ಚೆಟ್ಟಳ್ಳಿ, ಏ. ೨೫: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚುನಾವಣಾ ಪಟ್ಟಿಯಲ್ಲಿ ಹತ್ತು ಹಲವು ವರ್ಷಗಳಿಂದ ಹಿಡಿದು ಈವರೆಗೆ ಮರಣ ಹೊಂದಿದವರ ಹಾಗೂ ಈ ಗ್ರಾಮದಿಂದ ವರ್ಗಾವಣೆಗೊಂಡವರ ಹೆಸರು ಪಟ್ಟಿಯಲ್ಲೇ ಇನ್ನೂ ಉಳಿದುಕೊಂಡಿದೆ.

ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚೆಟ್ಟಳ್ಳಿ, ಕಂಡಕರೆ, ಕೂಡ್ಲೂರು ಚೆಟ್ಟಳ್ಳಿ, ಈರಳೆವಳಮುಡಿ, ಪೊನ್ನತಮೊಟ್ಟೆ, ಕಾಫಿಬೋರ್ಡ್ ಬೂತ್ ಸೇರಿ ೬೫೦೦ ಮತದಾರರಿದ್ದು ಚುನಾವಣೆಯಲ್ಲಿ ೩೫೦೦ ಮತಚಲಾವಣೆಯಾಗುತ್ತಿದೆ.

ಕುಟುಂಬದವರು ಮರಣಹೊಂದಿದವರ ಹೆಸರನ್ನು ತೆಗೆಯಲು ತಿಳಿಸಿದರೂ ಮತದಾರರ ಪಟ್ಟಿಯಿಂದ ಇನ್ನೂ ಹೆಸರನ್ನು ತೆಗೆಯಲಿಲ್ಲ. ಹಲವು ಕುಟುಂಬಗಳು ಬೇರೆಡೆಗೆ ವರ್ಗಾವಣೆಗೊಂಡಿದ್ದರೂ ಅವರ ಹೆಸರು ಇನ್ನೂ ಪಟ್ಟಿಯಲ್ಲೇ ಉಳಿದುಕೊಂಡಿದೆ. ಹಲವು ತಿಂಗಳಿAದ ಚುನಾವಣಾ ಪಟ್ಟಿಗಳ ತಿದ್ದುಪಡಿ ಕಾರ್ಯ ನಡೆಯುತಿದ್ದರೂ ಚುನಾವಣಾ ಕರ್ತವ್ಯದಲ್ಲಿರುವವರ ಬೇಜವಾಬ್ದಾರಿಗೆ ಚೆಟ್ಟಳ್ಳಿ ಪಂಚಾಯಿತಿಯ ಮತದಾರರ ಪಟ್ಟಿ ಸಾಕ್ಷಿಯಾಗಿದೆ.

- ಕರುಣ್ ಕಾಳಯ್ಯ