ಮಡಿಕೇರಿ, ಏ. ೨೪: ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭಗೊAಡಿದೆ. ವ್ಯವಸ್ಥಿತ ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ವ್ಯವಸ್ಥೆ ಕೈಗೊಳ್ಳುತ್ತಿದೆ. ಅದೇ ರೀತಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸ್ ಇಲಾಖೆ ಕಾರ್ಯೋನ್ಮುಖಗೊಂಡಿದೆ.

ಈಗಾಗಲೇ ವಿವಿಧೆಡೆ ಪಥಸಂಚಲನ ನಡೆಸಿ ಸ್ಥೆöÊರ್ಯ ತುಂಬುತ್ತಿರುವ ಪೊಲೀಸ್ ಇಲಾಖೆ ನಿರ್ಭಿತಿಯಿಂದ ಚುನಾವಣೆ ನಡೆಯಬೇಕೆಂಬ ಉದ್ದೇಶದಿಂದ ಕಟ್ಟುನಿಟ್ಟಿನ ನಿಗಾ ವಹಿಸಿದೆ. ಕೊಡಗು ಸೇರಿದಂತೆ ಗದಗ, ಕಲ್ಬುರ್ಗಿ, ಮೈಸೂರು ಜಿಲ್ಲೆಯಿಂದಲೂ ಹೆಚ್ಚುವರಿ ಪೊಲೀಸರನ್ನು ಜಿಲ್ಲೆಗೆ ನಿಯೋಜಿಸಿಕೊಳ್ಳಲಾಗಿದೆ.

ಇತ್ತೀಚಿಗೆ ಕೊಡಗು-ದಕ್ಷಿಣ ಕನ್ನಡ ಗಡಿ ಭಾಗದಲ್ಲಿ ನಕ್ಸಲರು ಪ್ರತ್ಯಕ್ಷ, ವಾಲ್ನೂರು ಅಪಘಾತ ಪ್ರಕರಣದ ಹಿನ್ನೆಲೆ ಮತ್ತಷ್ಟು ಎಚ್ಚರಿಕೆಯನ್ನು ಪೊಲೀಸ್ ಇಲಾಖೆ ಕೈಗೊಂಡಿದೆ.

ಇಂದು ನಗರದ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ನಡೆದ ಪೊಲೀಸರ 'ರೋಲ್ ಕಾಲ್ ಪರೇಡ್'ನಲ್ಲಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸುದ್ದಿಗೋಷ್ಠಿ ನಡೆಸಿ ಭದ್ರತೆ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

೧೬೦೦ ಸಿಬ್ಬಂದಿ ನಿಯೋಜನೆ : ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿದೆ. ೧ ಎಸ್.ಪಿ, ೧ ಎ.ಎಸ್.ಪಿ. ೬ ಡಿ.ವೈ.ಎಸ್.ಪಿ. ೧೪ ಇನ್ಸ್ಪೆಕ್ಟರ್, ೪೫ ಸಬ್ ಇನ್ಸ್ಪೆಕ್ಟರ್, ೫೯ ಎ.ಎಸ್.ಐ.ಗಳು ೬೭೮ ಪೇದೆ, ೨೮೦ ಗೃಹ ರಕ್ಷಕ ದಳ ಸಿಬ್ಬಂದಿ, ೮ ಡಿ.ಎ.ಆರ್. ತುಕಡಿ, ಗುಜಾರಾತ್‌ನಿಂದ ೨ ಶಸ್ತಾçಸ್ತç ಪಡೆಯ ೧೯೦ ಮಂದಿ ಸೇರಿ ಒಟ್ಟು ೧,೬೦೦ ಸಿಬ್ಬಂದಿಯನ್ನು ಜಿಲ್ಲೆಯಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ರಾಮರಾಜನ್ ಮಾಹಿತಿ ನೀಡಿದರು.

ತಾ. ೨೫ ರಂದು (ಇಂದು) ಮಸ್ಟರಿಂಗ್ ಕಾರ್ಯ ನಡೆಯಲಿದೆ. ೪೫ ಸೆಕ್ಟರ್ ಮೊಬೈಲ್ ವ್ಯವಸ್ಥೆ ಇರುತ್ತದೆ. ಈ ಮೂಲಕ ಆಮಿಷ, ಹಣ ಹಂಚುವುದನ್ನು ತಡೆಗಟ್ಟಲಾಗುವುದು. ‘ಫ್ಲೆöÊಯಿಂಗ್ ಸ್ಕಾ÷್ವಡ್' ಕೂಡ ಕಾರ್ಯಾಚರಿಸಲಿದೆ ಎಂದು ಕೆ. ರಾಮರಾಜನ್ ವಿವರಿಸಿದರು.

(ಮೊದಲ ಪುಟದಿಂದ) ಉತ್ತಮ ಸಮಾಜ ನಿರ್ಮಾಣಕ್ಕೆ, ನಿರ್ಭೀತಿಯಿಂದ ಮತದಾನ ಮಾಡಲು ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ಇರಲಿದೆ. ಸೂಕ್ಷö್ಮ, ಅತೀ ಸೂಕ್ಷö್ಮ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜು, ಮಡಿಕೇರಿ ಡಿ.ವೈ.ಎಸ್.ಪಿ. ಮಹೇಶ್ ಕುಮಾರ್, ಕುಶಾಲನಗರ ಡಿ.ವೈ.ಎಸ್.ಪಿ. ಆರ್.ವಿ. ಗಂಗಾದರಪ್ಪ, ವೀರಾಜಪೇಟೆ ಡಿ.ವೈ.ಎಸ್.ಪಿ. ಆರ್. ಮೋಹನ್ ಕುಮಾರ್ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವೃತ್ತ ನಿರೀಕ್ಷಕರು ಹಾಜರಿದ್ದರು.