ಮಡಿಕೇರಿ, ಏ. ೨೫: ವಿದ್ಯಾರ್ಥಿಗಳ ಪರಿಶ್ರಮ ನಿರಂತರವಾಗಿದ್ದರೆ ಸಾಧನೆ ಮಾಡಬಹುದು ಎಂದು ಭಾರತ ಭೂಸೇನೆಯ ಅಥ್ಲೆಟಿಕ್ ತರಬೇತುದಾರ, ಕನ್ನಂಡಬಾಣೆ ನಿವಾಸಿ ಬಿ.ಸಿ.ತಿಲಕ್ ಕರೆ ಕೊಟ್ಟರು.

ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ಏರ್ಪಡಿಸಲಾಗಿರುವ ೩೦ನೇ ಉಚಿತ ಬೇಸಿಗೆ ಶಿಬಿರದ ಹಾಕಿ ಶಿಬಿರಾರ್ಥಿಗಳಿಗಾಗಿ ಇಲ್ಲಿನ ಸಾಯಿ ಮೈದಾನದಲ್ಲಿ ನಡೆದ ಹಾಕಿ ಪಂದ್ಯಾ ವಳಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇಲ್ಲಿನ ಮ್ಯಾನ್ಸ್ ಕಾಂಪೌAಡ್ ಮೈದಾನದಲ್ಲಿ ಆಟವಾಡಿದವರು ರಾಜ್ಯ, ರಾಷ್ಟç, ಅಂತಾರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ತಾನೂ ಕೂಡ ಇದೇ ಮೈದಾನದಲ್ಲಿ ಆಡಿ ಬೆಳೆದವನು. ಇಂತಹ ಶಿಬಿರಗಳು ಬೆಳವಣಿಗೆಗೆ ಪೂರಕವಾಗಿರುತ್ತವೆ. ಶಿಬಿರ ಮುಗಿದ ಬಳಿಕ ಮನೆಯಲ್ಲಿ ಕಾಲಹರಣ ಮಾಡದೆ ಅಭ್ಯಾಸ ಮಾಡಬೇಕು. ನಿರಂತರ ಅಭ್ಯಾಸ ಮಾಡುವದ ರೊಂದಿಗೆ ಜಿಲ್ಲೆ, ರಾಜ್ಯ, ರಾಷ್ಟçಕ್ಕೆ ಕೀರ್ತಿ ತರಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಯೋಗ ಗುರು ಕೆ.ಕೆ. ಮಹೇಶ್‌ಕುಮಾರ್ ಶಿಬಿರದ ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರುಗಳಾದ ಎಸ್.ಟಿ.ವೆಂಕಟೇಶ್, ಬೊಪ್ಪಂಡ ಶಾಂ ಸುಬ್ಬಯ್ಯ, ಗಣೇಶ್, ಹರೇಂದ್ರ, ಲೋಕೇಶ್ ನಾಯ್ಡು ಇದ್ದರು. ಬಳಿಕ ಹಾಕಿ ಪಂದ್ಯಾವಳಿಗಳು ನಡೆದವು. ಕಿರಿಯ, ಹಿರಿಯ ಬಾಲಕರು ಹಾಗೂ ಹಿರಿಯ ಬಾಲಕಿಯರ ವಿಭಾಗದಲ್ಲಿ ನಡೆದ ಪಂದ್ಯಾವಳಿಯಲ್ಲಿ ಬ್ಲಾö್ಯಕ್ ಟೀಂ ಮೂರು ವಿಭಾಗದಲ್ಲೂ ಜಯಗಳಿಸಿದವು. ತೀರ್ಪುಗಾರರಾಗಿ ಗಣೇಶ್, ಶಾಂ, ಕುಡೆಕಲ್ ಸಂತೋಷ್ ಕಾರ್ಯನಿರ್ವಹಿಸಿದರು. ವಿಜೇತರಿಗೆ ಬಹುಮಾನವನ್ನು ಮೇ ೧ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿತರಣೆ ಮಾಡಲಾಗುವದು.