ಮಡಿಕೇರಿ, ಏ. ೨೫: ತಾ.೨೬ ರಂದು (ಇಂದು) ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ಕೊಡಗಿನಲ್ಲಿರುವ ಆನೆ ಹಾವಳಿ ಹೆಚ್ಚಿರುವ ವಿವಿಧ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಿ ಸುಸೂತ್ರ ಮತದಾನ ನೆರವೇರಿಸಲು ಮಡಿಕೇರಿ ಹಾಗೂ ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ರಾಜ್ಯ ಅರಣ್ಯ ಇಲಾಖೆ ಸೂಚನೆ ನೀಡಿದೆ. ಉಪ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಆನೆ ಕಾರ್ಯಪಡೆಯ ಸಿಬ್ಬಂದಿಗಳು, ವಿಭಾಗದ ಕ್ಷೇತ್ರ ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ ತಂಡಗಳನ್ನು ಮಡಿಕೇರಿ ವಲಯದಲ್ಲಿ ಗುರುತಿಸಲಾಗಿರುವ, ಆನೆ ಹಾವಳಿ ಹೆಚ್ಚಿರುವ ಒಟ್ಟು ೨೬ ಕಡೆಗಳಲ್ಲಿ ಬಂದೋಬಸ್ತ್ ಕಾರ್ಯ ಕ್ಕಾಗಿ ನಿಯೋಜಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ನಾಯಕ್ ತಿಳಿಸಿದ್ದಾರೆ.

ಕುಶಾಲನಗರ ಅರಣ್ಯ ವ್ಯಾಪ್ತಿಯಲ್ಲಿ ಒಟ್ಟು ೯ ಪ್ರದೇಶಗಳನ್ನು ಆನೆ ಹಾವಳಿ ಪ್ರದೇಶಗಳೆಂದು ಗುರುತಿಸಲಾಗಿದೆ. ಇದರಲ್ಲಿ ಚಿಕ್ಕತ್ತೂರು, ನಂಜರಾಯಪಟ್ಟಣ, ತ್ಯಾಗತ್ತೂರು ಹಾಗೂ ನೆಲ್ಲಿಹುದಿಕೇರಿಯನ್ನು ಸೂಕ್ಷö್ಮ ಪ್ರದೇಶಗಳೆಂದು ಹಾಗೂ ದುಬಾರೆ, ಮಾಲ್ದಾರೆ, ಕಂಬಿಬಾಣೆ, ಅತ್ತೂರು-ನಲ್ಲೂರು ಹಾಗೂ ಮೋದೂರನ್ನು ಅತೀ ಸೂಕ್ಷö್ಮ ಪ್ರದೇಶಗಳೆಂದು ಗುರುತಿಸಿ ೭ ಆರ್.ಆರ್.ಟಿ ತಂಡಗಳನ್ನು ಈ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.

ಸೋಮವಾರಪೇಟೆ ಅರಣ್ಯ ವ್ಯಾಪ್ತಿಯಲ್ಲಿ ೯ ಕಡೆಗಳಲ್ಲಿ ೩ ಆರ್.ಆರ್.ಟಿ ತಂಡಗಳಿದ್ದು, ಕಾಡಾನೆ ಹಾವಳಿ ಸೂಕ್ಷö್ಮ ಪ್ರದೇಶಗಳಾದ ಯಡವನಾಡು, ಸಜ್ಜಳ್ಳಿ, ಬೇಳೂರು, ಬಾಣಾವಾರ, ಭುವಂಗಾಲ, ಅರಶಿನಗುಪ್ಪೆ, ಸೀಗೆಹೊಸೂರು ಹಾಗೂ ಅತಿ ಸೂಕ್ಷö್ಮ ಪ್ರದೇಶಗಳಾದ ಕಾಜೂರು, ಯಡವಾರೆಯಲ್ಲಿ ಬಂದೋಬಸ್ತ್ ಒದಗಿಸಲಿವೆ.

(ಮೊದಲ ಪುಟದಿಂದ)

ಶನಿವಾರಸAತೆ ವ್ಯಾಪ್ತಿಯಲ್ಲಿ ೪ ಆರ್.ಆರ್.ಟಿ ತಂಡಗಳು ಸೂಕ್ಷö್ಮ ಪ್ರದೇಶಗಳಾದ ಕಟ್ಟೆಪುರ, ನಿಲುವಾಗಿಲು, ಶಿರವಾಗಿಲಿನಲ್ಲಿ ಕಾರ್ಯಚರಿಸಲಿವೆ.

