ಕಣಿವೆ: ಕಾವೇರಿ ನದಿ ದಂಡೆಯ ನಂಜರಾಯಪಟ್ಟಣ ಗ್ರಾಮದಲ್ಲಿರುವ ಐತಿಹಾಸಿಕ ದೇವಾಲಯ ಶ್ರೀ ನಂಜುAಡೇಶ್ವರ ದೇವರ ವಾರ್ಷಿಕ ಪೂಜೋತ್ಸವ ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನೆರವೇರಿತು.

ಮಂಗಳವಾರ ದೇವಾಲಯದ ಗರ್ಭಗುಡಿಯಲ್ಲಿನ ನಂಜುAಡೇಶ್ವರ ಹಾಗೂ ದೇವೀರಮ್ಮ ದೇವರಿಗೆ ವಿವಿಧ ಬಗೆಯ ಅಭಿಷೇಕಗಳನ್ನು ನೆರವೇರಿಸಿದ ನಂತರ ಬಗೆ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಲಾಯಿತು.

ಇದಕ್ಕೂ ಮುನ್ನಾ ಉತ್ಸವ ಮೂರ್ತಿಯನ್ನು ದುಬಾರೆಯ ಕಾವೇರಿ ನದಿಗೆ ಕೊಂಡೊಯ್ದು ಗಂಗಾ ಪೂಜೆ ನೆರವೇರಿಸಿ ಮೆರವಣಿಗೆಯಲ್ಲಿ ಹೊತ್ತು ದೇವತಾ ಸನ್ನಿಧಿಗೆ ತರಲಾಯಿತು.

ಈ ಸಂದರ್ಭ ವೀರಭದ್ರ ವೀರಗಾಸೆ ನೃತ್ಯ ನೋಡುಗರ ಗಮನ ಸೆಳೆಯಿತು.

ಉತ್ಸವ ಮೂರ್ತಿಯ ಮೆರವಣಿಗೆ ದೇವಾಲಯದ ಆವರಣಕ್ಕೆ ಬಂದಾಗ ಏರ್ಪಡಿಸಿದ್ದ ಕೆಂಡ ಕೊಂಡೋತ್ಸವದ ಪೂಜೆಯನ್ನು ನೆರವೇರಿಸಲಾಯಿತು.

ನಂತರ ದೇವತಾ ಮೂರ್ತಿಯ ಉತ್ಸವ ಮೂರ್ತಿಯನ್ನು ಹೊತ್ತ ಭಕ್ತರು ಬರಿಗಾಲಲ್ಲಿ ಕೊಂಡದಲ್ಲಿ ಸಾಗಿದ ನಂತರ ಹರಕೆ ಹೊತ್ತ ಭಕ್ತರು ಸಾಲು ಸಾಲಾಗಿ ಕೆಂಡವನ್ನು ತುಳಿದು ಪುನೀತರಾದರು. ಬಳಿಕ ನೆರೆದಿದ್ದ ಭಕ್ತ ಸಂಕುಲಕ್ಕೆ ದೇವಾಲಯ ಸಮಿತಿಯಿಂದ ಅನ್ನಸಂತರ್ಪಣೆ ನೆರವೇರಿಸಲಾಯಿತು.

ದಿಂಡಗಾಡು ಬಸವಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ಏರ್ಪಟ್ಟವು.

ಈ ಸಂದರ್ಭ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನಕುಮಾರ್, ಕಾರ್ಯದರ್ಶಿ ಪ್ರೇಮಾನಂದ, ಖಜಾಂಚಿ ಮುರಳಿ ಮಾದಯ್ಯ ಸೇರಿದಂತೆ ದೇವಾಲಯ ಸಮಿತಿಯ ನಿರ್ದೇಶಕರು ಹಾಗೂ ಭಕ್ತರು ಇದ್ದರು.

ಸುಂಟಿಕೊಪ್ಪ: ಕೊಡಗರಹಳ್ಳಿ ಮಾರುತಿ ನಗರದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ವಾರ್ಷಿಕೋತ್ಸವ ಹನುಮಾನ್ ಜಯಂತಿ ವಿಶೇಷ ಪೂಜಾ ಕೈಂಕರ್ಯಗಳೊAದಿಗೆ ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತು.

ಮಂಗಳವಾರದAದು ಪುಣ್ಯಾಹ ಗಣಪತಿ ಹೋಮ, ನವಕÀಲಶ ಪೂಜೆ, ಕಲಶಾಭಿಷೇಕ, ಮಂತ್ರಾಕ್ಷತೆ, ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆಯನ್ನು ನೆರವೇರಿಸಲಾಯಿತು.

