ನಾಪೋಕ್ಲು, ಏ. ೨೪: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಕುಂಡ್ಯೋಳAಡ ಕಪ್‌ನ ಎರಡನೇ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್‌ಗಳಾದ ಕುಲ್ಲೇಟಿರ, ಚೇಂದAಡ ಮತ್ತು ಚೆಪ್ಪುಡಿರ, ಬೊವ್ವೇರಿಯಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಮೈದಾನ ೧ರಲ್ಲಿ ಮಾಜಿ ಚಾಂಪಿಯನ್ ಕುಲ್ಲೇಟಿರ ಮತ್ತು ಐನಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಲ್ಲೇಟಿರ ತಂಡವು ೩-೦ ಗೋಲುಗಳ ಅಂತರದಿAದ ಐನಂಡ ತಂಡವನ್ನು ಸೋಲಿಸಿತು. ಕುಲ್ಲೇಟಿರ ತಂಡದ ಪರ ರೋಶನ್ ಪಂದ್ಯ ಆರಂಭದ ೧೦ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿದರು. ಅರ್ಜುನ್ ೪೬ನೇ ನಿಮಿಷದಲ್ಲಿ ೨ನೇ ಗೋಲು ದಾಖಲಿಸಿದರು. ಸಂಚಿತ್ ೪೯ನೇ ನಿಮಿಷದಲ್ಲಿ ಮೂರನೇ ಗೋಲು ದಾಖಲಿಸುವ ಮೂಲಕ ತಂಡದ ಭರ್ಜರಿ ಜಯಕ್ಕೆ ಕಾರಣರಾದರು. ಚೆಪ್ಪುಡಿರ ಮತ್ತು ಚೆಕ್ಕೆರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಪ್ಪುಡಿರ ತಂಡವು ಚೆಕ್ಕೆರ ತಂಡವನ್ನು ೪-೦ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಚೆಪ್ಪುಡಿರ ತಂಡದ ಪರ ಗಗನ್ ಬೆಳ್ಯಪ್ಪ ೧ನೇ ನಿಮಿಷದಲ್ಲಿ ಗೋಲು ದಾಖಲಿಸುವುದರ ಮೂಲಕ ತಂಡದ ಖಾತೆ ತೆರೆದರು. ಚೇತನ್ ೧೯ ಮತ್ತು ೩೩ ನಿಮಿಷದಲ್ಲಿ ಎರಡು ಗೋಲು ದಾಖಲಿಸಿದರು. ನರೇನ್ ೪೦ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮಾಜಿ ಚಾಂಪಿಯನ್ ಚೇಂದAಡ ಮತ್ತು ಕರಿನೆರವಂಡ ತಂಡಗಳ ನಡುವಿನ ಸೆಣಸಾಟದಲ್ಲಿ ಚೇಂದAಡ ತಂಡ ೨-೧ ಗೋಲುಗಳಿಂದ ಕರಿನೆರವಂಡ ತಂಡವನ್ನು ಮಣಿಸಿತು. ಚೇಂದAಡ ತಂಡದ ಪರ ನಿಕಿನ್ ತಿಮ್ಮಯ್ಯ ೩೦ ನೇ ನಿಮಿಷದಲ್ಲಿ, ಪ್ರಫುಲ್ ೩೩ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ೪೮ನೇ ನಿಮಿಷದಲ್ಲಿ ಚೇಂದAಡ ಮೋಕ್ಷಿತ್ ಗಳಿಸಿದ ಎರಡನೇ ಗೋಲಿನ ಕಾರಣದಿಂದ ಚೇಂದAಡ ತಂಡ ಜಯಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಬೊವ್ವೇರಿಯಂಡ ಮತ್ತು ಐಚ್ಚೆಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಆರಂಭದ ೧ನೇ ನಿಮಿಷದಲ್ಲಿ ಬೊವ್ವೇರಿಯಂಡ ಜಿತನ್ ಕಾರ್ಯಪ್ಪ ಮೊದಲ ಗೋಲುಗಳಿಸುವುದರ ಮೂಲಕ ತಮ್ಮ ತಂಡದ ಖಾತೆ ತೆರೆದರು. ಇದರ ವಿರುದ್ಧ ಬಿರುಸಿನ ಆಟ ಪ್ರದರ್ಶಿಸಿದ ಐಚೆಟ್ಟಿರ ತಂಡ ಲೇಹರ್ ತಿಮ್ಮಯ್ಯ ೧೮ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದವು. ೨೬ನೇ ನಿಮಿಷದಲ್ಲಿ ಬೊವ್ವೇರಿಯಂಡ ಗ್ಯಾನ್ ಉತ್ತಪ್ಪ ದಾಖಲಿಸಿದ ಮತ್ತೊಂದು ಗೋಲಿನಿಂದ ೨-೧ ಅಂತರದಲ್ಲಿ ಬೊವ್ವೇರಿಯಂಡ ತಂಡ ಐಚೆಟ್ಟಿರ ತಂಡದ ವಿರುದ್ಧ ವಿಜಯ ಪತಾಕೆ ಹಾರಿಸಿತು. -ಪಿ.ವಿ. ಪ್ರಭಾಕರ್