ಗೋಣಿಕೊಪ್ಪ ವರದಿ, ಏ. ೨೭ : ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ಮಹಿಳೆಯರು ಸೇರಿದಂತೆ ೧೧ ತಂಡಗಳು ಗೆಲುವು ಸಾಧಿಸಿದವು.

ಮಹಿಳಾ ವಿಭಾಗ

ಮಣವಟ್ಟಿರಕ್ಕೆ ಅಚ್ಚಕಾಳೇರ ವಿರುದ್ದ ೩೨ ರನ್‌ಗಳ ಗೆಲುವು ದಕ್ಕಿತು. ಮಣವಟ್ಟೀರ ೫ ವಿಕೆಟ್ ನಷ್ಟಕ್ಕೆ ೬೨ ರನ್, ಅಚ್ಚಕಾಳೆರ ೨ ವಿಕೆಟ್‌ಗೆ ೩೦ ರನ್ ದಾಖಲಿಸಿತು. ಮಣವಟ್ಟಿರ ಸಂಗೀತಾ ೨೮, ಅಚ್ಚಕಾಳೇರ ಟೈನಿ ೧ ವಿಕೆಟ್, ಮಣವಟ್ಟಿರ ಶೃತಿ ೨ ವಿಕೆಟ್, ಸರಿತಾ ೧೨ ರನ್ ಪಡೆದರು. ನಂದೇಟಿರಕ್ಕೆ ಕಟ್ಟೇರ (ಅರಮೇರಿ) ವಿರುದ್ಧ ೨ ರನ್‌ಗಳ ರೋಚಕ ಗೆಲುವು ದೊರೆಯಿತು. ನಂದೇಟಿರ ೨ ವಿಕೆಟ್ ನಷ್ಟಕ್ಕೆ ೩೩ ರನ್ ದಾಖಲಿಸಿತು. ಕಟ್ಟೆರ ೬ ವಿಕೆಟ್ ನಷ್ಟಕ್ಕೆ ೩೧ ರನ್ ಗಳಿಸಲಷ್ಟೆ ಶಕ್ತವಾಯಿತು. ನಂದೇಟಿರ ಕೃತಿಕ ೧೫ ರನ್, ಸಹನ ೧೦ ರನ್, ಕಟ್ಟೆರ ಕವಿತ ೧೭ ರನ್, ನಂದೇಟಿರ ಚೈತ್ರ ೨ ವಿಕೆಟ್ ಪಡೆದರು.

ಮಾಪಣಮಾಡ ತಂಡಕ್ಕೆ ಕೊಕ್ಕೇಂಗಡ ವಿರುದ್ಧ ೨೧ ರನ್‌ಗಳ ಜಯ ಲಭಿಸಿತು. ಮಾಪಣಮಾಡ ನೀಡಿದ ೬೮ ರನ್ ಗುರಿಯನ್ನು ಮುಟ್ಟುವಲ್ಲಿ ಕೊಕ್ಕೇಂಗಡ ಎಡವಿತು. ವಿಕೆಟ್ ನಷ್ಟವಿಲ್ಲದೆ ೪೭ ರನ್ ಗಳಿಸಿ ಸೋಲಿಗೆ ಶರಣಾಯಿತು. ಮಾಪಣಮಾಡ ಮಾನಸ ೨೭, ನಿರೀಕ್ಷಾ ೨೨, ಕೊಕ್ಕೇಂಗಡ ಶರ್ಲಿ ೨೯ ರನ್ ಸಿಡಿಸಿದರು.

ಪುರುಷರ ವಿಭಾಗ

ಪಟ್ಟಡಕ್ಕೆ ಬಾಚೀರ ವಿರುದ್ಧ ೭ ವಿಕೆಟ್‌ಗಳ ಜಯ ದೊರೆಯಿತು. ಬಾಚಿರ ೧ ವಿಕೆಟ್ ನಷ್ಟಕ್ಕೆ ೯೧ ರನ್ ಗಳಿಸಿತು. ಬಾಚಿರ ರಾಜು ೨೪, ಸ್ವಾಗತ್ ೨೪ ರನ್ ಗಳಿಸಿದರು. ಪಟ್ಟಡ ೮ ಚೆಂಡು ಉಳಿಸಿಕೊಂಡು ಗೆಲುವಿನ ಗುರಿ ಸಾಧಿಸಿತು. ಪಟ್ಟಡ ಸಂಜು ಬೋಪಣ್ಣ ೩೯, ಬಿಪಿನ್ ಬೆಳ್ಯಪ್ಪ ೨೯ ರನ್ ಸಿಡಿಸಿದರು.