ದಿನದ ವಿಶೇಷ ಪೂಜಾ ಕೈಂಕರ್ಯಗಳನ್ನು ದೇವಾಲಯದ ಆರ್ಚಕರಾದ ನರಸಿಂಹ ಭಟ್ ಹಾಗೂ ಗಣೇಶ್ ಶರ್ಮಾ ನೇರವೇರಿಸಿದರು.

ಇದೇ ಸಂದರ್ಭ ಶ್ರೀ ಆಂಜನೇಯ ಸ್ವಾಮಿ ದೇವ ಸ್ಥಾನದ ವಾರ್ಷಿಕೋತ್ಸವ ಹಾಗೂ ಹನುಮಾನ್ ಜಯಂತಿಯ ಅಂಗವಾಗಿ ನೂರಾರು ಸಂಖ್ಯೆಯಲ್ಲಿ ನೇರೆದಿದ್ದ ಭಕ್ತಾದಿಗಳು ಜಯಂತಿಯಲ್ಲಿ ಪಾಲ್ಗೊಂಡಿ ದ್ದರು. ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ಅನ್ನಸಂತರ್ಪಣೆಯನ್ನು ನೆರವೇರಿಸಲಾಯಿತು.ವೀರಾಜಪೇಟೆ: ನಗರದ ಛತ್ರಕೆರೆ ಬಳಿಯಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಶ್ರೀ ಹನುಮ ಜಯಂತಿ ಪ್ರಯುಕ್ತ ದೇವಾ ಲಯದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದು ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ಸಂದರ್ಭ ದೇವಾಲಯದ ಆಡಳಿತ ಮಂಡ ಳಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಜರಿದ್ದರು.

ಈ ವೇಳೆ ವಿನಾಯಕ ಭಜನಾ ಮಂಡಳಿ ಸದಸ್ಯ ರಿಂದ ದೇವರ ನಾಮಕೀರ್ತನೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.ಸುಂಟಿಕೊಪ್ಪ: ಕೆದಕಲ್ ಭದ್ರಕಾಳೇಶ್ವರಿ ದೇವಾಲಯದ ವತಿಯಿಂದ ವಿಷ್ಣುಮೂರ್ತಿ ದೇವರ ತೆರೆ ಹಾಗೂ ಕೋಲಗಳು ಶ್ರದ್ಧಾಭಕ್ತಿಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ತೆರೆಯ ಅಂಗವಾಗಿ ಭದ್ರಕಾಳೇಶ್ಚರಿ, ಈಶ್ವರ, ವಿಷ್ಣುಮೂರ್ತಿ ಹಾಗೂ ಅಜ್ಜಪ್ಪ ದೇವರ ಕೋಲ ಮತ್ತು ದರ್ಶನಗಳು ನಡೆದವು. ಇದೇ ಮೊದಲ ಬಾರಿಗೆ ವಿಷ್ಣುಮೂರ್ತಿಯ ಕಟ್ಟಿತೆರೆ ನಡೆಯಿತು.

ವಿಷ್ಣುಮೂರ್ತಿ ದೇವರಿಗೆ ತೆರೆ ಕಟ್ಟುವ ಮೊದಲು ತೆರೆಯನ್ನು ಕೆದಕಲ್ ಮುಖ್ಯ ರಸ್ತೆಯಲ್ಲಿ ಸುಂಟಿಕೊಪ್ಪ: ಕೆದಕಲ್ ಭದ್ರಕಾಳೇಶ್ವರಿ ದೇವಾಲಯದ ವತಿಯಿಂದ ವಿಷ್ಣುಮೂರ್ತಿ ದೇವರ ತೆರೆ ಹಾಗೂ ಕೋಲಗಳು ಶ್ರದ್ಧಾಭಕ್ತಿಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ತೆರೆಯ ಅಂಗವಾಗಿ ಭದ್ರಕಾಳೇಶ್ಚರಿ, ಈಶ್ವರ, ವಿಷ್ಣುಮೂರ್ತಿ ಹಾಗೂ ಅಜ್ಜಪ್ಪ ದೇವರ ಕೋಲ ಮತ್ತು ದರ್ಶನಗಳು ನಡೆದವು. ಇದೇ ಮೊದಲ ಬಾರಿಗೆ ವಿಷ್ಣುಮೂರ್ತಿಯ ಕಟ್ಟಿತೆರೆ ನಡೆಯಿತು.

