ಮಡಿಕೇರಿ, ಏ. ೨೪: ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ೨೦೨೩-೨೪ನೇ ಸಾಲಿಗೆ ಭಾರತೀಯ ಸೇನೆ, ಭದ್ರತಾ ಪಡೆ, ಪೊಲೀಸ್ ಸೇವೆ ಸೇರಿದಂತೆ ಇತರೆ ಸಮವಸ್ತç ಸೇವೆಗಳಿಗೆ ಸೇರ ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ಉಚಿತವಾಗಿ ೨ ತಿಂಗಳು ವಸತಿಯುತ ದೈಹಿಕ ಸಾಮರ್ಥ್ಯ ತರಬೇತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡುವ ಸಂಬAಧ ಅರ್ಹ ಅಭ್ಯರ್ಥಿ ಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಮವಸ್ತç ಸೇವೆಗಳಿಗೆ ವಸತಿಯುತ ೬೦ ದಿನಗಳ ದೈಹಿಕ ಹಾಗೂ ಇತರೆ ತರಬೇತಿ. ೧೦ನೇ ತರಗತಿ ಉತ್ತೀರ್ಣರಾಗಿರಬೇಕು. ವಯೋಮಿತಿ ೧೭ ವರ್ಷ ೬ ತಿಂಗಳಿನಿAದ ೨೩ ವರ್ಷಗಳು, ಅಭ್ಯರ್ಥಿಯ ಸಾಮಾನ್ಯ ಅರ್ಹತೆ ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ. ೫ ಲಕ್ಷ ಮೀರಿರಬಾರದು. ದೈಹಿಕ ಗುಣಮಟ್ಟ ಪರೀಕ್ಷೆ ಎತ್ತರ ಪುರುಷ ಅಭ್ಯರ್ಥಿ ೧೬೨-೧೮೫ ಸೆಂ.ಮೀ. ಮಹಿಳಾ ಅಭ್ಯರ್ಥಿ ೧೫೨ ಸೆಂ.ಮೀ., ಎದೆ ಸುತ್ತಳತೆ ಪುರುಷ ಅಭ್ಯರ್ಥಿ ಸಹಜ ಸ್ಥಿತಿಯಲ್ಲಿ ೭೫ ಸೆಂ.ಮೀ. ಹೊಂದಿದ್ದು, ವಿಸ್ತರಿಸಿದಾಗ ಕನಿಷ್ಟ ೮೦ ಸೆಂ.ಮೀ. ಹೊಂದಿರಬೇಕು. ತೂಕ ಕನಿಷ್ಟ ೪೭.೨ ರಿಂದ ಗರಿಷ್ಠ ೭೮.೭ ಕೆ.ಜಿ.ಯೊಳಗಿರಬೇಕು. ಮಹಿಳಾ ಅಭ್ಯರ್ಥಿ ೪೪.೪ ಕೆ.ಜಿ. ಇರಬೇಕು.

ಹೆಚ್ಚಿನ ಮಾಹಿತಿಗೆ ಮತ್ತು ಆನ್‌ಲೈನ್ ಅರ್ಜಿ ಸಲ್ಲಿಸಲು ತಿತಿತಿ.sತಿ.ಞಚಿಡಿ.ಟಿiಛಿ.iಟಿ ವೆಬ್‌ಸೈಟ್‌ನ್ನು ವೀಕ್ಷಿಸಬಹುದು. ತಾಂತ್ರಿಕ ಸಮಸ್ಯೆಗಳು ಕಂಡು ಬಂದರೆ ದೂ. ೯೪೮೨೩೦೦೪೦೦/ ೯೪೮೦೮೪೩೦೦೫/ ೦೮೦-೨೨೨೦೭೭೮೪ ನ್ನು ಸಂಪರ್ಕಿಸಬಹುದು. ೨೫೦ ಅಭ್ಯರ್ಥಿಗಳಂತೆ ೪ ಬ್ಯಾಚ್‌ಗಳಲ್ಲಿ ತರಬೇತಿ ಸಂಸ್ಥೆ ಮೂಲಕ ಆಯ್ಕೆ ಮಾಡಲಾಗುವುದು. ತರಬೇತಿ ನೀಡಲು ನಿಗದಿಪಡಿಸಿದ ತರಬೇತಿ ಸಂಸ್ಥೆಯ ನೇತೃತ್ವದಲ್ಲಿ ನಡೆಸಲಾಗುವ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣ ರಾಗುವ ಅಭ್ಯರ್ಥಿಗಳನ್ನು ಷರತ್ತಿಗೊಳಪಟ್ಟು ಆಯ್ಕೆ ನಡೆಸಲಾಗುವುದು. ಅಭ್ಯರ್ಥಿಗಳ ಅಂತಿಮ ಆಯ್ಕೆ ತರಬೇತಿ ನೀಡುವ ಸಂಸ್ಥೆಯದ್ದಾಗಿರುತ್ತದೆ. ಮೊದಲು ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಹಂತ ಹಂತವಾಗಿ ತರಬೇತಿಗೆ ನಿಯೋಜಿಸಲಾಗುವುದು. ನಿಗದಿತ ದಿನಾಂಕ ಹಾಗೂ ಸ್ಥಳಕ್ಕೆ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು. ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಸಂದರ್ಭದಲ್ಲಿ ಉಂಟಾಗಬಹುದಾದ ಯಾವುದೇ ನಷ್ಟ ದುರಂತ ದುರ್ಘಟನೆಗೆ ಇಲಾಖಾ ಅಥವಾ ತರಬೇತಿ ನೀಡಲು ಆಯ್ಕೆಯಾದ ತರಬೇತಿ ಸಂಖ್ಯೆ ಹೊಣೆಯಾಗುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.