ಗೋಣಿಕೊಪ್ಪಲು, ಏ. ೨೨ : ಅಖಿಲ ಅಮ್ಮ ಕೊಡವ ಸಮಾಜದ ವತಿಯಿಂದ ತಾ.೨೭ ಹಾಗೂ ೨೮ರಂದು ೯ನೇ ವರ್ಷದ ಅಮ್ಮಕೊಡವ ಕ್ರಿಕೆಟ್ ನಮ್ಮೆ ಹಾತೂರು ಶಾಲಾ ಮೈದಾನದಲ್ಲಿ ನಡೆಯಲಿದೆ. ಅಚ್ಚಿಯಂಡ ಕುಟುಂಬಸ್ಥರು ಈ ಬಾರಿಯ ಕ್ರಿಕೆಟ್ ಕಪ್ ನಡೆಸುತ್ತಿದ್ದು ಈಗಾಗಲೇ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅಖಿಲ ಅಮ್ಮಕೊಡವ ಸಮಾಜದ ಕೊಡಗು ಜಿಲ್ಲಾ ಅಧ್ಯಕ್ಷ ಬಾನಂಡ ಪ್ರಥ್ಯು ತಿಳಿಸಿದ್ದಾರೆ.

ಗೋಣಿಕೊಪ್ಪಲುವಿನ ಅಮ್ಮಕೊಡವ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಅಮ್ಮಕೊಡವ ಸಮಾಜದ ೨೪ ತಂಡಗಳು ನೋಂದಾವಣೆ ಮಾಡಿವೆ. ಜನಾಂಗದ ಆಚಾರ ವಿಚಾರ, ಪದ್ದತಿ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಕ್ರೀಡೋತ್ಸವವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಸ್ತುತ ೯ನೇ ವರ್ಷದ ಕ್ರಿಕೆಟ್ ನಮ್ಮೆಯನ್ನು ಅಚ್ಚಿಯಂಡ ಕುಟುಂಬಸ್ಥರು ವಹಿಸಿಕೊಂಡಿದ್ದಾರೆ. ಇತ್ತೀಚೆಗೆ ಲಾಂಛನ ಬಿಡುಗಡೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿ ಸಲಾಗಿದೆ ಎಂದರು.

ಕ್ರೀಡೋತ್ಸವದ ಯಶಸ್ವಿಗೆ ಸರ್ಕಾರದ ವತಿಯಿಂದ ರೂ. ೫ ಲಕ್ಷ ಅನುದಾನವನ್ನು ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಈ ಹಿಂದೆಯೇ ಮಂಜೂರು ಮಾಡಿಸಿ ದ್ದಾರೆ. ಅಖಿಲ ಅಮ್ಮಕೊಡವ ಸಮಾಜ ಅಚ್ಚಿಯಂಡ ಕುಟುಂಬಸ್ಥರು, ಅಖಿಲ ಅಮ್ಮಕೊಡವ ವಿದ್ಯಾಭಿವೃದ್ದಿ ಸಂಘ,ಅಖಿಲ ಅಮ್ಮಕೊಡವ ಸಮಾಜ ಬೆಂಗಳೂರು, ಶ್ರೀ ಕೃಷ್ಣ ಅಮ್ಮಕೊಡವ ಸಂಘ ಕೋತೂರು, ಕಾವೇರಿ ಅಮ್ಮಕೊಡವ ಮಹಿಳಾ ಸಂಘ ಕೊಡಗು, ಕಂಗಳತ್‌ನಾಡ್ ಅಮ್ಮಕೊಡವ ಸಂಘ ಮಾಯಮುಡಿ, ಅನ್ನಪೂರ್ಣೇಶ್ವರಿ ಮಹಿಳಾ ಸಂಘ ಕೋತೂರು ಹಾಗೂ ಕಾವೇರಿ ಅಮ್ಮಕೊಡವ ಸಾಂಸ್ಕೃತಿಕ ಸಂಘ ಮಡಿಕೇರಿ, ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

೨ ದಿನಗಳ ಕಾಲ ನಡೆಯುವ ಕ್ರೀಡೋತ್ಸವದಲ್ಲಿ ಸಮುದಾಯ ಭಾಂದವರು ಸಾಂಪ್ರದಾಯಿಕ ಉಡುಪಿನೊಂದಿಗೆ

ತಾ. ೨೭ರಿಂದ ಹಾತೂರಿನಲ್ಲಿ ಅಚ್ಚಿಯಂಡ ಕಪ್ ಕ್ರಿಕೆಟ್

(ಮೊದಲ ಪುಟದಿಂದ) ಪಾಲ್ಗೊಂಡು ಸಾಮೂಹಿಕ ಮೆರವಣಿಗೆ ನಡೆಸಲಿದ್ದಾರೆ. ಅಚ್ಚಿಯಂಡ ಕುಟುಂಬದ ಅಧ್ಯಕ್ಷ ಬೋಸ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಅಚ್ಚಿಯಂಡ ಕೊಡಗು ಗಣೇಶ್, ಗೌರವ ಅಧ್ಯಕ್ಷರಾದ ಎ.ಕೆ.ಜನಾರ್ಧನ, ಎ.ಕೆ.ಮುತ್ತಣ್ಣಮಯ್ಯ ಭಾಗವಹಿಸಲಿದ್ದಾರೆ. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿಗಳಾದ ಸ್ವಾಮಿ ಪರಹಿತಾನಂದಜಿ ಮಹರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕ್ರೀಡಾಕೂಟವನ್ನು ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಮಂಡೇಪAಡ ಪಿ.ಸುಜಾ ಕುಶಾಲಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಅಚ್ಚಿಯಂಡ ಒಕ್ಕಡ ಅಧ್ಯಕ್ಷ ಬೋಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಮ್ಮಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಪುತ್ತಮನೆ ಅನಿಲ್ ಪ್ರಸಾದ್, ನಿರ್ದೇಶಕರಾದ ಪುತ್ತಾಮನೆ ವಿದ್ಯಾ ಜಗದೀಶ್, ಅಚ್ಚಿಯಂಡ ಮನೋಜ್, ಮನ್ನಕ್ಕಮನೆ ಶ್ವೇತಾ, ಹೆಮಚ್ಚಿಮನೆ ಆಶಿತ, ಅಚ್ಚಿಯಂಡ ಒಕ್ಕಡÀ ಕಾರ್ಯದರ್ಶಿ ಅಚ್ಚಿಯಂಡ ಅಜಿತ್, ವ್ಯವಸ್ಥಾಪಕರಾದ ಅಚ್ಚಿಯಂಡ ವೇಣುಗೋಪಾಲ್, ಸದಸ್ಯರಾದ ಅಚ್ಚಿಯಂಡ ಪುರಂದರ ಸೇರಿದಂತೆ ಅಚ್ಚಿಯಂಡ ಕುಟುಂಬಸ್ಥರು ಪಾಲ್ಗೊಂಡಿದ್ದರು.

ಅಚ್ಚಿಯಂಡ ಕುಟುಂಬದ ಕಾರ್ಯದರ್ಶಿ ಅಜಿತ್ ಸ್ವಾಗತಿಸಿ, ಪುತ್ತಾಮನೆ ವಿದ್ಯಾಜಗದೀಶ್ ಪ್ರಾರ್ಥಿಸಿ, ಅಮ್ಮಕೊಡವ ಸಮಾಜದ ಕಾರ್ಯದರ್ಶಿ ಪುತ್ತಾಮನೆ ಅನಿಲ್ ಪ್ರಸಾದ್ ವಂದಿಸಿದರು.