ವಿಷ್ಣುಮೂರ್ತಿ ದೇವರಿಗೆ ತೆರೆ ಕಟ್ಟುವ ಮೊದಲು ತೆರೆಯನ್ನು ಕೆದಕಲ್ ಮುಖ್ಯ ರಸ್ತೆಯಲ್ಲಿ ಕೇರಳದ ಚಂಡೆ ವಾದ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು.

ರಾತ್ರಿ ಮಹಾಮಂಗಳಾರತಿ, ಭಂಡಾರ ಹಾಕುವುದು, ದೇವರ ಹರಕೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.

ಕೆದಕಲ್, ಬಾಳೆಕಾಡು, ಸುಂಟಿಕೊಪ್ಪ, ಹಾಲೇರಿ, ಬೋಯಿಕೇರಿ, ಮಡಿಕೇರಿ, ಕಾಂಡನಕೊಲ್ಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.ಸಿದ್ದಾಪುರ: ಸಿದ್ದಾಪುರದ ಕರಡಿಗೋಡು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವ ವಿವಿಧ ಪೂಜಾ ಕೈಂಕರ್ಯ ಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಎರಡು ದಿನಗಳ ಕಾಲ ನಡೆದ ಬಸವೇಶ್ವರ ದೇವರ ಉತ್ಸವದಲ್ಲಿ ಬಿಳಿಗೇರಿಯ ಶ್ರೀ ಉದಯಕುಮಾರ್ ತಂತ್ರಿಯವರ ನೇತೃತ್ವದಲ್ಲಿ ನಿತ್ಯಪೂಜೆಯ ನಂತರ ಸಂಜೆ ಗೋಪೂಜೆ ನಡೆಯಿತು. ಭಂಡಾರದ ಮನೆಯಿಂದ ದೇವರ ಭಂಡಾರವನ್ನು ದೇವಾಲಯಕ್ಕೆ ತರಲಾಯಿತು. ಗಣಪತಿ ಹೋಮ, ಕಲಶ ಪೂಜೆ, ಗಂಗಾಸ್ನಾನ ಕಾವೇರಿ ನದಿಯಿಂದ ಶೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ಆಕರ್ಷಕವಾಗಿತ್ತು. ಸಾವಿರಾರು ಭಕ್ತರು ವಿವಿಧೆಡೆಗಳಿಂದ ಆಗಮಿಸಿದ್ದರು. ಎರಡು ದಿನಗಳ ಕಾಲ ನಡೆದ ಉತ್ಸವದಲ್ಲಿ ಭಕ್ತರು ತಮ್ಮ ಇಷ್ಟಾರ್ಥ ಹರಕೆಗಳನ್ನು ಒಪ್ಪಿಸಿದರು. ಉತ್ಸವದ ಕೊನೆ ದಿನ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ದೇವಾಲಯದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡರು.

ಈ ಸಂದರ್ಭ ಶ್ರೀ ಬಸವೇಶ್ವರ ದೇವಾಲಯದ ಅಧ್ಯಕ್ಷ ಕೆ.ಜಿ. ಮೋಹನ್ ಹಾಗೂ ಕಾರ್ಯದರ್ಶಿ ಪ್ರಕಾಶ್ ಆಡಳಿತ ಮಂಡಳಿ ಯವರು ಹಾಜರಿದ್ದರು. ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಶ್ರೀ ಭಗವತಿ ವಿಷ್ಣುಮೂರ್ತಿ ಹಾಗೂ ಕ್ಷೇತ್ರಪಾಲ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವವು ತಾ.೧೭ ರಿಂದ ತಾ. ೨೧ ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಶ್ರದ್ಧಾಭಕ್ತಿಯಿಂದ ನಡೆಯಿತು.

