ಮಡಿಕೇರಿ, ಏ. ೨೫: ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ ಅತ್ಯಂತ ಕೌತುಕವನ್ನು ಸೃಷ್ಟಿಸಿದೆ. ಬಿಜೆಪಿ-ಕಾಂಗ್ರೆಸ್ ನೇರಹಣಾಹಣಿ ಯೊಂದಿಗೆ ಉಭಯ ಪಕ್ಷಗಳ ನಾಯಕರ ಪ್ರತಿಷ್ಠೆಗೂ ಈ ಕ್ಷೇತ್ರದ ಫಲಿತಾಂಶ ಕಾರಣವಾಗಿದೆ.

ಈಗಾಗಲೇ ಜಿಲ್ಲಾಡಳಿತದಿಂದ ವ್ಯವಸ್ಥಿತ ಚುನಾವಣೆ ನಡೆಸಲು ಅಗತ್ಯ ಕ್ರಮಕೈಗೊಂಡಿದ್ದು, ತಾ. ೨೬ ರಂದು (ಇಂದು) ಚುನಾವಣೆ ನಡೆಯುವ ಹಿನ್ನೆಲೆ ಗುರುವಾರದಂದು ಜಿಲ್ಲೆಯ ಮಡಿಕೇರಿ ಹಾಗೂ ವೀರಾಜಪೇಟೆ ಯಲ್ಲಿ ‘ಮಸ್ಟರಿಂಗ್’ ಕಾರ್ಯ ನಡೆಯಿತು.

ಜಿಲ್ಲಾ ಕೇಂದ್ರ ಮಡಿಕೇರಿಯ ಸಂತ ಜೋಸೆಫರ ಶಾಲಾ ಆವರಣದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಮಸ್ಟರಿಂಗ್ ಕಾರ್ಯ ಯಶಸ್ವಿಯಾಗಿ ನಡೆಯಿತು. ಸೀಲ್ ಮಾಡಿದ್ದ ಸ್ಟಾçಂಗ್ ರೂಂ ತೆರೆದು ೨ ಬ್ಯಾಲೆಟ್ ಯೂನಿಟ್, ತಲಾ ಒಂದು ಕಂಟ್ರೋಲ್ ಯೂನಿಟ್ ಹಾಗೂ ವಿವಿ ಪ್ಯಾಟ್ ಸಹಿತ ಇ.ವಿ.ಎಂ. ಯಂತ್ರ ಗಳನ್ನು ಅಗತ್ಯ ಕಡತಗಳೊಂದಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿ ಕೊಂಡ ಸಿಬ್ಬಂದಿಗಳಿಗೆ ನಿಯಮಾನು ಸಾರ ಹಸ್ತಾಂತರ ಮಾಡಲಾಯಿತು.

೨೭೩ ಮತಗಟ್ಟೆಗಳಿಗೆ ಯಂತ್ರ ಹಾಗೂ ಕಡತ ನೀಡಿ ಸೂಕ್ತ ಭದ್ರತೆ ಯೊಂದಿಗೆ ಆಯಾ ಮತಗಟ್ಟೆಗಳಲ್ಲಿ ವಾಹನದಲ್ಲಿ ಕಳುಹಿಸಿಕೊಡಲಾಯಿತು.

ಮಸ್ಟರಿಂಗ್ ಹಿನ್ನೆಲೆ ಸ್ಟಾçಂಗ್ ರೂಂ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಉಪವಿಭಾಗಾಧಿಕಾರಿ ವಿನಾಯಕ್ ನರ್ವಾಡೆ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವರ್ಣಿತ್ ನೇಗಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜು, ಮಡಿಕೇರಿ ಡಿ.ವೈ.ಎಸ್.ಪಿ. ಮಹೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮತಯಂತ್ರಗಳ ಬಗ್ಗೆ ಮಾರ್ಗ ದರ್ಶನ ಅವಶ್ಯಕ ಇರುವವರಿಗೆ ಪ್ರಾಯೋಗಿಕ ತರಬೇತಿಗೂ ಅವಕಾಶ ಕಲ್ಪಿಸಲಾಗಿತ್ತು. ಮತದಾನ ಮುಗಿದ ಮತಯಂತ್ರಗಳ ಬಗ್ಗೆ ಮಾರ್ಗ ದರ್ಶನ ಅವಶ್ಯಕ ಇರುವವರಿಗೆ ಪ್ರಾಯೋಗಿಕ ತರಬೇತಿಗೂ ಅವಕಾಶ ಕಲ್ಪಿಸಲಾಗಿತ್ತು. ಮತದಾನ ಮುಗಿದ ಬಳಿಕ ಡಿ-ಮಸ್ಟರಿಂಗ್ ನಡೆಸಿ ಮೈಸೂರಿನ ಎಣಿಕಾ ಕೇಂದ್ರಕ್ಕೆ ವಿದ್ಯುನ್ಮಾನ ಮತಯಂತ್ರಗಳನ್ನು ರವಾನಿಸಲಾಗುವುದು.

