ಮಡಿಕೇರಿ, ಏ. ೨೨: ವಾರ್ಡ್ ನಂ. ೫ ನಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಪರ ಮತಪ್ರಚಾರ ಮಾಡಲಾಯಿತು. ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾ ಕಾರ್ಯದರ್ಶಿ ಕನ್ನಿಕೆ ದಿನೇಶ್, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್ ಎಸ್.ಸಿ., ನಗರಸಭಾ ಸದಸ್ಯರುಗಳಾದ ಕೆ.ಎಸ್. ರಮೇಶ್, ಅಪ್ಪಣ್ಣ, ಮಂಜುಳಾ, ಶ್ವೇತಾ ಪ್ರಶಾಂತ್, ಶಕ್ತಿ ಕೇಂದ್ರದ ಪ್ರಮುಖರಾದ ತೀರ್ಥಾನಂದ ಮತ್ತು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗ ವಹಿಸಿದ್ದರು.