ಸೋಮವಾರಪೇಟೆ, ಏ. ೨೫: ಇಲ್ಲಿನ ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪಟ್ಟಣದ ಟರ್ಫ್ ಮೈದಾನದಲ್ಲಿ ತಾ. ೨೮ ರವರೆಗೆ ಆಯೋಜನೆಗೊಂಡಿರುವ ಹಾಕಿ ತರಬೇತಿ ಶಿಬಿರದಲ್ಲಿ ಅನುಭವಿ ಆಟಗಾರರು, ರಾಜ್ಯ ರಾಷ್ಟçಮಟ್ಟ ಪ್ರತಿನಿಧಿಸಿರುವ ಕ್ರೀಡಾಪಟುಗಳ ಜೊತೆಗೆ ರಾಷ್ಟಿçÃಯ ಹಾಕಿ ತರಬೇತುದಾರರು ಆಗಮಿಸಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.

ಕೊಡಗಿನಿಂದ ಅಂತರಾಷ್ಟಿçÃಯ ಮಟ್ಟಕ್ಕೆ ಹಾಕಿ ಕ್ರೀಡೆಯಲ್ಲಿ ಪದಾರ್ಪಣೆ ಮಾಡಿದ ಕ್ರೀಡಾ ಪಟುಗಳು ಆಗಮಿಸಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅಂತೆಯೇ ಭಾರತ ಜೂನಿಯರ್ ಮಹಿಳಾ ಹಾಕಿ ಕೋಚ್ ಆಗಿರುವ ಸೋಮವಾರಪೇಟೆಯ ಜನಾರ್ಧನ್ ಅವರು ಶಿಬಿರಕ್ಕೆ ಭೇಟಿ ನೀಡಿ ಮಕ್ಕಳಿಗೆ ಹಾಕಿ ಕ್ರೀಡೆಯ ವಿಶೇಷತೆ ಹಾಗೂ ಹಾಕಿಗೆ ಸಂಬAಧಿಸಿದAತೆ ಉಪಯುಕ್ತ ಮಾರ್ಗದರ್ಶನ ನೀಡಿದರು.

ಪ್ರತಿನಿತ್ಯ ೮೦ಕ್ಕೂ ಅಧಿಕ ಮಕ್ಕಳು ತರಬೇತಿ ಪಡೆಯುತ್ತಿದ್ದು, ಮಕ್ಕಳು ಪಡೆಯುತ್ತಿರುವ ತರಬೇತಿಯನ್ನು ಪೋಷಕರು ವೀಕ್ಷಿಸುತ್ತಿದ್ದಾರೆ. ಶಿಬಿರದಲ್ಲಿ ಹಾಲು, ಮೊಟ್ಟೆ, ಬಾಳೆಹಣ್ಣುಗಳನ್ನು ಡಾಲ್ಫಿನ್ಸ್ ಕ್ಲಬ್ ವತಿಯಿಂದ ನೀಡಲಾಗುತ್ತಿದೆ. ಶಿಬಿರದಲ್ಲಿ ತರಬೇತುದಾರರಾಗಿ ಹಿರಿಯ ತರಬೇತುದಾರ ದೇವದಾಸ್ ಸಿ ಬಿ., ಉದಯೋನ್ಮುಖ ಹಾಕಿ ಕ್ರೀಡಾಪಟುಗಳಾದ ಲಿಖಿತ್ ಎಂ.ಬಿ., ಸೂರ್ಯ ಎನ್.ಎಂ. ಅವರುಗಳು ತರಬೇತಿ ನೀಡುತ್ತಿದ್ದಾರೆ. ಇವರೊಂದಿಗೆ ಸಾತ್ವಿಕ್, ಯತೀಶ್, ಗಗನ್, ಡಾಲ್ಫೀನ್ಸ್ ಕ್ಲಬ್ ಅಧ್ಯಕ್ಷ ಅಶೋಕ್ ಅವರುಗಳು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ.