ನಾಪೋಕ್ಲು, ಏ. ೨೨: ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ಕುಂಡ್ಯೋಳAಡ ಕಪ್ ಹಾಕಿ ಕಾರ್ನಿವಲ್ ಅಂತಿಮ ಹಂತದತ್ತ ಸಾಗುತ್ತಿದೆ. ಇನ್ನು ಕೇವಲ ಮೂರು ದಿನಗಳ ಪಂದ್ಯಾವಳಿ ಮಾತ್ರ ಬಾಕಿ ಉಳಿದಿದ್ದು, ತಾ. ೨೭ರ ಶನಿವಾರದಂದು ರೋಚಕ ಸೆಮಿಫೈನಲ್ ಪಂದ್ಯಾಟ ಜರುಗಲಿದೆ.

ಸೆಮಿಫೈನಲ್ ದಿನವನ್ನೂ ಆಕರ್ಷಣೀಯವಾಗಿ ನಡೆಸಲು ಆಯೋಜಕರು ಮುಂದಾಗಿದ್ದು, ಆ ದಿನದಂದು ವೈವಿಧ್ಯಮಯ ಕಾರ್ಯಕ್ರಮಗಳನ್ನು ಈ ಬಾರಿ ಹಮ್ಮಿಕೊಳ್ಳಲಾಗಿದೆ.

ಅಂತರರಾಷ್ಟಿçÃಯ ಹಾಕಿ ಆಟಗಾರರ- ಸಾಧಕರ ಸ್ನೇಹ ಸಮ್ಮಿಲನ ಗೌರವ ಸಲ್ಲಿಕೆ, ಕೊಡವ ಫ್ಯಾಮಿಲಿ ರನ್, ಕೊಂಬೊಮೀಸೆರ ಬಂಬೊ.. ಬೋಜಿ ಜಡೆರ ಭೋಜಕ್ಕ ಸ್ಪರ್ಧೆ, ಸನ್ಮಾನ ಕಾರ್ಯಕ್ರಮಗಳೊಂದಿಗೆ ಸೆಮಿಫೈನಲ್ ಪಂದ್ಯಾವಳಿ ತಾ. ೨೭ರ ಆಕರ್ಷಣೆಯಾಗಿದೆ.

ಕೊಡವ ಫ್ಯಾಮಿಲಿ ರನ್

ತಾ. ೨೭ ರಂದು ಬೆಳಿಗ್ಗೆ ೭ ಗಂಟೆಗೆ ಕಕ್ಕಬ್ಬೆಯಿಂದ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ತನಕ ೧೦ ಕಿ.ಮೀ (೨.೫x೪) ಫ್ಯಾಮಿಲಿ ರಿಲೇ ರನ್ ಈ ಬಾರಿಯ ವಿಶೇಷತೆಗಳಲ್ಲಿ ಒಂದಾಗಿದೆ. ಒಂದು ಕುಟುಂಬದಿAದ ನಾಲ್ಕು ಸ್ಪರ್ಧಿಗಳು

(ಮೊದಲ ಪುಟದಿಂದ) ತಲಾ ೨.೫ ಕಿ.ಮೀ. ನಂತೆ ಒಟ್ಟು ೧೦ ಕಿ.ಮೀ. ಅಂತರ ಕ್ರಮಿಸಬೇಕಿದೆ. ನಾಲ್ವರು ಸ್ಪರ್ಧಿಗಳ ಪೈಕಿ ಕನಿಷ್ಠ ಒಬ್ಬರು ಮಹಿಳೆ ಅಥವಾ ಹೆಚ್ಚಿನ ಮಂದಿ ಇರಬೇಕು.

ಇದೂ ಕೂಡ ಕುಟುಂಬವಾರು ಸ್ಪರ್ಧೆಯಾಗಿದ್ದು, ಮೊದಲ ಸ್ಥಾನ ಪಡೆಯುವ ಕುಟುಂಬಕ್ಕೆ ರೂ. ೫೦ ಸಾವಿರ ನಗದು, ದ್ವಿತೀಯ ಸ್ಥಾನಕ್ಕೆ ರೂ. ೩೦ ಸಾವಿರ ಹಾಗೂ ತೃತೀಯ ಸ್ಥಾನಕ್ಕೆ ರೂ. ೨೦ ಸಾವಿರ ನಗದು ಬಹುಮಾನವಿದೆ.

ಅಂತರರಾಷ್ಟಿçÃಯ ಆಟಗಾರರ ಸ್ನೇಹ ಮಿಲನ

ಇದೇ ಪ್ರಥಮ ಬಾರಿಗೆ ಕೌಟುಂಬಿಕ ಹಾಕಿ ಹಬ್ಬದಲ್ಲಿ ರಾಜ್ಯ ಹಾಗೂ ಅಂತರರಾಷ್ಟಿçÃಯ ಆಟಗಾರರು, ತರಬೇತಿದಾರರು, ವೀಕ್ಷಕ ವಿವರಣೆಗಾರರು ಹಾಗೂ ತೀರ್ಪುಗಾರರ ಸ್ನೇಹ ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ತಾ.೨೭ ರಂದು ಸೆಮಿಫೈನಲ್ ಪಂದ್ಯಾವಳಿ ನಡೆಯಲಿದ್ದು, ಬೆಳಿಗ್ಗೆ ೧೦ ಗಂಟೆಗೆ ಮೈದಾನದ ಮುಖ್ಯದ್ವಾರದಲ್ಲಿರುವ ಐನ್‌ಮನೆಗೆ ಆಗಮಿಸಿ ಎಲ್ಲರೊಡನೆ "ಛಾಯಾಚಿತ್ರ ಕಾರ್ಯಕ್ರಮವನ್ನು" (Phoಣo sessioಟಿ) ನಡೆಸಲಾಗುತ್ತದೆ.