ಪೋರಂಡಗವು ಮಾತಂಡವನ್ನು ೮ ವಿಕೆಟ್‌ಗಳಿಂದ ಸೋಲಿಸಿತು. ಮಾತಂಡ ೫ ವಿಕೆಟ್ ನಷ್ಟಕ್ಕೆ ೫೮ ರನ್ ದಾಖಲಿಸಿತು. ಮಾತಂಡ ಬಿದ್ದಪ್ಪ ೧೯, ವಿಮರ್ಷ್ ೧೫ ರನ್ ಸೇರಿಸಿದರು. ಪೋರಂಗಡ ಭರತ್ ೨೭ ರನ್ ನೆರವಿನಿಂದ ೨ ವಿಕೆಟ್ ಕಳೆದುಕೊಂಡು ೧೦ ಚೆಂಡು ಉಳಿದಿರುವಂತೆ ಗೆಲುವು ಪಡೆದುಕೊಂಡಿತು.

ದೇಯಂಡಕ್ಕೆ ಕೋಣೇರಿರ ವಿರುದ್ಧ ೯೪ ರನ್‌ಗಳ ಭರ್ಜರಿ ಗೆಲುವು ದೊರೆಯಿತು. ದೇಯಂಡ ೨ ವಿಕೆಟ್ ಕಳೆದುಕೊಂಡು ೧೯೩ ರನ್ ದಾಖಲಿಸಿತು. ಕೋಣೇರಿರ ೫ ವಿಕೆಟ್ ನಷ್ಟಕ್ಕೆ ೯೯ ರನ್‌ಗಳಿಗೆ ಸೋಲೊಪ್ಪಿಕೊಂಡಿತು. ದೇಯಂಡ ಸಂಜು ೧೫೩ ರನ್ ( ೨೧ ಸಿಕ್ಸರ್, ೪ ಬೌಂಡರಿ) ಸಿಡಿಸಿ ಮೈದಾನದಲ್ಲಿ ಸಂಚಲನ ಮೂಡಿಸಿದರು. ಮುತ್ತಣ್ಣ ೧ ವಿಕೆಟ್, ೨೬ ರನ್, ಬಿದ್ದಪ್ಪ ೨ ವಿಕೆಟ್ ಪಡೆದರು.

ಚಟ್ಟಂಡ ೧೯ ರನ್‌ಗಳಿಂದ ಅಮ್ಮಣಕುಟ್ಟಂಡ ತಂಡವನ್ನು ಮಣಿಸಿತು. ಚಟ್ಟಂಡ ೪ ವಿಕೆಟ್‌ಗೆ ೧೩೩ ರನ್, ಅಮ್ಮಣಕುಟ್ಟಂಡವು ೫ ವಿಕೆಟ್ ಕಳೆದುಕೊಂಡು ೧೧೫ ರನ್‌ಗಳಷ್ಟೆ ದಾಖಲಿಸಿತು. ಚಟ್ಟಂಡ ಪ್ರಧಾನ್, ೯೩ ರನ್ ಸೇರಿದಂತೆ ೨ ವಿಕೆಟ್ ಕಬಳಿಸಿದರು. ಅಮ್ಮಣಕುಟ್ಟಂಡ ಜೀತ್ ೪೮ ರನ್, ದೇಶ್ ಪೂವಯ್ಯ ೧ ವಿಕೆಟ್ ಪಡೆದರು. ಕೈಬಿಲೀರಕ್ಕೆ ಪಡಿಯೇಟಿರ ವಿರುದ್ದ ೯ ವಿಕೆಟ್‌ಗಳ ಜಯ ದೊರೆಯಿತು. ಪಡಿಯೇಟಿರ ೬ ವಿಕೆಟ್‌ಗೆ ೫೯ ರನ್, ಕೈಬಿಲೀರ ೩.೨ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ಕೈಬಿಲೀರ ರಾಹುಲ್ ೨೬ ರನ್, ೧ ವಿಕೆಟ್, ಪಡಿಯೇಟಿರ ಚೇತನ್ ೪ ವಿಕೆಟ್, ಕೈಬಿಲೀರ ಸುಜನ್ ೩೨ ರನ್ ದಾಖಲಿಸಿದರು.

