ಗೋಣಿಕೊಪ್ಪ ವರದಿ, ಏ. ೨೫ : ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಮಣಮಾಡ ಕುಟುಂಬ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯ ಗುರುವಾರದ ಪಂದ್ಯಗಳಲ್ಲಿ ಮಾಪಣಮಾಡ, ಬದಲೆರ ಮುನ್ನಡೆ ಕಾಯ್ದುಕೊಂಡಿವೆ.

ಮಾಪಣಮಾಡ ತಂಡಕ್ಕೆ ಚಿಮ್ಮುಣಿರ ವಿರುದ್ಧ ೪೭ ರನ್‌ಗಳ ಭರ್ಜರಿ ಗೆಲುವು ದೊರೆಯಿತು. ಮಾಪಣಮಾಡ ಬಿದ್ದಪ್ಪ ಬಾರಿಸಿದ ೩೫ ರನ್ ನೆರವಿನಿಂದ ೪ ವಿಕೆಟ್ ನಷ್ಟಕ್ಕೆ ೧೦೬ ರನ್ ದಾಖಲಿಸಿತು. ಚಿಮ್ಮುಣಿರ ೭ ವಿಕೆಟ್ ಕಳೆದುಕೊಂಡು ೫೯ ರನ್‌ಗಳಷ್ಟೇ ಸಾಧ್ಯವಾಯಿತು. ಚಿಮ್ಮುಣಿರ ಕವನ್ ಕಾರ್ಯಪ್ಪ ೩೧ ರನ್ ದಾಖಲಿಸಿ ಪಂದ್ಯ ಶ್ರೇಷ್ಠ ಸ್ಥಾನ ಪಡೆದುಕೊಂಡರು.

ಬದಲೆರ ತಂಡವು ಅಲ್ಲಪಂಡವನ್ನು ೮ ರನ್‌ಗಳಿಂದ ಸೋಲಿಸಿತು. ಬದಲೆರ ೩ ವಿಕೆಟ್ ಕಳೆದುಕೊಂಡು ೭೮ ರನ್‌ಗಳ ಗುರಿ ನೀಡಿತು. ಅಲ್ಲಪಂಡ ೯ ವಿಕೆಟ್ ಕಳೆದುಕೊಂಡು ೬೯ ರನ್ ಗಳಿಸಿ ಸೋಲಿಗೆ ಶರಣಾಯಿತು. ಬದಲೆರ ಸಂಜು ೩೩ರನ್ ಬಾರಿಸಿ ೩ ವಿಕೆಟ್ ಕಬಳಿಸಿದರು. ಅಲ್ಲಪಂಡ ಮಿಲನ್ ೧೮ ರನ್ ದಾಖಲಿಸಿ ಪಂದ್ಯ ಶ್ರೇಷ್ಠರಾದರು.