ಸೋಮವಾರಪೇಟೆ, ಏ.೨೪: ವೃದ್ಧೆಯೋರ್ವರು ಮನೆಯಿಂದ ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಮೀಪದ ಬಿಳಿಗೇರಿ ಗ್ರಾಮದ ಮಾರಿಯಪ್ಪ ಅವರ ಅತ್ತೆ ಮುನಿಯಮ್ಮ(೬೦) ಎಂಬವರು ಕಳೆದ ತಾ. ೮ರಂದು ಮನೆಯಿಂದ ಹೊರ ಹೋದವರು ಈವರೆಗೆ ವಾಪಸ್ ಬಂದಿರುವುದಿಲ್ಲ. ನೆಂಟರಿಷ್ಟರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಾಣೆಯಾಗಿರುವ ಮುನಿಯಮ್ಮ ಅವರು ಪತ್ತೆಯಾದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಮೊ: ೯೪೮೦೮೦೪೯೫೨ ಸಂಖ್ಯೆಗೆ ಮಾಹಿತಿ ನೀಡಬೇಕೆಂದು ಇನ್ಸ್ಪೆಕ್ಟರ್ ವಸಂತ್ ಕುಮಾರ್ ಮನವಿ ಮಾಡಿದ್ದಾರೆ.