ಗೋಣಿಕೊಪ್ಪ ವರದಿ, ಏ. ೨೨: ಕೊಡವ ಕ್ರಿಕೆಟ್ ಅಕಾಡೆಮಿ ಮತ್ತು ಅರಮಣಮಾಡ ಒಕ್ಕ ಸಹಯೋಗದಲ್ಲಿ ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ೧೫ ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿ ಮಹಿಳೆಯರ ೪ ತಂಡಗಳು ಗೆಲುವು ಸಾಧಿಸಿವೆ.
ಮಹಿಳಾ ವಿಭಾಗ : ನಾಟೋಳಂಡಕ್ಕೆ ಕೊಟ್ಟಂಗಡ ವಿರುದ್ದ ೧೦ ವಿಕೆಟ್ ಜಯ ಲಭಿಸಿತು. ಕೊಟ್ಟಂಗಡ ನಿಗದಿತ ೫ ಒವರ್ಗಳಲ್ಲಿ ೫ ವಿಕೆಟ್ಗೆ ೧೫ ರನ್ ದಾಖಲಿಸಿತು. ಇಂಚ್ ೧೪ ರನ್ ಗಳಿಸಿದರು. ನಾಟೋಳಂಡ ವಿಕೆಟ್ ನಷ್ಟವಿಲ್ಲದೆ ಗುರಿ ಮುಟ್ಟಿತು. ನಾಟೋಳಂಡ ರಚನ್ ೨ ವಿಕೆಟ್ ಪಡೆದರು. ಕೇಲೇಟೀರ ತಂಡವು ಚೆಕ್ಕೇರ ತಂಡವನ್ನು ೯ ವಿಕೆಟ್ಗಳಿಂದ ಮಣಿಸಿತು. ಚೆಕ್ಕೇರ ೪ ವಿಕೆಟ್ಗೆ ೩೧ ರನ್, ಕೇಲೇಟಿರ ೧ ವಿಕೆಟ್ಗೆ ೩೨ ರನ್ ದಾಖಲಿಸಿತು. ಹರ್ಷಿತಾ ೧ ವಿಕೆಟ್, ಅಂಜು ೧೩ ರನ್, ಚೆಕ್ಕೇರ ಸಿಂಧು ೧೨ ರನ್ ಗಳಿಸಿದರು. ಚೇಂದೀರ ತಂಡಕ್ಕೆ ಆದೇಂಗಡ ವಿರುದ್ದ ೧೦ ವಿಕೆಟ್ಗಳ ಗೆಲುವು ಲಭಿಸಿತು. ಆದೇಂಗಡ ೪ ವಿಕೆಟ್ಗೆ ೨೮ ರನ್, ಚೇಂದೀರ ೩೨ ರನ್ ಬಾರಿಸಿತು. ಚೇಂದೀರ ಪೂನಂ ೨ ವಿಕೆಟ್, ೧೩ ರನ್ ದಾಖಲಿಸಿದರು. ಆದೇಂಗಡ ಅನುಷಾ ೬ ರನ್ ಗಳಿಸಿದರು.
ಪುರುಷರ ವಿಭಾಗ ; ಚಿಂಡಮಾಡ ತಂಡವು ಕುಲ್ಲಚಂಡ ತಂಡವನ್ನು ೧೦೨ ರನ್ಗಳಿಂದ ಮಣಿಸಿತು. ನಿಗದಿತ ೮ ಓವರ್ಗಳಲ್ಲಿ ಚಿಂಡಮಾಡ ರಕ್ಷಿತ್ ಅವರ ಅಮೋಘ ೭೫ ರನ್ ಕಾಣಿಕೆಯಿಂದ ೩ ವಿಕೆಟ್ ಕಳೆದುಕೊಂಡು ೧೪೧ ರನ್ ಗಳಿಸಿತು. ಕುಲ್ಲಚಂಡ ೯ ವಿಕೆಟ್ ಕಳೆದುಕೊಂಡು ಕೇವಲ ೩೯ ರನ್ ದಾಖಲಿಸಿತು. ಚಿಂಡಮಾಡ ಸಚಿನ್ ಮೊಣ್ಣಪ್ಪ ೩ ವಿಕೆಟ್, ಮೋಕ್ಷ್ ೧ ವಿಕೆಟ್ ಪಡೆದರು.
