ಗೋಣಿಕೊಪ್ಪಲು, ಏ. ೨೯: ಅಖಿಲ ಅಮ್ಮಕೊಡವ ಸಮಾಜದ ವತಿಯಿಂದ ಗೋಣಿಕೊಪ್ಪ ಸಮೀಪದ ಹಾತೂರು ಶಾಲಾ ಮೈದಾನದಲ್ಲಿ ೨ ದಿನಗಳ ಕಾಲ ಹಮ್ಮಿಕೊಂಡಿದ್ದ ಅಮ್ಮಕೊಡವ ಕ್ರಿಕೆಟ್ ನಮ್ಮೆಗೆ ವರ್ಣರಂಜಿತ ತೆರೆ ಎಳೆಯಲಾಯಿತು. ೨೪ ತಂಡಗಳು ಕ್ರಿಕೆಟ್ನಲ್ಲಿ ಭಾಗವಹಿಸಿ ದ್ದವು. ಅಂತಿಮ ಪಂದ್ಯದಲ್ಲಿ ಅಮ್ಮತ್ತಿರ ಕುಟುಂಬ ತಂಡ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಬಾನಂಡ ಕುಟುಂಬ ತಂಡವು ರನ್ನರ್ ಆಫ್ ಪ್ರಶಸ್ತಿಗೆ ತೃಪ್ತಿ ಪಟ್ಟು ಕೊಂಡಿತು. ಪಂದ್ಯದ ಆರಂಭದಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾನಂಡ ತಂಡವು ೬ ಓವರ್ನಲ್ಲಿ ೨೮ ರನ್ಗಳಿಸಿತು. ಅಮ್ಮತ್ತಿರ ತಂಡವು ಬಿಗಿ ಬೌಲಿಂಗ್ ಪ್ರದರ್ಶನ ನೀಡಿತು. ನಂತರ ಅಮ್ಮತ್ತಿರ ತಂಡವು ೨ ಓವರ್ಗಳು ಬಾಕಿ ಉಳಿದಿರು ವಂತೆಯೇ ನಿಗದಿತ ೨೮ ರನ್ಗಳನ್ನು ಬಾರಿಸಿ ಅಚ್ಚಿಯಂಡ ಕಪ್ ಅನ್ನು ತನ್ನದಾಗಿಸಿಕೊಂಡಿತು.
ವಿಜೇತ ತಂಡಕ್ಕೆ ೩೦ ಸಾವಿರ, ನಗದು ರನ್ನರ್ ಆಫ್ ತಂಡಕ್ಕೆ ೨೦ ಸಾವಿರ, ತೃತೀಯ ಸ್ಥಾನ ಪಡೆದ ತಂಡಕ್ಕೆ ಹಾಗೂ ೪ನೇ ಸ್ಥಾನಗಳಿಸಿದ ತಂಡಕ್ಕೆ ತಲಾ ೫ ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿಯನ್ನು ನೀಡಲಾಯಿತು. ತೃತೀಯ
(ಮೊದಲ ಪುಟದಿಂದ) ಸ್ಥಾನವನ್ನು ಕೊಂಡಿAಜಮ್ಮನ ಹಾಗೂ ೪ನೇ ಸ್ಥಾನವನ್ನು ಪುತ್ತಾಮನೆ ಕುಟುಂಬವು ಪಡೆಯಿತು. ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಬಹುಮಾನಗಳನ್ನು ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಯಾವುದೇ ಸಮಸ್ಯೆ ಎದುರಾದರೂ ವಾರ್ಷಿಕವಾಗಿ ನಡೆಸುವ ಕ್ರೀಡೋತ್ಸವವನ್ನು ತಪ್ಪದೆ ಪ್ರತಿ ವರ್ಷವೂ ನಡೆಸಬೇಕು. ಕ್ರೀಡೆಯ ಮೂಲಕ ವಾರ್ಷಿಕವಾಗಿ ಎಲ್ಲರೂ ಒಂದೆಡೆ ಸೇರುವ ಪ್ರಯತ್ನ ವರ್ಷದಿಂದ ವರ್ಷಕ್ಕೆ ಇಮ್ಮಡಿಯಾಗುತ್ತಿದೆ. ಇನ್ನು ಮುಂದೆಯೂ ಇನ್ನಷ್ಟು ಒಗ್ಗಟ್ಟು ಪ್ರದರ್ಶನವಾಗಬೇಕು ಸರ್ಕಾರದಿಂದ ಮಂಜೂರಾಗಿರುವ ೫ ಲಕ್ಷ ಅನುದಾನ ಉತ್ತಮ ರೀತಿಯಲ್ಲಿ ಸದ್ಬಳಕೆಯಾಗಲಿ ಎಂದರು.
