ಗೋಣಿಕೊಪ್ಪ ವರದಿ, ಏ. ೨೪: ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ಮಹಿಳೆಯರ ಮೂರು ತಂಡಗಳು ಸೇರಿದಂತೆ ೧೪ ತಂಡಗಳು ಗೆಲುವು ಸಾಧಿಸಿದವು.

ಮಹಿಳಾ ವಿಭಾಗ : ಅಚ್ಚಕಾಳೇರ ಟೈನಿ ಪಡೆದ ೨ ವಿಕೆಟ್ ಹಾಗೂ ಮೇಘನಾ ಬಾರಿಸಿದ ೧೧ ರನ್‌ಗಳ ಕಾಣಿಕೆಯಿಂದ ಕಾಯಪಂಡ ತಂಡವನ್ನು ೭ ವಿಕೆಟ್‌ಗಳಿಂದ ಮಣಿಸಿತು. ಕಾಯಪಂಡ ೩ ವಿಕೆಟ್ ಕಳೆದುಕೊಂಡು ೪೬ ರನ್, ಅಚ್ಚಕಾಳೇರ ೩ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಕಾಯಪಂಡ ರಸ್ನಾ ೨೮ ರನ್ ದಾಖಲಿಸಿದರು.

ಅಜ್ಜಿಕುಟ್ಟೀರ ತಂಡಕ್ಕೆ ಮುದ್ದಿಯಡ ವಿರುದ್ಧ ೧೬ ರನ್ ಗೆಲುವು ಲಭಿಸಿತು. ಅಜ್ಜಿಕುಟ್ಟೀರ ಮಮತ ಬಾರಿಸಿದ ೨೧ ರನ್‌ಗಳ ನೆರವಿನಿಂದ ೧ ವಿಕೆಟ್ ಕಳೆದುಕೊಂಡು ೪೨ ರನ್ ಗಳಿಸಿತು. ಮುದ್ದಿಯಡ ೨ ವಿಕೆಟ್ ನಷ್ಟಕ್ಕೆ ೨೬ ರನ್ ಗಳಿಸಿತು. ಮುದ್ದಿಯಡ ಕಾಂಚನಾ ೧ ವಿಕೆಟ್, ಸ್ವಾತಿ ೬ ರನ್ ದಾಖಲಿಸಿದರು.

ಮೇವಡ ತೆಕ್ಕಡವನ್ನು ೧೭ ರನ್‌ಗಳಿಂದ ಮಣಿಸಿತು. ಮೇವಡ ರೇಷ್ಮಾ ೨೩ ರನ್‌ಗಳ ನೆರವಿನಿಂದ ೧ ವಿಕೆಟ್ ನಷ್ಟಕ್ಕೆ ೫೧ ರನ್ ಗಳಿಸಿತು. ತೆಕ್ಕಡ ಕಾವ್ಯ ೧೫ ರನ್ ಸಿಡಿಸಿ ೧ ವಿಕೆಟ್ ನಷ್ಟಕ್ಕೆ ೩೫ ರನ್ ದಾಖಲಿಸಲು ನೆರವಾದರು. ತೆಕ್ಕಡ ಕೌಶಿ ೧ ವಿಕೆಟ್ ಪಡೆದರು.

ಪುರುಷರ ಫಲಿತಾಂಶ : ಚೀಯಕ್‌ಪೂವಂಡ ತಂಡಕ್ಕೆ ಮೇವಡ ವಿರುದ್ಧ ೯ ವಿಕೆಟ್‌ಗಳ ಗೆಲುವು ಲಭಿಸಿತು. ಮೇವಡ ೭ ವಿಕೆಟ್ ನಷ್ಟಕ್ಕೆ ೪೦ ರನ್, ಚಿಯಕ್‌ಪೂವಂಡ ೩.೧ ಒವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಮೇವಡ ಶರತ್ ೧೨, ಚಿಯಕ್‌ಪೂವಂಡ ನಿರನ್ ೨೮ ರನ್ ಬಾರಿಸಿದರು.

ಮಣವಟ್ಟಿರ ತಂಡವು ಕುಂಞAಗಡವನ್ನು ೯ ವಿಕೆಟ್‌ಗಳಿಂದ ಮಣಿಸಿತು. ಕುಂಞAಗಡ ೪ ವಿಕೆಟ್ ನಷ್ಟಕ್ಕೆ ೪೯ ರನ್, ಮಣವಟ್ಟಿರ ೩.೨ ಒವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಕುಂಞAಗಡ ಆದೇಶ್ ೨೭ ರನ್, ಮಣವಟ್ಟಿರ ಸದಾ ೪೩ ರನ್, ತೇಜ್ ೨ ವಿಕೆಟ್ ಪಡೆದರು.