ಮಾಚೇಟೀರಕ್ಕೆ ಕಂಜಿತAಡ ವಿರುದ್ದ ೯ ವಿಕೆಟ್ ಜಯ ದೊರೆಯಿತು. ಕಂಜಿತAಡ ೩ ವಿಕೆಟ್ ನಷ್ಟಕ್ಕೆ ೪೨ ರನ್, ಮಾಚೇಟೀರ ೧ ವಿಕೆಟ್ ನಷ್ಟಕ್ಕೆ ೪೭ ರನ್ ದಾಖಲಿಸಿತು. ಕಂಜಿತAಡ ರಕ್ಷತ್ ೧೫, ಮಾಚೇಟೀರ ಭರತ್ ೩೨ ರನ್ ದಾಖಲಿಸಿದರು.
ನಾಟೋಳಂಡ ತಂಡವು ಕಾಳಚಂಡ ತಂಡವನ್ನು ೧೫ ರನ್ಗಳಿಂದ ಸೋಲಿಸಿತು. ನಾಟೋಳಂಡ ೫ ವಿಕೆಟ್ ನಷ್ಟಕ್ಕೆ ೭೮ ರನ್, ಕಾಳಚಂಡ ೪ ವಿಕೆಟ್ಗೆ ೬೩ ರನ್ ಗಳಿಸಿತು. ನಾಟೋಳಂಡ ಕೃತನ್ ೩೫ ರನ್, ಕಾಳಚಂಡ ಶೋಧನ್ ೨೩ ರನ್ ದಾಖಲಿಸಿದರು.
ಆಪಟ್ಟೀರ ತಂಡ ಮಿನ್ನಂಡ ವಿರುದ್ದ ೯ ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಮಿನ್ನಂಡ ೪ ವಿಕೆಟ್ ನಷ್ಟಕ್ಕೆ ೮೦ ರನ್, ಆಪಟ್ಟೀರ ೧ ವಿಕೆಟ್ ಕಳೆದುಕೊಂಡು ೬.೧ ಓವರ್ಗಳಲ್ಲಿ ಗುರಿ ಮುಟ್ಟಿತು. ಆಪಟ್ಟೀರ ಮಂದಣ್ಣ ೨ ವಿಕೆಟ್ ಪಡೆದು ೩೪ ರನ್, ನಿತಿನ್ ೩೨ ರನ್, ಮಿನ್ನಂಡ ಪೊನ್ನಣ್ಣ ೪೬ ರನ್ ಸಿಡಿಸಿದರು.
ಬೊಳಕಾರಂಡ ತಂಡಕ್ಕೆ ಬೊಟ್ಟಂಗಡ ವಿರುದ್ದ ೧೩ ರನ್ಗಳ ಗೆಲುವು ದೊರೆಯಿತು. ಬೊಳಕಾರಂಡ ೪ ವಿಕೆಟ್ಗೆ ೬೫ ರನ್ ದಾಖಲಿಸಿತು. ಬೊಟ್ಟಂಗಡ ೫೨ ರನ್ಗಳಿಸಿ ಸರ್ವ ಪತನಗೊಂಡಿತು. ಬೊಟ್ಟಂಗಡ ವಿಶು ೧ ವಿಕೆಟ್, ಕರಣ್ ೧೯ ರನ್, ಬೊಳಕಾರಂಡ ದರ್ಶನ್ ಮಾಚಯ್ಯ ೩೯ ರನ್ ಗಳಿಸಿ, ೩ ವಿಕೆಟ್ ಕಿತ್ತರು.
ಕೋದೇಂಗಡ ತಂಡಕ್ಕೆ ಬಯವಂಡ ವಿರುದ್ದ ೯ ವಿಕೆಟ್ ಜಯ ಲಭಿಸಿತು. ಬಯವಂಡ ೭ ವಿಕೆಟ್ಗೆ ೧೭ ರನ್, ಕೋದೇಂಗಡ ೧ ವಿಕೆಟ್ಗೆ ೨೧ ರನ್ ದಾಖಲಿಸಿತು. ಕೋದೇಂಗಡ ನಿತಿನ್ ೩ ವಿಕೆಟ್, ದಿವಿನ್ ೧೪ ರನ್ ಗಳಿಸಿದರು.
