ವೀರಾಜಪೇಟೆ, ಏ. ೨೪: ದಾಖಲೆಯಿಲ್ಲದೆ ಸಾಗಿಸುತ್ತಿದ್ದ ರೂ. ೧,೪೭,೦೬೦ ಅನ್ನು ಸಮೀಪದ ಪೆರುಂಬಾಡಿ ಚೆಕ್‌ಪೋಸ್ಟ್ನಲ್ಲಿ ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು ಕೇರಳ ಗಡಿಭಾಗವಾದ ಪೆರುಂಬಾಡಿ ಚೆಕ್ ಪೋಸ್ಟ್ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಕೇರಳದ ಇರಿಟ್ಟಿಯಿಂದ ಮೈಸೂರಿಗೆ ತೆರಳುತ್ತಿದ್ದ ಕಾರೊಂದರಲ್ಲಿ ನಗದು ಪತ್ತೆಯಾಗಿದ್ದು, ಅಜೆಯನ್ ಎಂಬವರ ಬಳಿಯಿದ್ದ ದಾಖಲೆಯಿಲ್ಲದ ನಗದನ್ನು ವಶಕ್ಕೆ ಪಡೆದ ಅಧಿಕಾರಿಗಳು ಉಪ ಖಜಾನೆಗೆ ಒಪ್ಪಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.