ಅಖಿಲ ಅಮ್ಮಕೊಡವ ಸಮಾಜ, ಅಚ್ಚಿಯಂಡ ಕುಟುಂಬಸ್ಥರು, ಅಖಿಲ ಅಮ್ಮಕೊಡವ ವಿದ್ಯಾಭಿವೃದ್ದಿ ಸಂಘ, ಅಖಿಲ ಅಮ್ಮಕೊಡವ ಸಮಾಜ ಬೆಂಗಳೂರು, ಶ್ರೀಕೃಷ್ಣ ಅಮ್ಮಕೊಡವ ಸಂಘ ಕೋತೂರು, ಕಾವೇರಿ ಅಮ್ಮಕೊಡವ ಮಹಿಳಾ ಸಂಘ ಕೊಡಗು, ಕಂಗಳತನಾಡ್ ಅಮ್ಮಕೊಡವ ಸಂಘ ಮಾಯಮುಡಿ, ಅನ್ನಪೂರ್ಣೇಶ್ವರಿ ಮಹಿಳಾ ಸಂಘ ಕೋತೂರು ಹಾಗೂ ಕಾವೇರಿ ಅಮ್ಮಕೊಡವ ಸಾಂಸ್ಕೃತಿಕ ಸಂಘ ಮಡಿಕೇರಿ, ಇದರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ಅಚ್ಚಿಯಂಡ ಕುಟುಂಬಸ್ಥರ ಅಧ್ಯಕ್ಷ ಬೋಸ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಾಯಮಂಡ ಉಮೇಶ್ ಕೇಚಮಯ್ಯ, ಪಾಡಿಯಮ್ಮಂಡ ಜಾಲಿ, ಅಚ್ಚಿಯಂಡ ಚಂದ್ರಶೇಖರ್, ಅಮ್ಮಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಪುತ್ತಮನೆ ಅನಿಲ್ ಪ್ರಸಾದ್, ಅಚ್ಚಿಯಂಡ ಕುಟುಂಬದ ವ್ಯವಸ್ಥಾಪಕ ವೇಣುಗೋಪಾಲ್, ಕಾರ್ಯದರ್ಶಿಗಳಾದ ಅಚ್ಚಿಯಂಡ ಅಜಿತ್ ಹಾಗೂ ಅಚ್ಚಿಯಂಡ ಕುಟುಂಬಸ್ಥರು ಪಾಲ್ಗೊಂಡಿದ್ದರು. ಸದಸ್ಯರಾದ ದೃತಿ ಗಣೇಶ್ ಪ್ರಾರ್ಥಿಸಿ ಸ್ವರೂಪ್ ಧನು ಸ್ವಾಗತಿಸಿ, ಕಿಶೋರಿ, ಗೀತಾ, ನಿರೂಪಿಸಿ, ವಂದಿಸಿದರು. ಮಹಿಳೆಯರು ಸೇರಿದಂತೆ ಕ್ರೀಡಾಕೂಟಕ್ಕೆ ಆಗಮಿಸಿದ ಸಮಾಜ ಭಾಂದವರು ಸಾಂಪ್ರದಾಯಿಕ ಕೊಡವ ವಾಲಗಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
-ಹೆಚ್.ಕೆ.ಜಗದೀಶ್