ಚೆಟ್ಟಳ್ಳಿ, ಏ. ೨೨: ಲೋಕಸಭಾ ಚುನಾವಣೆಗೆ ಸಂಬAಧಿಸಿದAತೆ ಚುನಾವಣಾಧಿಕಾರಿಗಳ ಕಾರ್ಯಾಲಯದಿಂದ ತರಬೇತಿ ನಡೆಯುತ್ತಿದ್ದು ಸಹಕಾರ ಸಂಘಗಳ ಎಲ್ಲಾ ಸಿಬ್ಬಂದಿಗಳನ್ನು ನಿರಂತರ ತರಬೇತಿಗೆ ಬಳಸಿಕೊಳ್ಳುವುದು ಸರಿಯಲ್ಲವೆಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಶನಿವಾರ ಸಹಕಾರ ಸಂಘದ ಎಲ್ಲಾ ಸಿಬ್ಬಂದಿಗಳಿಗೆ ತರಬೇತಿ ನೀಡಿದ ಪರಿಣಾಮ ಸಂಘವನ್ನು ಮುಚ್ಚಲಾಗಿತ್ತು. ಭಾನುವಾರ ವಾರದ ರಜಾದಿನ. ಸೋಮವಾರ ಮತ್ತೊಮ್ಮೆ ಸಹಕಾರ ಸಂಘದ ಸಿಬ್ಬಂದಿಗಳಿಗೆಲ್ಲ ತರಬೇತಿ ನೀಡಲು ಆದೇಶಿಸಿದ್ದು, ಸಂಘವನ್ನು ಕಾರ್ಯನಿರ್ವಹಿಸಲು ಸಿಬ್ಬಂದಿಗಳಿಲ್ಲದೆ ಸಂಘವನ್ನು ಮುಚ್ಚುವ ಪರಿಸ್ಥಿತಿಯಾಗಿದೆ. ಚುನಾವಣೆ ಸಂಘದ ಸಿಬ್ಬಂದಿಗಳನ್ನು ನೇಮಿಸಿರುವುದರಿಂದ ಚುನಾವಣೆಯ ಎರಡು ದಿನ ಸಹಕಾರ ಸಂಘವನ್ನು ಮುಚ್ಚಲೇಬೇಕು. ಆದರೆ ಸಹಕಾರ ಸಂಘದಲ್ಲಿ ರೈತರಿಗೆ ಕೆಸಿಸಿ ಸಾಲ ಮರುಪಾವತಿ ಹಾಗೂ ಕೃಷಿಸಾಲ ನೀಡುವ ಈ ಸಮಯದಲ್ಲಿ ಚುನಾವಣಾ ಕಾರ್ಯಕ್ಕೆ ಚೆಟ್ಟಳ್ಳಿ ಸಹಕಾರ ಸಂಘದ ಎಲ್ಲಾ ಸಿಬ್ಬಂದಿಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ನಿರಂತರ ತರಬೇತಿಗೆ ಹಾಜರಾಗಲು ಸೂಚಿಸಿರುವುದರಿಂದ ಸಹಕಾರ ಸಂಘ ಕಾರ್ಯನಿರ್ವಹಿಸಲು ತೊಂದರೆಯಾಗುತಿರುವ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಲಾಗಿದೆ. ಚೆಟ್ಟಳ್ಳಿ ಸಹಕಾರ ಸಂಘದ ಶೇ.೫೦ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿಕೊಂಡು ಉಳಿದ ಸಿಬ್ಬಂದಿಗಳನ್ನು ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕೆಂದು ಪತ್ರ ಬರೆದರೂ ಪ್ರಯೋಜನವಾಗಿಲ್ಲವೆಂದು ಮಣಿ ಉತ್ತಪ್ಪ ಆರೋಪಿಸಿದ್ದಾರೆ.