ಕುಂಡ್ಯೋಳAಡ ಕುಟುಂಬಸ್ಥರು ಹಾಗೂ ಕೊಡವ ಹಾಕಿ ಅಕಾಡೆಮಿಯ ಸದಸ್ಯರು ಸೇರಿ, ಎಲ್ಲರನ್ನು ಕೊಡಗಿನ ಸಾಂಪ್ರದಾಯಿಕ ಪದ್ಧತಿಯಂತೆ "ದುಡಿಪಾಟ್"ನೊಂದಿಗೆ ಮುಖ್ಯ ವೇದಿಕೆಗೆ ಕರೆಯಲಾಗುತ್ತದೆ. ಪ್ರಥಮ ಸೆಮಿಫೈನಲ್ ಉದ್ಘಾಟನೆಯನ್ನು ಎಲ್ಲರೂ ಸೇರಿ ನೆರವೇರಿಸಲಿದ್ದಾರೆ. ಪ್ರಥಮ ಸೆಮಿಫೈನಲ್ ಆದ ನಂತರ ಎಲ್ಲರನ್ನು ಮೈದಾನದ ಒಳಗೆ ಒಂದು ಸುತ್ತು ಪ್ರೇಕ್ಷಕರಿಗೆ ಪರಿಚಯಿಸುತ್ತಾ, ಆಟಗಾರರಿಗೆ ಗೌರವ ಸಲ್ಲಿಸಲಾಗುತ್ತದೆ.

ಅತಿಥಿಗಳಾಗಿ ಆಗಮಿಸಲಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡೀರ ಎಂ. ಪೂಣಚ್ಚ ಅವರು ಎಲ್ಲಾ ಆಟಗಾರರಿಗೆ ನೆನಪಿನ ಕಾಣಿಕೆ ಹಾಗೂ ಗೌರವ ಸಲ್ಲಿಸಲಿದ್ದಾರೆ. ಇದು ಇದೇ ಪ್ರಥಮ ಬಾರಿಗೆ ಆಟಗಾರರಿಗೆ ಕಾವೇರಿ ತಾಯಿಯ ಮಡಿಲಲ್ಲಿ ಸಿಗುತ್ತಿರುವ ಅತೀ ದೊಡ್ಡ ಗೌರವ ಎಂದೇ ಪರಿಗಣಿಸಲಾಗುವುದು.

೨ನೇ ಸೆಮಿಫೈನಲ್

೨ನೇ ಸೆಮಿಫೈನಲ್‌ಗೆ ಡಾ.ಕಲಿಯಾಟಂಡ ಚಿಣ್ಣಪ್ಪ (ಹಾಕಿಯಲ್ಲಿ ಪ್ರಥಮ ಡಾಕ್ಟರೇಟ್ ಮಾಡಿದವರು) ಹಾಗೂ ಮೇಜರ್ ಜನರಲ್ ಬಾಚಮಂಡ ಎ. ಕಾರ್ಯಪ್ಪ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಉದ್ದೇಶ

ಕೊಡಗಿನ ಹಾಕಿ ಕಲಿಗಳು ಬಹಳಷ್ಟು ಕೊಡಗಿನ ಹೆಸರನ್ನು ದೇಶ ವಿದೇಶಗಳಲ್ಲಿ ಸಾರಿದ್ದಾರೆ. ೧೯೯೭ರಿಂದ ತೀರ್ಪುಗಾರರು ಇದಕ್ಕೆ ಶ್ರಮಿಸಿದ್ದಾರೆ. ಕೊಡಗಿನ ಒಳ್ಳೆಯ ಆಟಗಾರರ ಹೆಸರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ಅಷ್ಟೇ. ಆದರೆ ಅವರನ್ನೆಲ್ಲ ನೋಡುವ ಭಾಗ್ಯ ಕ್ರೀಡಾಭಿಮಾನಿಗಳಿಗೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಭಾರತ ಕಂಡ ಅದ್ಭುತ ಆಟಗಾರ ಕೊಡಂದೇರ ಕುಶ, ಅಂತರರಾಷ್ಟಿçÃಯ ಮಹಿಳಾ ಗೋಲ್ ಕೀಪರ್ ನಿಲನ್, ಅಂತರರಾಷ್ಟಿçÃಯ ತೀರ್ಪುಗಾರರಾದ ರೋಹಿಣಿ, ಸುಬ್ಬಯ್ಯ ಹಾಗೂ ಪೂಣಚ್ಚ ಸೇರಿ ಇನ್ನು ಕೆಲವರು ಆಗಮಿಸುತ್ತಿದ್ದಾರೆ.

ಅಂದಾಜು ೩೦ಕ್ಕೂ ಹೆಚ್ಚು ಕ್ರೀಡಾಪಟುಗಳು ಸೇರುವ ನಿರೀಕ್ಷೆಯಿದೆ. ಇದಕ್ಕೆ ಎಲ್ಲಾ ಕ್ರೀಡಾಭಿಮಾನಿಗಳು ಸಹಕರಿಸಬೇಕು. ಎಲ್ಲರೂ ಸೆಮಿಫೈನಲ್ ದಿನ ಆಗಮಿಸುವಂತೆ ಇದರ ಉಸ್ತುವಾರಿ ವಹಿಸಿರುವ ಚೆಪ್ಪುಡೀರ ಎ. ಕಾರ್ಯಪ್ಪ ಕೋರಿದ್ದಾರೆ.