ಕಾಂಚೇರಿರ ತಂಡಕ್ಕೆ ಹೊಟ್ಟೇಂಗಡ ವಿರುದ್ದ ೧೦ ವಿಕೆಟ್‌ಗಳ ಗೆಲುವು ದೊರೆಯಿತು. ಹೊಟ್ಟೇಂಗಡ ೫ ವಿಕೆಟ್‌ಗೆ ೯೧ ರನ್ ಗಳಿಸಿತು. ಕಾಂಚೇರೀರ ೪.೫ ಓವರ್‌ಗಳಲ್ಲಿ ಕೀರ್ತನ್ ಬಾರಿಸಿದ ೬೬ ರನ್‌ಗಳ ಕಾಣಿಕೆಯಿಂದ ಗೆದ್ದು ಬೀಗಿತು. ಹೊಟ್ಟೇಂಗಡ ತರುಣ್ ತಮ್ಮಯ್ಯ ೨೨ ರನ್, ಕಾಂಚೇರಿರ ಕೀರ್ತನ್ ೨ ವಿಕೆಟ್ ಪಡೆದರು.

ಚೀಯಣಮಾಡಕ್ಕೆ ಕೊಕ್ಕೇಂಗಡ ವಿರುದ್ಧ ೧೦ ವಿಕೆಟ್‌ಗಳ ಸಂಚಲನ ಮೂಡಿಸಿದರು. ಮುತ್ತಣ್ಣ ೧ ವಿಕೆಟ್, ೨೬ ರನ್, ಬಿದ್ದಪ್ಪ ೨ ವಿಕೆಟ್ ಪಡೆದರು.

ಚಟ್ಟಂಡ ೧೯ ರನ್‌ಗಳಿಂದ ಅಮ್ಮಣಕುಟ್ಟಂಡ ತಂಡವನ್ನು ಮಣಿಸಿತು. ಚಟ್ಟಂಡ ೪ ವಿಕೆಟ್‌ಗೆ ೧೩೩ ರನ್, ಅಮ್ಮಣಕುಟ್ಟಂಡವು ೫ ವಿಕೆಟ್ ಕಳೆದುಕೊಂಡು ೧೧೫ ರನ್‌ಗಳಷ್ಟೆ ದಾಖಲಿಸಿತು. ಚಟ್ಟಂಡ ಪ್ರಧಾನ್, ೯೩ ರನ್ ಸೇರಿದಂತೆ ೨ ವಿಕೆಟ್ ಕಬಳಿಸಿದರು. ಅಮ್ಮಣಕುಟ್ಟಂಡ ಜೀತ್ ೪೮ ರನ್, ದೇಶ್ ಪೂವಯ್ಯ ೧ ವಿಕೆಟ್ ಪಡೆದರು. ಕೈಬಿಲೀರಕ್ಕೆ ಪಡಿಯೇಟಿರ ವಿರುದ್ದ ೯ ವಿಕೆಟ್‌ಗಳ ಜಯ ದೊರೆಯಿತು. ಪಡಿಯೇಟಿರ ೬ ವಿಕೆಟ್‌ಗೆ ೫೯ ರನ್, ಕೈಬಿಲೀರ ೩.೨ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ಕೈಬಿಲೀರ ರಾಹುಲ್ ೨೬ ರನ್, ೧ ವಿಕೆಟ್, ಪಡಿಯೇಟಿರ ಚೇತನ್ ೪ ವಿಕೆಟ್, ಕೈಬಿಲೀರ ಸುಜನ್ ೩೨ ರನ್ ದಾಖಲಿಸಿದರು.

ಕಾಂಚೇರಿರ ತಂಡಕ್ಕೆ ಹೊಟ್ಟೇಂಗಡ ವಿರುದ್ದ ೧೦ ವಿಕೆಟ್‌ಗಳ ಗೆಲುವು ದೊರೆಯಿತು. ಹೊಟ್ಟೇಂಗಡ ೫ ವಿಕೆಟ್‌ಗೆ ೯೧ ರನ್ ಗಳಿಸಿತು. ಕಾಂಚೇರೀರ ೪.೫ ಓವರ್‌ಗಳಲ್ಲಿ ಕೀರ್ತನ್ ಬಾರಿಸಿದ ೬೬ ರನ್‌ಗಳ ಕಾಣಿಕೆಯಿಂದ ಗೆದ್ದು ಬೀಗಿತು. ಹೊಟ್ಟೇಂಗಡ ತರುಣ್ ತಮ್ಮಯ್ಯ ೨೨ ರನ್, ಕಾಂಚೇರಿರ ಕೀರ್ತನ್ ೨ ವಿಕೆಟ್ ಪಡೆದರು.

ಚೀಯಣಮಾಡಕ್ಕೆ ಕೊಕ್ಕೇಂಗಡ ವಿರುದ್ಧ ೧೦ ವಿಕೆಟ್‌ಗಳ