ಕಾಳಿಮಾಡ ತಂಡಕ್ಕೆ ಸರ್ಕಂಡ ವಿರುದ್ದ ೯ ವಿಕೆಟ್ ಜಯ ದೊರೆಯಿತು. ಸರ್ಕಂಡ ೭ ವಿಕೆಟ್ಗೆ ೪೧ ರನ್, ಕಾಳಿಮಾಡ ೧ ವಿಕೆಟ್ ನಷ್ಟಕ್ಕೆ ೪೪ ರನ್ ಗಳಿಸಿತು. ಸರ್ಕಂಡ ಬಬಿನ್ ೨೩ ರನ್, ಕಾಳಿಮಾಡ ತಿಮ್ಮಯ್ಯ ೧೬ ರನ್ ದಾಖಲಿಸಿದರು.
ಚಂಗುಲAಡ ತಂಡಕ್ಕೆ ಮಂಡೀರ ವಿರುದ್ದ ೧೬ ರನ್ಗಳ ಜಯ ದೊರೆಯಿತು. ಚಂಗುಲAಡ ೫ ವಿಕೆಟ್ಗೆ ೧೪೫ ರನ್, ಮಂಡೀರ ೪ ವಿಕೆಟ್ಗೆ ೧೨೦ ರನ್ ಗಳಿಸಿತು. ಚಂಗುಲAಡ ಅಜಿತ್ ಅಯ್ಯಪ್ಪ ೩೪ ರನ್, ಮಂಡೀರ ಕಾಶಿ ೩೦ ರನ್ ದಾಖಲಿಸಿದರು.
ತಂಬುಕುತ್ತೀರ ತಂಡಕ್ಕೆ ಮಡೆಯಂಡ ವಿರುದ್ದ ೮೫ ರನ್ಗಳ ಅಮೋಘ ಗೆಲುವು ದೊರೆಯಿತು. ತಂಬುಕುತ್ತಿರ ಸುಖೇಶ್ ೪೮ ರನ್, ಅನಿಲ್ ೭೦ ರನ್ ಕಾಣಿಕೆಯಿಂದ ೧ ವಿಕೆಟ್ ನಷ್ಟಕ್ಕೆ ೧೬೦ ರನ್ಗಳ ಗುರಿ ನೀಡುವಂತಾಯಿತು. ಮಡೆಯಂಡ ೫ ವಿಕೆಟ್ಗೆ ೬೫ ರನ್ ದಾಖಲಿಸಿತು. ಮಡೆಯಂಡ ಸುಜನ್ ೨೫ ರನ್ ಗಳಿಸಿದರು. ತಂಬುಕುತ್ತೀರ ಶರತ್ ೨ ವಿಕೆಟ್ ಪಡೆದರು.
ಮುಕ್ಕಾಟೀರ ತಂಡದ ಗೈರಿನಿಂದಾಗಿ ಚಿರಿಯಪಂಡ ಚೊಟ್ಟೆಯಂಡ ಗೈರಿನಿಂದಾಗಿ ಪಂದ್ಯAಡ, ಮಹಿಳೆಯರಲ್ಲಿ ಅಣ್ಣಳಮಾಡ (ಬಿರುನಾಣಿ) ಗೈರಿನಿಂದ ಮಾಪಣಮಾಡ ಮುಂದಿನ ಸುತ್ತು ಪ್ರವೇಶಿಸಿತು.
ಪಂದ್ಯ ಶ್ರೇಷ್ಠರು : ಕುಲ್ಲಚಂಡ ಆಕಾಶ್, ಕಂಜಿತAಡ ಚರಣ್, ಕಾಳಚಂಡ ಶೋಧನ್, ಮಿನ್ನಂಡ ಪೊನ್ನಣ್ಣ, ಬೊಟ್ಟಂಗಡ ಕರಣ್, ಬಯವಂಡ ಅಯ್ಯಪ್ಪ, ಸರ್ಕಂಡ ಬಬಿನ್, ಮಂಡೀರ ಕಾಶಿ, ಮಡೆಯಂಡ ಸುಜನ್, ಕೊಟ್ಟಂಗಡ ಇಂಚ್, ಆದೇಂಗಡ ಅನುಷಾ, ಚೆಕ್ಕೇರ ಸಿಂದು.