ಮಡಿಕೇರಿ, ಏ. ೨೪: ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು, ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಕೊಯನಾಡು, ಆಶ್ರಯದಲ್ಲಿ ಕೊಯನಾಡು ಸುಬುಲು ಸ್ಸಲಾಂ ಮದ್ರಸದಲ್ಲಿ ಫತ್ಹೇ ಮುಬಾರಕ್ ಕಾರ್ಯಕ್ರಮ ಇತ್ತೀಚೆಗೆ ಮದ್ರಸ ಹಾಲ್‌ನಲ್ಲಿ ನಡೆಯಿತು.

ಸದರ್ ಉಸ್ತಾದ್ ನೌಶದ್ ಫಾಳಿಲಿ ಅವರು ದುಆ ನಡೆಸಿ ಎಲ್ಲರನ್ನೂ ಸ್ವಾಗತಿಸಿದರು, ಖತೀಬ್ ಉಸ್ತಾದ್ ಮಹಮ್ಮದ್ ಸಖಾಫಿ ಅಲ್ ಹೀಕಮಿ ಕಾರ್ಯಕ್ರಮ ಉದ್ಘಾಟಿಸಿ ವಿಧ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು, ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎನ್‌ಐಎ ಅಧ್ಯಕ್ಷ ನಸೀರ್ ಮಾಡಶೇರಿ, ಸಲಹಾ ಸಮಿತಿ ಸದಸ್ಯ ಹನೀಫ್ ಎಸ್.ಪಿ, ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಎಸ್.ಪಿ. ಇದ್ದರು. ಮದ್ರಸ ವಿದ್ಯಾರ್ಥಿಗಳು, ಊರವರು, ಪೋಷಕರು, ಜಮಾಆತರು, ಸದಸ್ಯರು ಭಾಗಹಿಸಿದ್ದರು, ಎನ್‌ಐಎ ವತಿಯಿಂದ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.