ಸುಂಟಿಕೊಪ್ಪ, ಏ. ೨೩: ಸುಂಟಿಕೊಪ್ಪ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಮೈಸೂರು-ಕೊಡಗು ಲೋಕಸಭಾ ಬಿ.ಜೆ.ಪಿ. ಅಭ್ಯರ್ಥಿ ಯದುವೀರ ಪರ ಮತಯಾಚನೆ ನಡೆಸಿದರು.

ಬಿಜೆಪಿ ನಗರಾಧ್ಯಕ್ಷ ಧನು ಕಾವೇರಪ್ಪ ಅವರ ನೇತೃತ್ವದಲ್ಲಿ ಪಟ್ಟಣದ ಮನೆ, ಅಂಗಡಿಗಳಿಗೆ ತೆರಳಿ ಯದುವೀರ ಅವರನ್ನು ಗೆಲ್ಲಿಸಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.

ಗದ್ದೆಹಳ್ಳದಿAದ ಪಟ್ಟಣದವರೆಗೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಿತ್ತಿಪತ್ರ ವಿತರಿಸಿ ಮತಯಾಚನೆ ಮಾಡಿದರು. ಮುಖಂಡರಾದ ಪಿ.ಆರ್. ಸುನಿಲ್ ಕುಮಾರ್, ವಿಘ್ನೇಶ್, ಬಿ.ಕೆ. ಮೋಹನ್, ಈಶ್ವರ, ವಸಂತಿ, ಸಿ.ಸಿ. ಸುನಿಲ್, ಓಡಿಯಪ್ಪನ ಸುದೇಶ್, ಅನಿಲ್, ರಾಜ, ಸಹದೇವನ್, ಬಿ.ಕೆ. ಪ್ರಶಾಂತ್, ಶಾಂತಿ ಸೇರಿದಂತೆ ಕಾರ್ಯಕರ್ತರು ಇದ್ದರು.