ಮಡಿಕೇರಿ ಅರಣ್ಯ ವ್ಯಾಪ್ತಿಯಲ್ಲಿ ಅರೆಕಾಡು, ಕಟ್ಟೆಮಾಡು ಹಾಗೂ ಗಾಳಿಬೀಡನ್ನು ಸೂಕ್ಷö್ಮ ಪ್ರದೇಶಗಳೆಂದು ಗುರುತಿಸಿ ೨ ಆರ್.ಆರ್.ಟಿ ತಂಡಗಳು ಇಲ್ಲಿಗೆ ನಿಯೋಜಿಸಲ್ಪಟ್ಟಿವೆ.

ಭಾಗಮಂಡಲ ವ್ಯಾಪ್ತಿಯಲ್ಲಿ ನಾಲಾಡಿ, ನೆಲಜಿ-ಕುಂಜಿಲದಲ್ಲಿ ೩ ಆರ್.ಆರ್.ಟಿ ತಂಡಗಳು ಸುಸೂತ್ರ ಮತದಾನಕ್ಕೆ ಸಹಕರಿಸಲಿವೆ.

ವೀರಾಜಪೇಟೆ ಅರಣ್ಯ ವ್ಯಾಪ್ತಿಯಲ್ಲಿಯೂ ಕಾಡಾನೆ ಹಾವಳಿ ಪ್ರದೇಶಗಳನ್ನು ಗುರುತಿಸಲಾಗಿದ್ದು, ವಲಯ ಅರಣ್ಯಾಧಿಕಾರಿ ಕೆ.ಎಂ ದೇವಯ್ಯ ಅವರ ನೇತೃತ್ವದಲ್ಲಿ ಚುನಾವಣೆ ಸಂದರ್ಭ ಬಂದೋಬಸ್ತ್ ಒದಗಿಸಲಾಗುವುದು.

ವೀರಾಜಪೇಟೆ ಶಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಪಿ.ಡಿ ಜನಾರ್ದನ ಚುನಾವಣೆ ಸಂದರ್ಭ ಮಾನವ-ಪ್ರಾಣಿ ಸಂಘರ್ಷ ಎದುರಾಗದಂತೆ ಬಂದೋಬಸ್ತ್ ಒದಗಿಸುವ ಮೇಲುಸ್ತುವಾರಿಯನ್ನು ವಹಿಸಲಿದ್ದಾರೆ. ಗಸ್ತು ಅರಣ್ಯ ಪಾಲಕರಾಗಿ ಚಂದ್ರಶೇಖರ್ ಅಮರಗೋಳ ಕಾರ್ಯ ನಿರ್ವಹಿಸಲಿದ್ದಾರೆ.

ಅಮ್ಮತ್ತಿ ಶಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಸಂಜಿತ್ ಡಿ.ಪಿ. ಹಾಗೂ ಗಸ್ತು ಪಾಲಕರಾಗಿ ಅರುಣ್ ಸಿ. ಕಾರ್ಯ ನಿರ್ವಹಿಸಲಿದ್ದಾರೆ.

ಹೆಗ್ಗಳ ಶಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಆನಂದ್ ಕೆ.ಆರ್. ಹಾಗೂ ಅರಣ್ಯ ವೀಕ್ಷಕರಾಗಿ ಪೌಲ್ ಡಿಸೋಜ ಕಾರ್ಯ ನಿರ್ವಹಿಸಲಿದ್ದಾರೆ.

ಚೆಯ್ಯಂಡಾಣೆ ಶಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಅನಿಲ್ ಸಿ.ಟಿ. ಅವರು ಕಾರ್ಯ ನಿರ್ವಹಿಸಲಿದ್ದಾರೆ.

ಆರ್.ಆರ್.ಟಿ ತಂಡ, ಎ.ಡಿ.ಸಿ ತಂಡದ ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಲಿದ್ದಾರೆ.ಕಾಡಾನೆ ಹಾವಳಿ ಪ್ರದೇಶಗಳಲ್ಲಿ ಚುನಾವಣೆ ಸಂದರ್ಭ ಬಂದೋಬಸ್ತ್