ಮಹಾಗಣಪತಿ ಹೋಮ, ಪ್ರಸಾದ ವಿತರಣೆ, ಮಹಾ ಪೂಜೆ ಮತ್ತು ತೀರ್ಥ ಪ್ರಸಾದ ವಿತರಣೆ, ಸಂಜೆ ಚೆಯ್ಯಂಡ ಕುಟುಂಬದಿAದ ಭಂಡಾರ ಆಗಮಿಸುವ ಸಂಪ್ರದಾಯ, ಕೊಡಿ ಮರ ನಿಲ್ಲುವುದು, ದೇವಸ್ಥಾನಕ್ಕೆ ಮೂರು ಸುತ್ತು ಬಲಿ ಬರುವುದು, ಅಂದಿ ಬೆಳಕು, ನಂತರ ಮಹಾಪೂಜೆ ಇರುಬೆಳಕು, ಚಂಡಿಕಾ ಹೋಮ, ತೀರ್ಥ ಪ್ರಸಾದ, ನೆರಪು ಬಲಿ, ದೇವರ ನೃತ್ಯ, ಅಲಂಕಾರ ಪೂಜೆ, ಸಂಜೆ ಶ್ರೀ ಭಗವತಿ ದೇವರ ಅವಭೃತ ಸ್ನಾನ ದೇವರ ನೃತ್ಯ, ವಸಂತ, ವಿಷ್ಣುಮೂರ್ತಿ ಮೇಲೇರಿಗೆ ಸೌದೆ ಕಡಿಯುವುದು, ಭಗವತಿ ದೇವರ ಸನ್ನಿಧಿಯಲ್ಲಿ ಕಳಶ, ಕ್ಷೇತ್ರಪಾಲ ಸನ್ನಿಧಿಯಲ್ಲಿ ಕ್ಷೇತ್ರಪಾಲ ಕೋಲ, ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ವಿವಿಧ ದೈವ ಕೋಲ, ವಿಷ್ಣು ಮೂರ್ತಿ ಕೋಲ ವಿಷ್ಣುಮೂರ್ತಿ ದೇವರ ಪ್ರಸಾದ (ಭಾರಣಿ) ವಿತರಣೆ ಹೀಗೆ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿAದ ನಡೆಯಿತು.

ಈ ಬಾರಿ ಮಾಯಮುಡಿ, ಶ್ರೀಮಂಗಲ ಚಂಡೆವಾದ್ಯ ತಂಡದವರಿAದ ಚಂಡೆ ಮೇಳ ನಡೆಯಿತು. ಪೂಜಾ ಕಾರ್ಯಕ್ರಮದ ನೇತೃತ್ವವನ್ನು ವೀರಾಜಪೇಟೆಯ ಪುಂಡರಿಕಾಕ್ಷ ವಹಿಸಿದ್ದರು. ಎಲ್ಲಾ ದಿನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕೂಡ ನಡೆಯಿತು.

ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬಟ್ಟಿಯಂಡ ಜಯರಾಂ, ಆಡಳಿತ ಮಂಡಳಿಯ ಪದಾಧಿಕಾರಿಗಳು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಮಡಿಕೇರಿ: ಹನುಮ ಜಯಂತಿ ಆಚರಣೆ ಅಂಗವಾಗಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಗೋಣಿಕೊಪ್ಪ ಸಮೀಪದ ಕೈಕೇರಿಯ ಶ್ರೀ ಭಗವತಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಚಿಯಕ್‌ಪೂವಂಡ ಬೋಪಣ್ಣ, ಪಂದ್ಯAಡ ಹರೀಶ್, ಅಮ್ಮತ್ತೀರ ಸುರೇಶ್, ದುರ್ಗಾವಾಹಿನಿಯ ಜಿಲ್ಲಾ ಸಂಯೋಜಕಿ ರಿಸ್ತಚಂಗಪ್ಪ, ಮುರುಗೇಶ್, ಕಿರಣ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಸ್ವಾಮಿಯ ವಾರ್ಷಿಕ ವಿಶೇಷ ಪೂಜ್ಯೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ವಿವಿಧ ಹೋಮ, ಹವನ ಸೇರಿದಂತೆ ಪೂಜಾ ಕೈಂಕರ್ಯಗಳೊAದಿಗೆ ನಡೆಯಿತು.

ಶ್ರೀ ಗಣಪತಿ ಹೋಮ, ಶ್ರೀ ಮೃತ್ಯುಂಜಯ ಹೋಮ, ಪ್ರಧಾನ ದೇವರಿಗೆ ಹಾಗೂ ಇತರೆ ಉಪದೇವತೆಗಳಗೆ ವಿಶೇಷ ಅಭಿಷೇಕ, ಅರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಕೇರಳದ ಸಜಿ ತಂಡದವರು ನೆರವೇರಿಸಿದರು.

ಮಹಾಮಂಗಳಾತಿ, ತೀರ್ಥ ಪ್ರಸಾದ ವಿನಿಯೋಗ, ಆಗಮಿಸಿದ ಭಕ್ತರಿಗೆ ದೇವಾಲಯ ಸಮಿತಿಯ ವತಿಯಿಂದ ಅನ್ನಸಂತರ್ಪಣೆ ನಡೆಯಿತು.