(ಮೊದಲ ಪುಟದಿಂದ)

ವೀರಾಜಪೇಟೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮತಗಟ್ಟೆಗೆ ಅಗತ್ಯ ಮತಯಂತ್ರಗಳ ಹಾಗೂ ಪರಿಕರಗಳ ವಿತರಣೆ ಸ್ಥಳೀಯ ಸಂತ ಅನ್ನಮ್ಮ ಶಾಲೆಯಲ್ಲಿ ನಡೆಯಿತು.

ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೭೩ ಮತಗಟ್ಟೆಗಳಿದ್ದು, ಮಸ್ಟರಿಂಗ್ ಕಾರ್ಯವನ್ನು ಸೆಕ್ಟರ್‌ವಾರು ಪ್ರತ್ಯೇಕ ಕೊಠಡಿಗಳಲ್ಲಿ ಮಾಡಲಾಯಿತು. ಒಂದು ಕೊಠಡಿಗೆ ಒಬ್ಬರು ಸೆಕ್ಟರ್ ಅಕಾರಿ, ಇಬ್ಬರು ಸಿಬ್ಬಂದಿಗಳು, ಇಬ್ಬರು ಗ್ರಾಮ ಸಹಾಯಕರನ್ನು ನಿಯೋಜಿಸಲಾಗಿದೆ. ಪ್ರತಿ ಕೊಠಡಿಗಳಿಗೆ ಮತಗಟ್ಟೆವಾರು ಇವಿಎಂಗಳನ್ನು, ಚುನಾವಣಾ ಸಾಮಗ್ರಿಗಳನ್ನು ಸರಬರಾಜು ಮಾಡಿ ಮತಗಟ್ಟೆ ಅಕಾರಿಗಳಿಗೆ ಒದಗಿಸಲಾಯಿತು.

ತಾ.೨೬ ರಂದು ಡಿ-ಮಸ್ಟರಿಂಗ್ ಕಾರ್ಯ ಮುಗಿದ ನಂತರ ವಿದ್ಯುನ್ಮಾನ ಮತಯಂತ್ರಗಳು ಹಾಗೂ ಚುನಾವಣಾ ದಾಖಲೆ ಪತ್ರಗಳನ್ನು ಅದೇ ದಿನ ಮೈಸೂರಿನಲ್ಲಿ ಭದ್ರತಾ ಕೊಠಡಿಯಲ್ಲಿ ದಾಸ್ತಾನು ಮಾಡಲಾಗುವುದು.

ಮತದಾನ ಕೇಂದ್ರಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆ, ಸಂಜ್ಞಾ ಭಾಷಾ ವ್ಯಾಖ್ಯಾನಕಾರರ ವ್ಯವಸ್ಥೆ, ಮತದಾನ ಕೇಂದ್ರಕ್ಕೆ ಬಂದು ಹೋಗಲು ಉಚಿತ ಸಾರಿಗೆ ವ್ಯವಸ್ಥೆ, ಸಹಾಯಕರ ಸೇವೆ ಒದಗಿಸಲಾಗುತ್ತದೆ.

ಕ್ಷೇತ್ರದಲ್ಲಿ ಭದ್ರತೆ ಕಾಪಾಡಲು ೩ ಡಿವೈಎಸ್‌ಪಿ, ೬ ಸಿಪಿಐ, ೨೪ ಪಿಎಸ್‌ಐ, ೧೮ ಎಎಸ್‌ಐ, ೨೬೫ ಪೊಲೀಸ್ ಸಿಬ್ಬಂದಿ, ೧೩೧ ಹೊಂ ಗಾರ್ಡ್, ಭದ್ರತಾ ಪಡೆ ಕಾರ್ಯನಿರ್ವಹಿಸಲಿದೆ.

