ನಾಪೋಕ್ಲು, ಏ. ೨೫: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಕುಂಡ್ಯೋಳAಡ ಕಪ್‌ನ ೨೬ನೇ ದಿನದ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್‌ಗಳಾದ ಕುಲ್ಲೇಟಿರ, ನೆಲ್ಲಮಕ್ಕಡ, ಚೇಂದAಡ, ಕುಪ್ಪಂಡ (ಕೈಕೇರಿ) ತಂಡಗಳು ಜಯಗಳಿಸುವುದರ ಮೂಲಕ ತಾ. ೨೭ರಂದು ನಡೆಯಲಿರುವ ಸೆಮಿ ಫೈನಲ್ ಪಂದ್ಯಾಟದಲ್ಲಿ ಸೆಣಸಾಡಲಿವೆ.

ಮೈದಾನ ೧ರಲ್ಲಿ ಮಾಜಿ ಚಾಂಪಿಯನ್ ಕುಲ್ಲೇಟಿರ ಮತ್ತು ಚೆಪ್ಪುಡಿರ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಕುಲ್ಲೇಟಿರ ತಂಡವು ೨-೦ ಗೋಲುಗಳ ಅಂತರದಿAದ ಚೆಪ್ಪುಡಿರ ತಂಡವನ್ನು ಸೋಲಿಸಿತು. ಕುಲ್ಲೇಟಿರ ತಂಡದ ಪರ ನಿಶ್ಚಲ್ ಪಂದ್ಯ ಆರಂಭದ ೧೨ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸುವುದರ ಮೂಲಕ ತಂಡವನ್ನು ಮುನ್ನಡೆಸಿದರು. ಇದರ ವಿರುದ್ಧ ಚೆಪ್ಪುಡಿರ ತಂಡ ಹರಹಾಸಪಟ್ಟರೂ ಸಮಬಲಗೊಳಿಸಲು ಸಾಧ್ಯವಾಗಿಲ್ಲ. ಕುಲ್ಲೇಟಿರ ತಂಡದ ಗೋಲ್‌ಕೀಪರ್ ವಚನ್ ಕಾಳಪ್ಪ ಅವರ ಭದ್ರಕೋಟೆಯನ್ನು ಭೇದಿಸಲು ಎಷ್ಟೇ ಪ್ರಯತ್ನಪಟ್ಟರೂ ಚೆಪ್ಪುಡಿರ ತಂಡ ವಿಫಲವಾಯಿತು. ೫೯ನೇ ನಿಮಿಷದಲ್ಲಿ ಕುಲ್ಲೇಟಿರ ಅವಿನಾಶ್ ದಾಖಲಿಸಿದ ಎರಡನೇ ಗೋಲಿನಿಂದ ಕುಲ್ಲೇಟಿರ ತಂಡ ಸೆಮಿಫೈನಲ್ಸ್ ಪ್ರವೇಶಿಸಿತು.

ಮಾಜಿ ಚಾಂಪಿಯನ್ ಚೇಂದAಡ ಮತ್ತು ಬೊವ್ವೇರಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೇಂದAಡ ತಂಡದ ಪರ ನಿಖಿನ್ ೨೦ ಮತ್ತು ೨೮ನೇ ನಿಮಿಷದಲ್ಲಿ ಗೋಲು ದಾಖಲಿಸುವುದರ ಮೂಲಕ ತಂಡದ ಗೆಲುವಿಗೆ ನಾಂದಿ ಹಾಡಿದರು. ೪೨ನೇ ನಿಮಿಷದಲ್ಲಿ ಬೊವ್ವೇರಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡವು ಪುದಿಯೊಕ್ಕಡ ತಂಡವನ್ನು ೩-೧ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಪುದಿಯೊಕ್ಕಡ ತಂಡದ ಪ್ರಧಾನ್ ೨೫ ನಿಮಿಷದಲ್ಲಿ ತಮ್ಮ ತಂಡದ ಖಾತೆ ತೆರೆದರು. ಆದರೆ, ನೆಲ್ಲಮಕ್ಕಡ ಮ್ಯಾಕ್ ಮೊಣ್ಣಪ್ಪ ೩೩ನೇ ನಿಮಿಷದಲ್ಲಿ ಹಾಗೂ ಆಶಿಕ್ ೩೪ ಹಾಗೂ ಸೋಮಯ್ಯ ೪೮ನೇ ನಿಮಿಷದಲ್ಲಿ ಗೋಲು ದಾಖಲಿಸುವುದರ ಮೂಲಕ ತಂಡದ ಮುನ್ನಡೆಗೆ ಕಾರಣರಾದರು.

ಹಾಲಿ ಚಾಂಪಿಯನ್ ಕುಪ್ಪಂಡ (ಕೈಕೇರಿ) ಮತ್ತು ನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಪ್ಪಂಡ ತಂಡವು ನೆರವಂಡ ತಂಡವನ್ನು ೫-೧ ಗೋಲಿನಿಂದ ಪರಾಭವಗೊಳಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಕುಪ್ಪಂಡ ತಂಡದ ಪರ ಸೋಮಯ್ಯ ೧೨ನೇ ನಿಮಿಷದಲ್ಲಿ ಹಾಗೂ ಪ್ರಧಾನ್ ೧೪ನೇ ನಿಮಿಷದಲ್ಲಿ ತಲಾ ಒಂದೊAದು ಗೋಲು ದಾಖಲಿಸಿ ತಂಡವನ್ನು ಮುನ್ನಡೆಸಿದರು. ಇದಕ್ಕೆ ಉತ್ತರವಾಗಿ ನೆರವಂಡ ಕವನ್ ೩೫ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿ ಗೆಲುವಿನ ಭರವಸೆ ಮೂಡಿಸಿದರು. ಆದರೆ, ೩೬ನೇ ನಿಮಿಷದಲ್ಲಿ ಕುಪ್ಪಂಡ ಸೋಮಯ್ಯ ಒಂದು ಗೋಲು, ಜಗತ್ ೪೨ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿದರೆ, ಮತ್ತೊಮ್ಮೆ ಸೋಮಯ್ಯ ೪೪ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸುವುದರ ಮೂಲಕ ತಂಡದ ಜಯಭೇರಿಗೆ ಕಾರಣರಾದರಲ್ಲದೆ, ಹ್ಯಾಟ್ರಿಕ್ ಗೋಲು ದಾಖಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

-ಪಿ.ವಿ.ಪ್ರಭಾಕರ್