ಮಡಿಕೇರಿ, ಏ. ೨೪: ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ಚುನಾವಣೆ ನಡೆಸುವ ಸಂಬAಧ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಪ್ರತಿಯೊಬ್ಬರು ಮತದಾನದ ಮೂಲಕ ಹಕ್ಕು ಚಲಾಯಿಸಬೇಕೆಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ವೆಂಕಟ್ ರಾಜಾ ಕರೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೨೬ ರಂದು ಚುನಾವಣೆ ನಡೆಯಲಿದ್ದು, ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೪,೭೦,೭೬೬ ಮತದಾರರು ಮತದಾನಕ್ಕೆ ಅರ್ಹರಿದ್ದು, ಮಡಿಕೇರಿ ಕ್ಷೇತ್ರದಲ್ಲಿ ೧,೧೬,೧೪೩ ಪುರುಷ, ೧,೧೪,೪೨೫ ಮಹಿಳೆ, ೯ ಇತರರು ಸೇರಿ ೨,೩೦,೫೬೮ ಮಂದಿ, ವೀರಾಜಪೇಟೆ ಕ್ಷೇತ್ರದಲ್ಲಿ ೧,೧೪,೪೨೫ ಪುರುಷರು, ೧,೧೭,೬೦೧ ಮಹಿಳೆಯರು, ೭ ಇತರರು ಸೇರಿ ೨,೩೨,೦೩೩ ಮಂದಿ ಮತದಾರರಿದ್ದಾರೆ. ೨ ಕ್ಷೇತ್ರಗಳಲ್ಲಿ ತಲಾ ೨೭೩ ರಂತೆ ಒಟ್ಟು ೫೪೬ ಮತಗಟ್ಟೆಗಳಿವೆ ಎಂದು ಮಾಹಿತಿ ನೀಡಿದರು.

೨ ಕ್ಷೇತ್ರಗಳು ಒಳಗೊಂಡAತೆ ೬೦೪ ಪಿ.ಆರ್.ಓ., ೬೦೪ ಎ.ಪಿ.ಆರ್.ಓ., ೧೨೦೮ ಪಿ.ಓ.ಗಳು ಸೇರಿ ಒಟ್ಟು ೨೪೧೬ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ೧೦೮ ಮತಗಟ್ಟೆಗಳನ್ನು ‘ವಲ್ನರೇಬಲ್ ಕ್ರಿಟಿಕಲ್’ ಎಂದು ಗುರುತಿಸಲಾಗಿದೆ. ವೆಚ್ಚ ಪರಿಶೀಲನೆ ಮತ್ತು ಮಾದರಿ ನೀತಿ ಸಂಹಿತೆ ಜಾರಿಗೊಳಿಸುವ ನಿಟ್ಟಿನಲ್ಲಿಯೂ ತಂಡಗಳು ಕಾರ್ಯೋನ್ಮುಖಗೊಂಡಿವೆ. ೧೪ ಚೆಕ್‌ಪೋಸ್ಟ್ಗಳಿವೆ. ೨೩ ವಿಶೇಷ ಮತಗಟ್ಟೆಗಳನ್ನೂ ರಚನೆ ಮಾಡಲಾಗಿದೆ. ೧೦ ಸಖಿ ಬೂತ್, ೬ ಸಾಂಪ್ರದಾಯಿಕ ಮತಗಟ್ಟೆ, ೨ ದಿವ್ಯಾಂಗ ಮತಗಟ್ಟೆ, ೨ ಯುವಮತದಾರರ ಬೂತ್‌ಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ತಾ. ೨೫ ರಂದು (ಇಂದು) ಮಸ್ಟರಿಂಗ್ ಪ್ರಕ್ರಿಯೆ ನಡೆಯಲಿದೆ. ಸಾರ್ವಜನಿಕ ವೇದಿಕೆಗಳಲ್ಲಿ ಪ್ರಚಾರಕ್ಕೆ ನಿರ್ಬಂಧವಿದ್ದು, ಮನೆಮನೆಗೆ ತೆರಳಿ ಪ್ರಚಾರ ಮಾಡಬಹುದಾಗಿದೆ. ಮತಗಟ್ಟೆಗಳ ೨೦೦ ಮೀಟರ್ ವ್ಯಾಪ್ತಿಯನ್ನು ನಿರ್ಬಂಧಿತ ಪ್ರದೇಶಗಳಾಗಿ ಪರಿವರ್ತಿಸಲಾಗಿದೆ. ಇದರ ಹೊರಗಡೆ ೨ ಚೇರ್, ಒಂದು ಟೇಬಲ್, ಸಣ್ಣ ಶಾಮಿಯಾನ ಅಳವಡಿಸಿಕೊಂಡು ಪ್ರಚಾರ ಮಾಡಬಹುದಾಗಿದ್ದು, ೨ಘಿ೩ ಅಳತೆಯನ್ನು ಬ್ಯಾನರ್‌ನಷ್ಟೆ ಬಳಕೆ ಮಾಡಬೇಕು. ತಾ. ೨೬ ರಂದು ಬೆಳಿಗ್ಗೆ ೭ ಗಂಟೆಯಿAದ ಸಂಜೆ ೬ ತನಕ ಮತದಾನ ನಡೆಯಲಿದೆ. ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಜವಾಬ್ದಾರಿ ನಿರ್ವಹಿಸಬೇಕೆಂದು ಕರೆ ನೀಡಿದರು.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ೩೨ ಪ್ರಕರಣಗಳಲ್ಲಿ ಎಫ್.ಐ.ಆರ್. ಮಾಡಲಾಗಿದೆ. ಒಟ್ಟು ರೂ. ೧೬,೫೪,೨೨೦ ನಗದು ಹಾಗೂ ರೂ. ೧.೨೭ ಲಕ್ಷ ಮೌಲ್ಯದ ೪೨, ೩೧೮.೮೦೫ ಲೀಟರ್ ಅಕ್ರಮ ಮದ್ಯ ೪,೬೦೫ ಕೆಜಿ ಮಾದಕ ವಸ್ತು ವಶಪಡಿಸಿ ಕೊಳ್ಳಲಾಗಿದೆ ಎಂದರು.

೧೨ ಮಂದಿ ಗಡಿಪಾರು : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಕೋಮು ಸಂಘರ್ಷ, ದರೋಡೆ, ಘರ್ಷಣೆ ಯಂತಹ ಪ್ರಕರಣಗಳಲ್ಲಿ ಭಾಗಿಯಾದ ೧೨ ಮಂದಿಯನ್ನು ಗಡಿಪಾರು ಮಾಡಲಾಗಿದೆ. ನಾನ್ ಬೇಲೆಬಲ್ ವಾರೆಂಟ್ ಇರುವವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿದೆ. ಅಕ್ರಮ ಚಟುವಟಿಕೆ ತಡೆಗೆ ಕ್ರಮವಹಿಸಲಾಗಿದೆ. ಸೂಕ್ಷö್ಮ, ಅತೀಸೂಕ್ಷö್ಮ ಪ್ರದೇಶಗಳನ್ನು ಗುರುತಿಸಿ ಎಚ್ಚರವಹಿಸಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಹಾಜರಿದ್ದರು.