ಮಡಿಕೇರಿ, ಏ. ೨೪: ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಹಝತ್ ಸೂಫೀ ಶಹೀದ್ (ರ) ಮತ್ತು ಸಯ್ಯದ್ ಹಸನ್ ಸಖಾಫ್ ಅಲ್ ಹಳ್ರಮೀ (ರ) ಹಾಗೂ ಇತರ ಔಲಿಯಾಗಳ ಹೆಸರಲ್ಲಿ ಪ್ರತಿ ವರ್ಷವು ಆಚರಿಸಿಕೊಂಡು ಬರುತ್ತಿರುವ ಉರೂಸ್ ಮುಬಾರಕ್ ತಾ. ೨೬ ರಿಂದ (ನಾಳೆಯಿಂದ) ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮಾಅತ್ ಅಧ್ಯಕ್ಷ ಅಬೂಬಕರ್ ಸಖಾಫಿ ಪುದಿಯೋಡಿ, ತಾ. ೨೬ರಂದು ಮಧ್ಯಾಹ್ನ ಜುಮಾ ನಮಾಝಿನ ನಂತರ ನಡೆಯುವ ಝಿಯಾರತ್ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಯ್ಯದ್ ಮೈನುಲ್ ಆಬಿದೀನ್ ಜಿಫರಿ ತಂಙಳ್ ನೇತೃತ್ವ ವಹಿಸಲಿದ್ದಾರೆ.

ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತಿನ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಪುದಿಯೋಡಿ ಧ್ವಜಾರೋಹಣ ಮಾಡಲಿದ್ದಾರೆ. ಸಂಜೆ ೭ ಗಂಟೆಗೆ ನಡೆಯುವ ಉರೂಸ್ ಉದ್ಘಾಟನಾ ಕಾರ್ಯಕ್ರಮ ಹಂಸ ಸಖಾಫೀಯವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕೊಡಗು ಜಿಲ್ಲಾ ನಾಯಿಬ್ ಖಾಝೀ ಎಂ.ಎA. ಅಬ್ದುಲ್ಲ ಫೈಝೀ ಉದ್ಘಾಟನೆ ಮಾಡಲಿದ್ದಾರೆ. ನಂತರ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮುಖ್ಯ ಭಾಷಣ ಮಾಡಲಿದ್ದಾರೆ. ತಾ. ೨೭ರಂದು ಸಯ್ಯದ್ ಶಿಹಾಬುದ್ದೀನ್ ಅಲ್ ಅಹ್ದಲ್ (ಮುತ್ತನೂರ್ ತಂಙಳ್) ನೇತೃತ್ಪಲ್ಲಿ ದ್ಸಿಕ್ರ್ ಮಜ್ಲಿಸ್ ಮತ್ತು ಮುಳ್ಳೂರ್ಕರ ಮುಹಮ್ಮದ್ ಅಲಿ ಸಖಾಫೀ ಭಾಷಣ ಮಾಡಲಿದ್ದಾರೆ. ತಾ. ೨೮ರಂದು ರಾತ್ರಿ ೭ ಗಂಟೆಗೆ ನಡೆಯುವ ಖತಂ ದುಆ ಕಾರ್ಯಕ್ರಮಕ್ಕೆ ಸಯ್ಯದ್ ಶಿಹಾಬ್ ಅಲ್ ಹೈದರೂಸಿ ಎಮ್ಮೆಮಾಡು (ಕಿಲ್ಲೂರ್ ತಂಙಳ್) ನೇತೃತ್ವ ನೀಡಲಿದ್ದಾರೆ. ಸಂಜೆ ೮.೩೦ಕ್ಕೆ ಅಬ್ದುಲ್ ಸಲಾಂ ಮುಸಲಿಯಾರ್ ದೇವರ್ಶೋಲ ಭಾಷಣ ಮಾಡಲಿದ್ದಾರೆ. ತಾ. ೨೯ರಂದು ಸಯ್ಯದ್ ಕುಂಬೋಲ್ ಆಟಕೋಯ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಾರ್ವಜನಿಕ ಸಮ್ಮೇಳನವನ್ನು ಸಯ್ಯದ್ ಮುಈನಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಸಲಿದ್ದಾರೆ. ಕರ್ನಾಟಕ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಶಾಫಿ ಸಅದಿ ಬೆಂಗಳೂರು ಮೌಲಾನ ಪೇರೋಡ್ ಅಬ್ದುಲ್ ರಹಮಾನ್ ಸಖಾಫೀ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ವಕ್ಫ್ ಸಚಿವ ಜಮೀರ್ ಅಹ್ಮದ್, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ, ಕರ್ನಾಟಕ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಪಾಷ, ಕೊಡಗು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಅಬ್ದುಲ್ ಹಕೀಂ, ಮನು ಮುತ್ತಪ್ಪ ಮುಂತಾದವರು ಭಾಗವಹಿಲಿದ್ದಾರೆ. ಸಂಜೆ ೪ ಗಂಟೆಯಿAದ ೬ ಗಂಟೆ ವರೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ೮.೩೦ಕ್ಕೆ ಶಮೀರ್ ದಾರಿಮಿ ಕೊಲ್ಲಂ ಭಾಷಣ ಮಾಡಲಿದ್ದಾರೆ. ತಾ. ೩೦ರಂದು ರಾತ್ರಿ ವಹಾಬ್ ನೀಮಿ ಕೊಲ್ಲಂ ಮಾತನಾಡಲಿದ್ದಾರೆ. ಮೇ ೧ ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯುವ ದುಆಮಜ್ಲಿಸ್‌ಗೆ ಸಯ್ಯದ್ ಕೂರ ತಂಙಳ್ ನೇತೃತ್ವ ನೀಡಲಿದ್ದಾರೆ. ರಾತ್ರಿ ೮.೩೦ಕ್ಕೆ ನೌಫಲ್ ಸಖಾಫಿ ಕಳಸ ಮೇ ೨ರ ರಾತ್ರಿ ೭ ಗಂಟೆಗೆ ದರ್ಗಾದಲ್ಲಿ ನಡೆಯುವ ಸ್ವಲಾತ್ ಕಾರ್ಯಕ್ರಮಕ್ಕೆ ಹಂಸ ಸಖಾಫೀ ಮುದರಿಸ್ ಎಮ್ಮೆಮಾಡು ಸಯ್ಯದ್ ಸಮೀಹ್ ತಂಙಳ್ ನೇತೃತ್ವ ನೀಡಲಿದ್ದಾರೆ. ರಾತ್ರಿ ೮.೩೦ಕ್ಕೆ ನೌಶಾದ್ ಬಾಖವಿ ಕೊಲ್ಲಂ ಭಾಷಣ ಮಾಡಲಿದ್ದಾರೆ. ಮೇ ೩ರಂದು ಮಧ್ಯಾಹ್ನ ೧.೩೦ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫೀ ಪುದಿಯೋಡಿ ವಹಿಸಲಿದ್ದಾರೆ. ಸಯ್ಯಿದ್ ಇಲ್ಯಾಸ್ ತಂಙಳ್ ಎರುಮಾಡ್ ಸಯ್ಯದ್ ಇಬ್ರಾಹಿಮುಲ್ ಖಲೀಲುಲ್ ಬುಖಾರಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಅಶ್ರಫ್ ಬಲಿಯತ್‌ಕಾರಂಡ, ಸದಸ್ಯರುಗಳಾದ ಉಸ್ಮಾನ್ ಕಂಬೇರ, ಲತೀಫ್ ಕೂರುಳಿ ಇದ್ದರು.