ಕೂಡಿಗೆ, ಏ. ೨೨ : ಮಹಿಳೆಯೊಬ್ಬರು ಕೂಡಿಗೆ ಸರ್ಕಲ್ನಲ್ಲಿ ಬಸ್ ಇಳಿದು ತೆರಳುತ್ತಿದ್ದ ಸಂದರ್ಭ ಬೈಕ್ ಡಿಕ್ಕಿಯಾಗಿ ಕಾಲು ಮುರಿತಕ್ಕೊಳಗಾದ ಘಟನೆ ನಡೆದಿದೆ.
ಮಲ್ಲೇನಹಳ್ಳಿ ಗ್ರಾಮದ ನಾಗರತ್ನ ಎಂಬವರು ಹಾಸನ ಕಡೆಯಿಂದ ಬಂದು ಬಸ್ ಇಳಿದು ತೆರಳುತ್ತಿದ್ದ ಸಂದರ್ಭ ಹೆದ್ದಾರಿಯಲ್ಲಿ ಬಂದ ಪ್ರಸನ್ನ ಎಂಬಾತ ಚಾಲಿಸುತ್ತಿದ್ದ ಬೈಕ್ (ಕೆ.ಎ.೧೨. ಆರ್. ೨೯೧೭) ಡಿಕ್ಕಿ ಹೊಡೆದ ಪರಿಣಾಮ ನಾಗರತ್ನ ಅವರ ಕಾಲು ಮುರಿಯಲ್ಪಟ್ಟಿದ್ದು, ಪ್ರಥಮ ಚಿಕಿತ್ಸೆಯನ್ನು ಕುಶಾಲನಗರ ಸಮುದಾಯದ ಅರೋಗ್ಯ ಕೇಂದ್ರದಲ್ಲಿ ನೀಡಿ ನಂತರ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.