ ೪ ಗಂಟೆಯಿAದ ದೇವಸ್ಥಾನದಲ್ಲಿ ಶ್ರೀ ಸ್ವಾಮಿಯವರಿಗೆ ರುದ್ರಾಭಿಷೇಕ ಅಲಂಕಾರ ಪ್ರಾಣ ಪ್ರತಿಷ್ಠಾಪನೆ ದೃಷ್ಟಿಪೂಜೆ, ನೇತ್ರ ಮಿಲನ ಮಹಾ ಪೂರ್ಣಾಹುತಿ ಕಳಸರೋಹಣ ಮುಂತಾದ ಪೂಜಾ ವಿಧಿ ವಿಧಾನದ ನಂತರ ೧೦ ಗಂಟೆಗೆ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

ಸಮಾರಂಭದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ, ಮಾಜಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಉದ್ಯಮಿ ಸುರೇಶ್, ಸೋಮವಾರಪೇಟೆ ಡಿವೈಎಸ್‌ಪಿ ಗಂಗಾಧರಪ್ಪ, ಜಿ.ಪಂ. ಮಾಜಿ ಸದಸ್ಯ ಸಿ.ಪಿ. ಪುಟ್ಟರಾಜು, ಮೂದರವಳ್ಳಿ ಕಟ್ಟೆ ಬಸವಣ್ಣ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಎ. ಪ್ರವೀಣ್, ಮೂದರವಳ್ಳಿ ಈಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಪಿ. ದಿನೇಶ್, ಪ್ರಮುಖರಾದ ಮಂಜಣ್ಣ, ಮೂರ್ತಿ ಮುಂತಾದವರು ಪಾಲ್ಗೊಳ್ಳುವರು ಎಂದು ದೇವಸ್ಥಾನ ಸಮಿತಿಯ ಪ್ರಕಟಣೆ ತಿಳಿಸಿದೆ.