ಇಂದು ಬೆಳಿಗ್ಗೆ ೭.೦೦ ರಿಂದ ಸಂಜೆ ೬.೦೦ ಗಂಟೆಯವರೆಗೆ ಮತದಾನ ನಡೆಯಲಿದ್ದು, ಅದಕ್ಕಿಂತ ಮುಂಚಿತವಾಗಿ ಬೆಳಗ್ಗೆ ೫.೩೦ಕ್ಕೆ ಅಣುಕು ಮತದಾನ ಪ್ರಾರಂಭವಾಗಲಿದ್ದು,೭.೦೦ ಗಂಟೆಯೊಳಗಾಗಿ ಪೂರ್ಣಗೊಳ್ಳಲಿದೆ. ಕುರ್ಚಿ ವ್ಯವಸ್ಥೆ, ಸಂಜ್ಞಾ ಭಾಷಾ ವ್ಯಾಖ್ಯಾನಕಾರರ ವ್ಯವಸ್ಥೆ, ಮತದಾನ ಕೇಂದ್ರಕ್ಕೆ ಬಂದು ಹೋಗಲು ಉಚಿತ ಸಾರಿಗೆ ವ್ಯವಸ್ಥೆ, ಸಹಾಯಕರ ಸೇವೆ ಒದಗಿಸಲಾಗುತ್ತದೆ.

ಕ್ಷೇತ್ರದಲ್ಲಿ ಭದ್ರತೆ ಕಾಪಾಡಲು ೩ ಡಿವೈಎಸ್‌ಪಿ, ೬ ಸಿಪಿಐ, ೨೪ ಪಿಎಸ್‌ಐ, ೧೮ ಎಎಸ್‌ಐ, ೨೬೫ ಪೊಲೀಸ್ ಸಿಬ್ಬಂದಿ, ೧೩೧ ಹೊಂ ಗಾರ್ಡ್, ಭದ್ರತಾ ಪಡೆ ಕಾರ್ಯನಿರ್ವಹಿಸಲಿದೆ.

ಇಂದು ಬೆಳಿಗ್ಗೆ ೭.೦೦ ರಿಂದ ಸಂಜೆ ೬.೦೦ ಗಂಟೆಯವರೆಗೆ ಮತದಾನ ನಡೆಯಲಿದ್ದು, ಅದಕ್ಕಿಂತ ಮುಂಚಿತವಾಗಿ ಬೆಳಗ್ಗೆ ೫.೩೦ಕ್ಕೆ ಅಣುಕು ಮತದಾನ ಪ್ರಾರಂಭವಾಗಲಿದ್ದು,೭.೦೦ ಗಂಟೆಯೊಳಗಾಗಿ ಪೂರ್ಣಗೊಳ್ಳಲಿದೆ. ಮತಗಟ್ಟೆಗಳಲ್ಲಿ ಮತದಾರರಿಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಅಣುಕು ಮತದಾನದ ವೇಳೆ ಇವಿಎಂನಲ್ಲಿ ಲೋಪದೋಷಗಳು ಕಂಡುಬAದರೆ ಸೆಕ್ಟರ್ ಅಧಿಕಾರಿ ಮೂಲಕ ಕನಿಷ್ಟ ೧೦ ಮತಗಟ್ಟೆಗಳಿಗೆ ನಿಯೋಜನೆ ಮಾಡಿರುವಂತಹ ಮಾರ್ಗ ಅಧಿಕಾರಿ ಪರ್ಯಾಯ ವ್ಯವಸ್ಥೆ ಮಾಡಲಿದ್ದಾರೆ.

ಈ ಸಂದರ್ಭ ವೀರಾಜಪೇಟೆ ತಹಶೀಲ್ದಾರ್ ರಾಮಚಂದ್ರ, ಡಿವೈಎಸ್‌ಪಿ ಮೋಹನ್ ಕುಮಾರ್, ವೃತ್ತ ನಿರೀಕ್ಷಕ ಶಿವರುದ್ರ ಸೇರಿದಂತೆ ಇನ್ನಿತರ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.