ಪೂಜೋತ್ಸವಕ್ಕೆ ಕೂಡಿಗೆ, ಕೂಡುಮಂಗಳೂರು ಮದಲಾಪುರ ಕುಶಾಲನಗರ, ಹಾರಂಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು.

ಸಂಜೆ ದೇವಾಲಯ ಆವರಣದಲ್ಲಿ ದೀಪಾಲಂಕಾರ, ಮಹಾಮಂಗಳಾತಿ, ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ, ಕಾರ್ಯದರ್ಶಿ ಸುರೇಶ್, ಸೇರಿದಂತೆ ಸಮಿತಿಯ ನಿರ್ದೇಶಕರು, ಸದಸ್ಯರು, ಗ್ರಾಮದ ಪ್ರಮುಖರು ಹಾಜರಿದ್ದರು.

ಮುಳ್ಳೂರು: ಈ ವರ್ಷ ಏಪ್ರಿಲ್ ಕೊನೆಗೊಳ್ಳುತ್ತಿದ್ದರೂ ಬಹಳಷ್ಟು ಕಡೆಗಳಲ್ಲಿ ಒಂದು ಹನಿಯೂ ಮಳೆಯಾಗಿಲ್ಲ, ಬಿಸಿಲಿನ ತಾಪ ಹೆಚ್ಚಾಗುತ್ತಿದೆ ಹೊರತು ಮಳೆಯ ಯಾವ ಲಕ್ಷಣವೂ ಕಂಡು ಬರುತ್ತಿಲ್ಲ. ಜನರು ಬಿಸಿಲಿನ ತಾಪಕ್ಕೆ ತತ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ಜನರು ಮಳೆಯ ಆಗಮನಕ್ಕಾಗಿ ದೇವರ ಮೊರೆ ಹೋಗಿದ್ದಾರೆ. ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾ.ಪಂ.ಗೆ ಸೇರಿದ ಕೊಡಗು-ಹಾಸನ ಜಿಲ್ಲಾ ಗಡಿ ಭಾಗದಲ್ಲಿರುವ ಆಗಳಿ ಗ್ರಾಮದ ಗವಿ ಬೆಟ್ಟದ ಗುಹೆಯೊಳಗಿರುವ ಉದ್ಬವ ಗವಿ ಸಿದ್ದೇಶ್ವರ ಸ್ವಾಮಿ ದೇಗುಲದಲ್ಲಿ ಆಗಳಿ ಗ್ರಾಮಸ್ಥರು ಮತ್ತು ದೇವಸ್ಥಾನ ಸಮಿತಿ ವತಿಯಿಂದ ಗುರುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮಳೆಗಾಗಿ ವಿಶೇಷ ಪೂಜಾ ಕಾರ್ಯವನ್ನು ನೆರವೇರಿಸಲಾಯಿತು. ಪೂಜೆಯ ಜೊತೆಯಲ್ಲಿ ವಿಶೇಷ ಹೋಮ ನೆರವೇರಿಸಲಾಯಿತು. ಅರ್ಚಕರಾದ ಮೃತ್ಯುಂಜಯ ಹಿರೆಮಠ್, ಮಣಿಕಂಠ ನೇತೃತ್ವದಲ್ಲಿ ಅರ್ಚಕರ ತಂಡ ಪೂಜಾ ವಿಧಿ ವಿಧಾನ ನೆರವೇರಿಸಿದರು. ಗ್ರಾಮಸ್ಥರೆಲ್ಲರೂ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಳೆಯ ಆಗಮನಕ್ಕಾಗಿ ಸಾಮೂಹಿಕವಾಗಿ ಪ್ರಾರ್ಥಿಸಿದರು. ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಸನ್ನ, ಗ್ರಾಮದ ಪ್ರಮುಖ ಸುಬ್ಬಯ್ಯ, ಗ್ರಾಮಸ್ಥರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.ವೀರಾಜಪೇಟೆ: ಸಮೀಪದ ಬೇಟೋಳಿ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಮತ್ತು ಮಹಾ ಚಂಡಿಕಾ ಹವನ ಶ್ರದ್ಧಾಭಕ್ತಿಯಿಂದ ಜರುಗಿತು. ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು.