ಮುಕ್ಕಾಟೀರ (ಕಡಗದಾಳ್) ತಂಡವು ಪುಗ್ಗೇರ ವಿರುದ್ಧ ೭ ವಿಕೆಟ್‌ಗಳ ಗೆಲುವು ಪಡೆಯಿತು. ಪುಗ್ಗೇರ ಚೆಂಗಪ್ಪ ಬಾರಿಸಿದ ೨೪ ರನ್‌ಗಳ ನೆರವಿನಿಂದ ವಿಕೆಟ್ ಕಳೆದುಕೊಂಡು ೮೮ ರನ್ ದಾಖಲಿಸಿತು. ಮುಕ್ಕಾಟಿರ ೫ ಎಸೆತ ಉಳಿದಿರುವಂತೆ ೩ ವಿಕೆಟ್ ಕಳೆದುಕೊಂಡು ಗೆಲುವಿನ ನಗೆಬೀರಿತು. ಮುಕ್ಕಾಟಿರ ಅಶ್ವನ್ ೩೪, ನಾಣಯ್ಯ ೩೨ ರನ್ ಕಾಣಿಕೆ ನೀಡಿದರು. ಮುಕ್ಕಾಟಿರ ಸತೀಶ್ ೩ ವಿಕೆಟ್ ಪಡೆದರು.

ಐಚಂಡ ಮರುವಂಡವನ್ನು ೯ ರನ್‌ಗಳಿಂದ ಸೋಲಿಸಿತು. ಐಚಂಡ ೪ ವಿಕೆಟ್ ನಷ್ಟಕ್ಕೆ ೯೧ ರನ್, ಮರುವಂಡ ೩ ವಿಕೆಟ್ ಕಳೆದುಕೊಂಡು ೮೨ ರನ್ ದಾಖಲಿಸಿತು. ಐಚಂಡ ನಿಶು ೨೬ ರನ್, ಸುಕೇಶ್ ೧ ವಿಕೆಟ್, ಮರುವಂಡ ತಿಮ್ಮಯ್ಯ ೨೭ ರನ್, ಸಜನ್ ೧ ವಿಕೆಟ್ ಪಡೆದರು.

ಕುಟ್ಟಂಡ (ಕಾರ್ಮಾಡು) ತಂಡವು ಪಾಸುರವನ್ನು ೧೪ ರನ್‌ಗಳಿಂದ ಮಣಿಸಿತು. ಕುಟ್ಟಂಡ ೭ ವಿಕೆಟ್‌ಗೆ ೭೯ ರನ್, ಪಾಸುರ ೫ ವಿಕೆಟ್‌ಗೆ ೬೫ ರನ್ ಗಳಿಸಿತು.

ಅಡ್ಡೇಂಗಡ ತಂಡಕ್ಕೆ ಕಳ್ಳೇಂಗಡ (ಬೆಳ್ಳೂರು) ವಿರುದ್ಧ ೯ ವಿಕೆಟ್ ಜಯ ಲಭಿಸಿತು. ಕಳ್ಳೇಂಗಡ ನಿಗದಿತ ೮ ಓವರ್‌ಗಳಿಗೆ ೫ ವಿಕೆಟ್ ಕಳೆದುಕೊಂಡು ೪೮ ರನ್ ಗುರಿ ನೀಡಿತು. ಅಡ್ಡೇಂಗಡ ೪.೧ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ಗೆಲುವು ಪಡೆದುಕೊಂಡಿತು. ಕಳ್ಳೇಂಗಡ ಸಾತ್ವಿಕ್ ಸೋಮಣ್ಣ ೧೩ ರನ್, ಅಡ್ಡೇಂಗಡ ರಜತ್ ಸೋಮಣ್ಣ ೨ ವಿಕೆಟ್, ಶೌರ್ಯ ಚಿಣ್ಣಪ್ಪ ೨೧ ರನ್, ಆದರ್ಶ್ ೨೦ ರನ್ ಸಿಡಿಸಿದರು.

ಮುದ್ದಿಯಡಕ್ಕೆ ಕೊಟ್ಟ್ಕತ್ತಿರ ವಿರುದ್ಧ ೪೮ ರನ್‌ಗಳ ಗೆಲುವು ಸಿಕ್ಕಿತು. ಮುದ್ದಿಯಡ ೨ ವಿಕೆಟ್‌ಗೆ ೯೨ ರನ್, ಕೊಟ್ಟ್ಕತ್ತೀರ ೭ ವಿಕೆಟ್ ಕಳೆದುಕೊಂಡು ಕೇವಲ ೪೪ ರನ್ ಗಳಿಸಿತು. ಮುದ್ದಿಯಡ ಕರಣ್ ಕಾವೇರಪ್ಪ ೪೯ ರನ್, ಕೊಟ್ಟ್ಕತ್ತೀರ ಲೋಕೇಶ್ ತಿಮ್ಮಯ್ಯ ೨೧ ರನ್, ಚೇತನ್ ೨ ವಿಕೆಟ್ ಪಡೆದರು.

ಪಾಸುರ ತಂಡವು ಕುಂಞÂಯAಡ ತಂಡವನ್ನು ೪ ರನ್‌ಗಳಿಂದ ಸೋಲಿಸಿತು. ಪಾಸುರ ೩ ವಿಕೆಟ್ ನಷ್ಟಕ್ಕೆ ೧೧೩ ರನ್, ಕುಂಞÂಯAಡ ೭ ವಿಕೆಟ್ ಕಳೆದುಕೊಂಡು ೧೦೯ ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಕುಟ್ಟಂಡ (ಕಾರ್ಮಾಡು) ತಂಡಕ್ಕೆ ಕಲ್ಲೇಂಗಡ (ನಾಪೋಕ್ಲು) ವಿರುದ್ಧ ೧೦೮ ರನ್‌ಗಳ ಅಮೋಘ ಜಯ ದೊರೆಯಿತು. ಕುಟ್ಟಂಡ ೫ ಓವರ್‌ಗೆ ೧೪೭ ರನ್ ದಾಖಲಿಸಿತು. ಕಲ್ಲೇಂಗಡ ೬ ವಿಕೆಟ್ ನಷ್ಟಕ್ಕೆ ೩೯ ರನ್ ಗಳಿಸಿತು. ಕುಟ್ಟಂಡ ಕುಟ್ಟಪ್ಪ ೧೯ ರನ್, ಪಾಸುರ ಕಾರ್ತಿಕ್ ೨೭ ರನ್ ದಾಖಲಿಸಿದರು.

ಮಾಣೀರ ತಂಡವು ಕಾಯಪಂಡವನ್ನು ೭ ವಿಕೆಟ್‌ಗಳಿಂದ ಮಣಿಸಿತು. ಕಾಯಪಂಡ ೪ ವಿಕೆಟ್‌ಗೆ ೯೧ ರನ್, ಮಾಣೀರ ೩ ವಿಕೆಟ್ ನಷ್ಟಕ್ಕೆ ೯೨ ರನ್ ಗಳಿಸಿತು.

ಅಳಮೇಂಗಡಕ್ಕೆ ಬಲ್ಯಮೀದೇರಿರ ವಿರುದ್ಧ ೯ ವಿಕೆಟ್ ಜಯ ದೊರೆಯಿತು. ಅಳಮೇಂಗಡ ೧ ವಿಕೆಟ್ ನಷ್ಟಕ್ಕೆ ೬೬ ರನ್, ಬಲ್ಯಮೀದೇರಿರ ೩ ವಿಕೆಟ್ ಕಳೆದುಕೊಂಡು ೬೨ ರನ್ ಗಳಿಸಿತು. ಅಳಮೇಂಗಡ ದಿಲೀಪ್ ೩೫ ರನ್, ಸೋಮಯ್ಯ ೧೭ ರನ್, ಬಲ್ಯಮೀದೇರಿರ ಸಚಿನ್ ೧೮, ಬೋಪಣ್ಣ ೧೬ ರನ್ ಗಳಿಸಿದರು. ತಿರುನೆಲ್ಲಿಮಾಡ ತಂಡ ಗೈರು ಹಿನ್ನೆಲೆ ಚೊಟ್ಟಂಗಡ ಮುಂದಿನ ಸುತ್ತಿಗೆ, ಪಾಲೇಂಗಡ ಗೈರಿನಿಂದ ಮುದ್ದುರ ಗೆಲುವು ಪಡೆದುಕೊಂಡಿತು.