ಮೊದಲಿಗೆ ಗಣಪತಿ ಹೋಮ ನಡೆಯಿತು. ತದನಂತರದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಮಹಾ ಚಂಡಿಕಾ ಹೋಮದ ಪೂಜಾ ವಿಧಿ ವಿಧಾನಗಳು ಆರಂಭವಾದವು. ಸ್ವರ ಶಾಸ್ತಿçÃಯ ತಂಡದವರಿAದ ಭಕ್ತಿ ಗೀತೆ ಗಾಯನ, ಅಯ್ಯಪ್ಪ ಭಜನಾ ಮಂಡಳಿಯಿAದ ಭಜನಾ ಕಾರ್ಯಕ್ರಮ, ಕುಣಿತ ಭಜನೆ ಮತ್ತು ರುದ್ರಂ ಚಂಡೆ ಬಳಗದಿಂದ ಚಂಡೆ ಸೇವೆಯು ನಡೆಯಿತು. ಪ್ರತಿಷ್ಠಾ ವರ್ಧಂತಿ ಮಹೋತ್ಸವ ಮತ್ತು ಮಹಾ ಚಂಡಿಕಾ ಹವನವು ಪುತ್ತೂರಿನ ಅರ್ಚಕರಾದ ಚಂದ್ರಶೇಖರ್ ಭಟ್ ಅವರನ್ನು ಒಳಗೊಂಡ ಅರ್ಚಕರ ತಂಡದಿAದ ನೆರವೇರಿತು. ಅರ್ಚಕರು ಈ ಸಂದರ್ಭದಲ್ಲಿ ಪಾರಾಯಣ, ಅಲಂಕಾರ ಸೇವೆ, ಕುಂಕುಮಾರ್ಚನೆ, ಸಂಕಲ್ಪ, ಮಂಗಳಾರತಿ ಮತ್ತು ಹವನದ ಪೂರ್ಣಾಹುತಿಯನ್ನು ನೆರವೇರಿ ಸಿದರು. ಮಹಾ ಪ್ರಾರ್ಥನೆಯನ್ನು ಮಾಡಿ ನಾಡಿನ ಗ್ರಾಮದ ಸುಭೀಕ್ಷೆಗಾಗಿ ಬೇಡಲಾಯಿತು. ತದನಂತರ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭ ಪುದುಪಾಡಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್, ವಾಮನಮೂರ್ತಿ ಭಟ್, ದೇವಸ್ಥಾನದ ಅಧ್ಯಕ್ಷ ಡಾ. ರಾಮಕೃಷ್ಣ ಬೋರ್ಕರ್, ಉಪಾಧ್ಯಕ್ಷರಾದ ನಂದ ಬೋರ್ಕರ್, ಕಾರ್ಯದರ್ಶಿ ಸುಮನ, ಆಡಳಿತ ಮಂಡಳಿ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.ನಾಪೋಕ್ಲು: ಸಮೀಪದ ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಉತ್ಸವ ವಿಜೃಂಭಣೆಯಿAದ ಜರುಗಿತು. ಪಾರ್ವತಿ ಪರಮೇಶ್ವರ ಜೋಡು ದೇವರ ನೃತ್ಯಬಲಿ ನೆರವೇರಿತು. ಮಧ್ಯಾಹ್ನ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ತೀರ್ಥ ಪ್ರಸಾದ ವಿತರಣೆಯ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಉತ್ಸವ ಸಮಿತಿಯ ಅಧ್ಯಕ್ಷ ಪೂದವಾಡ ಸುಜಯ್, ಕಾರ್ಯದರ್ಶಿ ಸೂದನ ಮದನ್, ಪಾರುಪತ್ತೆಗಾರ ಮನು ಸಮಿತಿಯ ಸದಸ್ಯರು, ಗ್ರಾಮದ ತಕ್ಕಮುಖ್ಯಸ್ಥರು ಪಾಲ್ಗೊಂಡಿದ್ದರು. ಮುಖ್ಯ ಅರ್ಚಕ ದೇವಿಪ್ರಸಾದ್ ನೇತೃತ್ವದಲ್ಲಿ ತಂತ್ರಿಗಳಾಗಿ ಕೃಷ್ಣ ಪ್ರಸಾದ್ ತಂಡ ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿತು. ತೆಂಗಿನಕಾಯಿಗೆ ಗುಂಡು ಹೊಡೆಯುವುದು, ದೇವರ ದರ್ಶನ, ದೇವರ ಅವಭೃತ ಸ್ನಾನ, ದೀಪಾಲಂಕಾರ, ಮಹಾಪೂಜೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.